×
Ad

ಮರವಂತೆಯಲ್ಲಿ ಕಥೆ, ಕವನ ರಚನಾ ಕಾರ್ಯಗಾರ

Update: 2025-12-25 19:46 IST

ಕುಂದಾಪುರ, ಡಿ.25: ಕಥೆ, ಕವನಗಳು ಅನುಭವ ಜನ್ಯವಾಗಿದ್ದು, ಪ್ರತಿ ಯೊಬ್ಬರನ್ನು ಪಾಲ್ಗೊಳಿಸುವ ಒಂದು ಪ್ರಕ್ರಿಯೆಯಾಗಿದೆ. ಎಲ್ಲಾ ಪ್ರದರ್ಶನ ಪ್ರಕಾರಗಳು ಕಥೆ ಹೇಳುವುದರ ವಿಸ್ತರಣೆಯಾಗಿದೆ ಮತ್ತು ವ್ಯಕ್ತಿಯ ಭಾವನೆ ಗಳನ್ನು ಸಮರ್ಪಕವಾಗಿ ಹಂಚಿಕೊಳ್ಳುವುದರಿಂದ ಈ ಕಥೆ ಹೇಳುವುದರಿಂದ ಹೆಚ್ಚು ಪ್ರಭಾವ ಬೀರುತ್ತದೆ ಎಂದು ಮರವಂತೆ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜ ಪಟಗಾರ್ ಅಭಿಪ್ರಾಯಪಟ್ಟಿದ್ದಾರೆ.

ಹಂಗಾರಕಟ್ಟೆಯ ಬಾಳ್ಕುದ್ರು ಅಭಿವೃದ್ಧಿ ಸಂಸ್ಥೆ, ಗ್ರಾಮ ಪಂಚಾಯತ್ ಮರವಂತೆ, ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಪ್ರೌಢ ಶಾಲೆ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಮಕ್ಕಳಿಗೆ ಕಥೆ ಕವನ ರಚನಾ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮರವಂತೆ ಶ್ರೀರಾಮ ಕನ್ನಡ ಖಾರ್ವಿ ಸೇವಾ ಸಮಿತಿ ಅಧ್ಯಕ್ಷ ವೆಂಕಟರಮಣ ಖಾರ್ವಿ, ಮಕ್ಕಳಲ್ಲಿ ವಿವಿಧ ಭಾವನೆಗಳು ಅನುಭವಕ್ಕೆ ಬಂದು ಹೊಸ ಸಾಧ್ಯತೆಗೆ ಹೆಚ್ಚು ಒತ್ತು ನೀಡುತ್ತವೆ. ಹಾಗೂ ಮಕ್ಕಳಲ್ಲಿ ಮೌಲ್ಯಗಳನ್ನು ಅಳವಡಿಸಲು ಇದು ಅತ್ಯಂತ ಪ್ರಭಾವಶಾಲಿಯಾಗಿದೆ ಎಂದರು. ಅಲ್ಲದೇ, ಕಥೆ ಹೇಳುವುದು ಈ ಜಗತ್ತಿನಲ್ಲಿ ಅತ್ಯಂತ ಮೌಖಿಕ ಪರಂಪರೆಯಾಗಿದೆ ಎಂದವರು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸುಮನ ಹೇರ್ಳೆ ಮಾತನಾಡಿ, ಬೇರೆ ಬೇರೆ ಸನ್ನಿವೇಶದಲ್ಲಿ ನಮ್ಮ ಭಾವನೆ ಯನ್ನು ವ್ಯಕ್ತಪಡಿಸುವುದರ ಜೊತೆಗೆ ಹೇಳುವ ಮತ್ತು ಕೇಳುವ ಪ್ರಕ್ರಿಯೆ ನಿರಂತರವಾಗಿದ್ದು ಈ ಜಗತ್ತಿನಲ್ಲಿ ಇನ್ನು ಜೀವಂತವಾಗಿ ಉಳಿದ ಏಕಮಾತ್ರ ಪ್ರಕಾರವೇ ಕಥೆ ಹೇಳುವುದು ಎಂದರು.

ಸಭಾಧ್ಯಕ್ಷತೆಯನ್ನು ಸುಜಾತಾ ಮರವಂತೆ ವಹಿಸಿದ್ದರು. ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಭಾಸ್ಕರ ಮಯ್ಯ ಸ್ವಾಗತಿಸಿದರು. ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ರಮೇಶ ವಕ್ವಾಡಿ ಪ್ರಸ್ತಾವಿಕ ವಾಗಿ ಮಾತನಾಡಿ ವಂದಿಸಿದರು. ದಿವ್ಯ ಉಡುಪಿ ಕಾರ್ಯಕ್ರಮ ನಿರೂಪಿಸಿದರು. ಸುಮಾರು 85 ವಿದ್ಯಾರ್ಥಿಗಳು ಈ ಶಿಬಿರದ ಪ್ರಯೋಜನ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News