×
Ad

ಶೀರೂರು ಪರ್ಯಾಯ ಭಕ್ತರ ಪರ್ಯಾಯ: ಡಾ.ಸರಳತ್ತಾಯ

Update: 2025-10-11 18:07 IST

ಉಡುಪಿ: ಭಗವಾನ್ ಕೃಷ್ಣ ಎಲ್ಲರ ಮನೆ ಮನದ ಮಗು. ಎಲ್ಲರಿಗೂ ಆಪ್ತ. ಆತನಿಗೆ ಸಮರ್ಪಿಸುವ ಎಲ್ಲಾ ಕಾಣಿಕೆ ಎಲ್ಲೂ ಹೋಗದೆ ಮನೆಯ ಮಗುವಿನ ಏಳ್ಗೆಗೆ ಕಾರಣವಾಗುತ್ತದೆ. ಹೊರೆಕಾಣಿಕೆಯೂ ಇದಕ್ಕೆ ಹೊರತಾಗಿಲ್ಲ. ಶೀರೂರು ಪರ್ಯಾಯ ಅದು ಭಕ್ತರ ಪರ್ಯಾಯ ಎಂದು ಭಾವೀ ಪರ್ಯಾಯ ಮಠದ ದಿವಾನ ಡಾ.ಉದಯಕುಮಾರ ಸರಳತ್ತಾಯ ಹೇಳಿದ್ದಾರೆ.

ಪರ್ಯಾಯ ಪೂರ್ವಭಾವಿ ಹೊರಕಾಣಿಕೆ-ಸಾಂಸ್ಕೃತಿಕ ಹಾಗೂ ಪ್ರಚಾರ ಕುರಿತ ವಿಶೇಷ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಉದಯ ಕಿಚನ್ ಮಾಲಕ ರಮೇಶ ಬಂಗೇರ, ಪರ್ಯಾಯ ಸ್ವಾಗತ ಸಮಿತಿಯ ಸಂಚಾಲ ಸುಪ್ರಸಾದ್ ಶೆಟ್ಟಿ, ಮಟ್ಟಾರ್ ರತ್ನಾಕರ ಹೆಗ್ಡೆ, ರಮೇಶ್ ಕಾಂಚನ್, ಜಯಪ್ರಕಾಶ ಕೆದ್ಲಾಯ, ಗೋಪಾಲಕೃಷ್ಣ ಅಸ್ರಣ್ಣ ಮಾತ ನಾಡಿದರು.

ಅಧ್ಕಕ್ಷತೆಯನ್ನು ಶಾಸಕ ಯಶಪಾಲ್ ಸುವರ್ಣ ವಹಿಸಿದ್ದರು. ಸಭೆಯಲ್ಲಿ ಹೊರೆಕಾಣಿಕೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಚಾರ ಸಿದ್ಧತೆಯ ಕುರಿತು ಚರ್ಚಿಸಲಾಯಿತು. ಅಶ್ವತ್ಥ ಭಾರದ್ವಾಜ್ ಸ್ವಾಗತಿಸಿ, ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News