×
Ad

ಶಿರ್ವ: ಬಡ ಮಹಿಳೆಗೆ ಮನೆ ನಿರ್ಮಾಣಕ್ಕೆ ಶಿಲಾನ್ಯಾಸ

Update: 2023-10-20 18:38 IST

ಶಿರ್ವ, ಅ.20: ಶಿರ್ವ ಗ್ರಾಮೀಣ ಕಾಂಗ್ರೆಸ್ ನೇತೃತ್ವದಲ್ಲಿ ಶಿರ್ವ ಗ್ರಾಮ ಪಂಚಾಯತ್ ಹಾಗೂ ಇತರ ಸಂಘಟನೆಗಳ ಸಹಕಾರದೊಂದಿಗೆ ಬಡ ಕುಟುಂಬಕ್ಕೆ ನಿರ್ಮಿಸಿಕೊಡಲಾಗುತ್ತಿರುವ ನೂತನ ಮನೆಗೆ ಗುರುವಾರ ಶಿಲ್ಯಾನ್ಯಾಸ ನೆರವೇರಿಸಲಾಯಿತು.

ಶಿರ್ವ ಗ್ರಾಪಂ ವ್ಯಾಪ್ತಿಯ ಮುಟ್ಲುಪಾಡಿ ವಾರ್ಡ್‌ನ ಕೆರುಮನೆ ನಿವಾಸಿ ದಿ.ವಾಸು ಪೂಜಾರಿ ಅವರ ಪತ್ನಿ ಗುಲಾಬಿ ಪೂಜಾರ್ತಿ ಇವರಿಗೆ ನಿರ್ಮಿಸಿ ಕೊಡುವ ಮನೆಗೆ ಶಿರ್ವ ಗ್ರಾಪಂ ಅಧ್ಯಕ್ಷೆ ಸವಿತಾ ರಾಜೇಶ್ ಹಾಗೂ ಕಾಪು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಇಗ್ನೇಷಿಯಸ್ ಡಿಸೋಜ ಶಿಲಾನ್ಯಾಸ ನೆರವೇರಿಸಿದರು. ಶಿರ್ವ ವಿಷ್ಣುಮೂರ್ತಿ ದೇವಳದ ಅರ್ಚಕ ರಘುಪತಿ ಗುಂಡು ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ನಡೆಯಿತು.

ಈ ಸಂದರ್ಭದಲ್ಲಿ ಶಿರ್ವ ಗ್ರಾಪಂ ಉಪಾಧ್ಯಕ್ಷ ವಿಲ್ಸನ್ ರೊಡ್ರಿಗಸ್, ಸ್ಥಳೀಯ ಗ್ರಾಪಂ ಸದಸ್ಯರಾದ ಸುಜಾತಾ ಪೂಜಾರ್ತಿ, ಸುಹಾಸ್, ರೇವತಿ ಆಚಾರ್ಯ, ಗೀತಾ ನಾಯ್ಕ್, ಮಾಜಿ ಅಧ್ಯಕ್ಷರಾದ ಕೆ.ಆರ್.ಪಾಟ್ಕರ್, ರತನ್ ಶೆಟ್ಟಿ, ಹಸನಬ್ಬ ಶೇಖ್, ಮಾಜಿ ಉಪಾಧ್ಯಕ್ಷೆ ಗ್ರೇಸಿ ಕರ್ಡೋಜ, ರಮೇಶ ಬಂಗೇರಾ, ಗುತ್ತಿಗೆ ದಾರ ಪೀಟರ್ ಕೋರ್ಡಾ, ಮೆಗೇಶ್, ರವೀಂದ್ರ ಆಚಾರ್ಯ ಬಂಟ ಕಲ್ಲು, ವಿಜಯ್ ಧೀರಜ್ ಬಂಟಕಲ್ಲು ಮೊದಲಾದವರು ಉಪಸ್ಥಿತರಿದ್ದರು. ಶಿರ್ವ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಮೆಲ್ವಿನ್ ಡಿಸೋಜ ಸ್ವಾಗತಿಸಿ, ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News