×
Ad

ಮರಗಳನ್ನೇ ಮಕ್ಕಳಾಗಿಸಿಕೊಂಡ ತಿಮ್ಮಕ್ಕ ಬದುಕೆ ಸ್ಪೂರ್ತಿ: ನರೇಂದ್ರ ಕುಮಾರ್

ಕೋಟದಲ್ಲಿ ಸಾಲುಮರದ ತಿಮ್ಮಕ್ಕಗೆ ನುಡಿನಮನ

Update: 2025-11-16 00:11 IST

ಕೋಟ: ಪ್ರಕೃತಿಯನ್ನು ಪ್ರೀತಿಸಿ ಅಲ್ಲಿನ ಮರಗಳನ್ನೆ ಮಕ್ಕಳಾಗಿಸಿ ಕೊಂಡು ಮನುಕುಲಕ್ಕೆ ಸ್ಪೂರ್ತಿಯ ಚಲುಮೆಯಾದ ಸಾಲು ಮರದ ತಿಮ್ಮಕ್ಕನ ಬದುಕೆ ಪ್ರಸ್ತುತ ಜನಾಂಗಕ್ಕೆ ಆದರ್ಶವಾಗಬೇಕು ಎಂದು ಸಾಹಿತಿ, ಶಿಕ್ಷಕ ನರೇಂದ್ರ ಕುಮಾರ್ ಕೋಟ ಹೇಳಿದ್ದಾರೆ.

ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಶುಕ್ರವಾರ ಅಗಲಿದ ಸಾಲುಮರದ ತಿಮ್ಮಕ್ಕನಿಗೆ ನುಡಿನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ತಿಮ್ಮಕ್ಕನವರು ತಮ್ಮ ಸುಧೀರ್ಘ ಜೀವಿತ ಅವಧಿಯಲ್ಲಿ ಮರೆಯ ಲಾಗದ ಅಧ್ಯಾಯವನ್ನು ಸೃಷ್ಠಿಸಿದ್ದಾರೆ. ಇಂತಹ ಮಹಾನ್ ಕಾರ್ಯ ಇಂದಿನ ಯುವ ಜನಾಂಗಕ್ಕೆ ದಾರಿದೀಪವಾಗಬೇಕಾಗಿದೆ. ಪ್ರಸ್ತುತ ಪಂಚವರ್ಣ ಸಂಘಟನೆ ಅದೇ ದಾರಿಯಲ್ಲಿರುವುದು ತಿಮ್ಮಕ್ಕನವರಿಗೆ ಸಲ್ಲಿಸುವ ದೊಡ್ಡ ಸೇವೆಯಾಗಿದೆ ಎಂದರು.

ಕೋಟದ ರೈತಧ್ವನಿ ಸಂಘದ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ ತಿಮ್ಮಕ್ಕನ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಭನಮನ ಸಲ್ಲಿಸಿದರು. ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ, ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಗೌರವಾಧ್ಯಕ್ಷ ಕುಸುಮಾ ದೇವಾಡಿಗ ಉಪಸ್ಥಿತರಿದ್ದರು. ಮಹಿಳಾ ಮಂಡಲದ ಕಲಾವತಿ ಅಶೋಕ್ ಸ್ವಾಗತಿಸಿ ನಿರೂಪಿಸಿದರು. ಪಂಚವರ್ಣದ ಮಹೇಶ್ ಹವಲ್ದಾರ್ ಬೆಳಗಾ ವಂದಿಸಿದರು. ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News