ದಾನಿಗಳ ಸಹಕಾರದೊಂದಿಗೆ ವಿಜೇತ ವಿಶೇಷ ಶಾಲಾ ಮಕ್ಕಳಿಗೆ ಸಮವಸ್ತ್ರ ಹಾಗೂ ಸಹಾಯಧನ ವಿತರಿಸಿದ ಶುಭದ ರಾವ್
ಕಾರ್ಕಳ : ಕಾರ್ಕಳ ತಾಲೂಕು ಕುಕ್ಕುಂದೂರು ವಿಜೇತ ವಿಶೇಷ ಶಾಲೆಯ ಮಕ್ಕಳಿಗೆ ಇಂದು ದಾನಿಗಳಾದ ಮಲ್ಲೇಶ್ವರಂ ನಿವಾಸಿ ಶ್ರೀ ಬಾಲಕೃಷ್ಣ ಹಾಗೂ ಶ್ರೀಮತಿ ಉಷಾ ಬಾಲಕೃಷ್ಣ ರವರು ನೀಡಿದ ಸಮವಸ್ತ್ರ ಬಟ್ಟೆಗಳು ಹಾಗೂ ತಮ್ಮ ವೈಯಕ್ತಿಕ ಸಹಾಯಧನವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದರಾವ್ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ ದೇವರ ಮಕ್ಕಳ ಬಗ್ಗೆ ನಮಗೆ ವಿಶೇಷ ಕಾಳಜಿ ಇದೆ, ಹಿಂದಿನಿಂದಲೂ ಈ ಶಾಲೆಯ ಮಕ್ಕಳಿಗೆ ಸಹಕಾರವನ್ನು ನೀಡುತ್ತಾ ಬಂದಿದ್ದೇವೆ ಮುಂದೆಯೂ ನೀಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಬೆನ್ನು ಹುರಿ ಅಪಘಾತಕ್ಕೆ ಒಳಗಾದ ಬೊಂಡುಕುಮೇರಿ ಸಚಿನ್ ನಾಯ್ಕ್ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ರಾಷ್ಟ್ರಮಟ್ಟದ ಫುಟ್ ಬಾಲ್ ಆಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿದಿಸಿ ಚಿನ್ನದ ಪದಕವನ್ನು ಪಡೆದ ವಿಜೇತ ವಿಶೇಷ ಶಾಲಾ ವಿದ್ಯಾರ್ಥಿಗಳಾದ ಕಿಶೋರ್ ಹಾಗೂ ಪ್ರೀತಿ ಇವರನ್ನು ಗೌರವಿಸಲಾಯಿತು.
ಮುಖ್ಯ ಅಥಿತಿಗಳಾಗಿ ಗ್ಯಾರಂಟಿ ಸಮಿತಿ ಸದಸ್ಯರಾದ ಸಂತೋಷ್ ದೇವಾಡಿಗ, ಪಂಚಾಯತ್ ಸದಸ್ಯರಾದ ರುಕ್ಮಿಯ್ಯ ಶೆಟ್ಟಿಗಾರ್ ಶಾಲಾ ಸಂಸ್ಥಾಪಕಿ ಡಾ.ಕಾಂತಿ ಹರೀಶ್, ಮ್ಯಾನೇಜಿಂಗ್ ಟ್ರಸ್ಟಿ ಹರೀಶ್, ವಿಜೇತ ವಿಶೇಷ ಶಾಲಾ ಹಿತೈಷಿಗಳಾದ ಸತೀಶ್ ಭಂಡಾರಿ, ಶಾಲಾ ಸಿಬ್ಬಂದಿ ವರ್ಗ, ಮುಗ್ಧ ಮಕ್ಕಳು ಉಪಸ್ಥಿತರಿದ್ದರು.