×
Ad

ಶಿರ್ವ: ಆ.18ರಂದು ಕೊರಗರ ಭೂಮಿ ಹಬ್ಬ

Update: 2024-08-16 21:52 IST

ಉಡುಪಿ, ಆ.16: ಕರ್ನಾಟಕ-ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ವತಿಯಿಂದ 16ನೇ ವರ್ಷದ ಕೊರಗರ ಭೂಮಿ ಹಬ್ಬ ಇದೇ ಆ.18ರ ರವಿವಾರ ಪೆರ್ನಾಲಿನಲ್ಲಿರುವ ಆದಿವಾಸಿ ಜೀವನ ಶಿಕ್ಷಣ ಕೇಂದ್ರದಲ್ಲಿ ಬೆಳಗ್ಗೆ 11ರಿಂದ ನಡೆಯಲಿದೆ.

ಈ ಸಂದರ್ಭ ನಡೆಯುವ ಜಾಥಾ ಬೆಳಗ್ಗೆ 9:30ಕ್ಕೆ ಶಿರ್ವದ ಕೆನರಾ ಬ್ಯಾಂಕ್ ವೃತ್ತದಿಂದ ಪ್ರಾರಂಭಗೊಂಡು ಪೆರ್ನಾಲ್‌ನಲ್ಲಿ ಮುಕ್ತಾಯ ಗೊಳ್ಳಲಿದೆ. ಪೆರ್ನಾಲ್‌ನಲ್ಲಿ ಸಭಾ ಕಾರ್ಯಕ್ರಮ ಮತ್ತು ಕೊರಗರ ಭೂಮಿ ಹಬ್ಬದ ಆಚರಣೆ ನಡೆಯಲಿದೆ ಎಂದು ಒಕ್ಕೂಟದ ಪ್ರಕಟಣೆ ತಿಳಿಸಿದೆ.

ಜಾಥಾವನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರೆ, ನ್ಯಾಯಾಧೀಶರಾದ ಬಾಲರಾಜ್ ಕೋಡಿಕಲ್ ಧ್ವಜಾರೋಹಣ ನೆರವೇರಿಸುವರು. ಭೂಮಿಹಬ್ಬವನ್ನು ಮುದರಂಗಡಿ ಗ್ರಾಪಂ ಅಧ್ಯಕ್ಷೆ ನಮಿತಾ ಉದ್ಘಾಟಿಸಲಿದ್ದು, ಒಕ್ಕೂಟದ ಅಧ್ಯಕ್ಷ ಸುಶೀಲ ನಾಡಾ ಅಧ್ಯಕ್ಷತೆ ವಹಿಸಲಿದ್ದಾರೆ. ಅಪರಾಹ್ನ 2:00ಗಂಟೆ ಬಳಿಕ ಕೊರಗರ ಸಾಂಸ್ಕೃತಿಕ ಅಭಿವ್ಯಕ್ತಿ ಪ್ರದರ್ಶನಗೊಳ್ಳಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News