×
Ad

ಉಡುಪಿ: ಒಂದು ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ

Update: 2025-01-05 20:14 IST

ಉಡುಪಿ: ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ವತಿಯಿಂದ ಉಡುಪಿ ಬನ್ನಂಜೆ ನಾರಾಯಣಗುರು ಸಭಾಭವನದಲ್ಲಿ ಶನಿವಾರ ಒಂದು ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿದರು. ಶ್ರೀರಾಮ್ ಫೈನಾನ್ಸ್‌ನ ಝೋನಲ್ ಬಿಸಿನೆಸ್ ಹೆಡ್ ಶರಶ್ಚಂದ್ರ ಭಟ್ ಕಾಕುಂಜೆ ಅಧ್ಯಕ್ಷತೆ ವಹಿಸಿದ್ದರು.

ಉದ್ಯಮಿ ಪ್ರಸಾದ್‌ರಾಜ್ ಕಾಂಚನ್, ಉಡುಪಿ ತಹಶೀಲ್ದಾರ್ ಪಿ.ಆರ್. ಗುರುರಾಜ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಪ್ರಾಧ್ಯಾಪಕಿ ಡಾ.ನಿಕೇತನ, ಹೆಗ್ಡೆ ಮೋಟಾರ್ ಟ್ರಾನ್ಸ್‌ಪೋರ್ಟ್ ಮಾಲಕ ಗಣನಾಥ ಹೆಗ್ಡೆ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್, ಬಿಲ್ಲವ ಮುಖಂಡ ಮಾಧವ ಬನ್ನಂಜೆ, ಶ್ರೀರಾಮ್ ಫೈನಾನ್ಸ್‌ನ ಕಾನೂನು ಸಲಹೆಗಾರ ಉಲ್ಲಾಸ್ ನಾಯಕ್, ಫೈನಾನ್ಸ್‌ನ ನಾಗರಾಜ್ ಬಿ., ಗಣಪತಿ ನಾಯಕ್, ದಿನೇಶ್ ನಾಯ್ಕ್, ಸುರೇಶ್ ಶೆಟ್ಟಿ, ಉಡುಪಿ ಶಾಖಾಧಿಕಾರಿ ಸಂದೀಪ್, ಕಾರ್ಕಳ ಶಾಖಾಧಿಕಾರಿ ವಿಕೇಶ್ ಸುವರ್ಣ, ಕುಂದಾಪುರ ಶಾಖಾಧಿಕಾರಿ ರಘು ಮಡಿವಾಳ ಉಪಸ್ಥಿತರಿದ್ದರು.

ಶ್ರೀರಾಮ್ ಸಂಸ್ಥೆಯ ವಿಭಾಗೀಯ ಅಧಿಕಾರಿ ಸದಾಶಿವ ಅಮೀನ್ ಕಟ್ಟೆಗುಡ್ಡೆ ಸ್ವಾಗತಿಸಿದರು. ದಯಾನಂದ ಕರ್ಕೆರ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News