ಎಸ್‌ಐಆರ್: ಉಡುಪಿ ಜಿಲ್ಲೆಯಲ್ಲಿ ಶೇ.90ರಷ್ಟು ಡಿಜಿಟಲೀಕರಣ ಪೂರ್ಣ: ಡಿಸಿ ಸ್ವರೂಪ ಟಿ.ಕೆ.

Update: 2026-07-26 20:44 IST

ಉಡುಪಿ, ಜು.26: ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆದಿರುವ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಐಆರ್-2026) ಪ್ರಕ್ರಿಯೆಯಲ್ಲಿ ಮತದಾರರು ಹಿಂದಿರುಗಿಸಿದ ಗಣತಿ ನಮೂನೆಗಳ ಡಿಜಿಟಲೀಕರಣ ಕಾರ್ಯ ಭರದಿಂದ ಸಾಗಿದ್ದು, ರವಿವಾರ ಸಂಜೆಯವರೆಗೆ ಒಟ್ಟು ಮತದಾರರ ಪೈಕಿ ಶೇ.89.76 ರಷ್ಟು ಮಂದಿಯ ಗಣತಿ ನಮೂನೆಗಳ ಡಿಜಿಟಲೀಕರಣ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.

ಜಿಲ್ಲೆಯ ಒಟ್ಟು 10,63,876 ಮಂದಿ ಮತದಾರರಿಗೆ ಬಿಎಲ್‌ಒಗಳು ಗಣತಿ ನಮೂನೆ (ಎನ್ಯೂಮರೇಶನ್ ಫಾರ್ಮ್)ಗಳನ್ನು ತಲುಪಿಸಿದ್ದು, ಇವರಲ್ಲಿ 9,55,001 ಮಂದಿಯ ಡಿಜಿಟಲೀಕರಣ ಇಂದು ಸಂಜೆಯವರೆಗೆ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿಗಳ ಹೇಳಿಕೆ ತಿಳಿಸಿದೆ.

ಜಿಲ್ಲೆಯಲ್ಲಿ ಈವರೆಗೆ 16,206 ಮಂದಿ ಮತದಾರರು ಮೃತಪಟ್ಟಿರುವುದು ಮನೆ ಭೇಟಿಯ ವೇಳೆ ಗೊತ್ತಾಗಿದೆ. ಅದೇ ರೀತಿ ಜಿಲ್ಲೆಯಲ್ಲಿ 16,807 ಮಂದಿ ಮತದಾರರು ಖಾಯಂ ಆಗಿ ಬೇರೆ ಕಡೆಗೆ ವರ್ಗಾವಣೆ ಗೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 5863 ಮಂದಿ ಮತದಾರರು ಆನ್‌ಲೈನ್ ಮೂಲಕ ಸ್ವದಾಖಲಾತಿಯನ್ನು ಮಾಡಿದ್ದಾರೆ ಎಂದೂ ಜಿಲ್ಲಾಧಿಕಾರಿಗಳ ಹೇಳಿಕೆ ತಿಳಿಸಿದೆ.

249 ಮತಗಟ್ಟೆಗಳಲ್ಲಿ ಶೇ.100 ಸಾಧನೆ: ಉಡುಪಿ ಜಿಲ್ಲೆಯಲ್ಲಿ ಶೇ.100ರಷ್ಟು ಡಿಜಿಟಲೀಕರಣ ಹಾಗೂ ಎಎಸ್‌ಡಿಡಿ (ಗೈರು, ವರ್ಗಾವಣೆ, ಮೃತ, ತೆಗೆದುಹಾಕಿದ), ಡಿಎಸ್‌ಇ ಹಾಗೂ ಪಿಎಸ್‌ಇ ಪರಿಶೀಲನೆ ಪೂರ್ಣಗೊಳಿಸಿರುವ ಮತಗಟ್ಟೆಗಳ ಸಂಖ್ಯೆ 249ಕ್ಕೇರಿದೆ ಎಂದೂ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ವಿಧಾನಸಭಾ ಕ್ಷೇತ್ರವಾರು ಶೇ.100ರಷ್ಟು ಪ್ರಕ್ರಿಯೆ ಪೂರ್ಣಗೊಂಡ ಮತಗಟ್ಟೆಗಳ ಸಂಖ್ಯೆ ಹೀಗಿದೆ. ಬೈಂದೂರು ಕ್ಷೇತ್ರ-47 ಮತಗಟ್ಟೆ, ಕುಂದಾಪುರ-47, ಉಡುಪಿ-29, ಕಾಪು- 55, ಕಾರ್ಕಳ- 71, ಒಟ್ಟು- 249.

ಶೇ.100ರಷ್ಟು ಪೂರ್ಣಗೊಂಡ ಮತಗಟ್ಟೆಗಳ ಪಟ್ಟಿಯನ್ನು ಪರಿಶೀಲಿಸಿ, ನಿರ್ದಿಷ್ಟ ಮತಗಟ್ಟೆಗಳ ಪಟ್ಟಿಯಲ್ಲಿ ಯಾವುದೇ ಹೊಸ ಸೇರ್ಪಡೆಗಳು ಅಥವಾ ಬದಲಾವಣೆಗಳಿದ್ದಲ್ಲಿ ಸಂಬಂಧಪಟ್ಟ ಬೂತ್‌ಮಟ್ಟದ ಅಧಿಕಾರಿಗೆ (ಬಿಎಲ್‌ಒ) ಹಾಗೂ ಮತದಾರರ ನೋಂದಣಾಧಿಕಾರಿಗಳ (ಇಆರ್‌ಒ) ಗಮನಕ್ಕೆ ತರುವಂತೆ ಕೋರಲಾಗಿದೆ.

ಎನ್ಯೂಮರೇಷನ್ ನಮೂನೆಗಳನ್ನು ಮನೆಮನೆಗೆ ತೆರಳಿ ಸಂಗ್ರಹಿಸುವ ಪ್ರಕ್ರಿಯೆ ಆಗಸ್ಟ್ 8ರವರೆಗೆ ನಡೆಯಲಿದೆ. ಇದುವರೆಗೆ ನಮೂನೆಗಳನ್ನು ಭರ್ತಿ ಮಾಡದವರು ಕೂಡಲೇ ಭರ್ತಿ ಮಾಡಿ ಸಂಬಂಧಿಸಿದ ಬಿಎಲ್‌ಒಗೆ ನೀಡಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ.

ಜಿಲ್ಲೆಯಲ್ಲಿ ಜು.26ರವರೆಗೆ ನಡೆದ ಎಸ್‌ಐಆರ್ ಪ್ರಕ್ರಿಯೆ ಸಾಧನೆ:

(ವಿಧಾನಸಭಾ ಕ್ಷೇತ್ರ, ಒಟ್ಟು ಮತದಾರರು, ಡಿಜಿಟಲೀಕರಣಗೊಂಡ ಅರ್ಜಿ, ಮೃತರ ಸಂಖ್ಯೆ, ವರ್ಗಾವಣೆಗೊಂಡವರ ಸಂಖ್ಯೆ, ಸ್ವನೊಂದಾವಣೆಗೊಂಡವರ ಸಂಖ್ಯೆ)

118.ಬೈಂದೂರು         2,41,863         2,19,644         3995         4140         1956

119.ಕುಂದಾಪುರ        2,12,473         1,94,473         2766         4363         604

120.ಉಡುಪಿ             2,21,680         1,83,522         3208         2650          715

121.ಕಾಪು               1,94,718             1,74,956         2884       2770         842

122.ಕಾರ್ಕಳ           1,93,142             1,82,406         3353         2884         1746

ಒಟ್ಟು                      10,63,876             9,55,001       16,206      16,807     5863

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News