×
Ad

ಜ.3 : ಮಿಯ್ಯಾರು ಕಂಬಳ

Update: 2025-12-25 16:58 IST

ಕಾರ್ಕಳ,:ಮಿಯಾರು ಕಂಬಳ ಸಮಿತಿ ನವೋದಯ ಗ್ರಾಮ ವಿಕಾಸ ಚ್ಯಾರಿ ಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಜನವರಿ 3ರಂದು 22ನೇ ವರ್ಷದ ಮಿಯಾರು ಲವ ಕುಶ ಜೋಡು ಕೆರೆ ಕಂಬಳ ಆಯೋಜಿಸಲಾಗಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಹಾಗೂ ಶಾಸಕರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮಿಯರು ಕಂಬಳವು ಅತ್ಯಧಿಕ ಸೌಲಭ್ಯಗಳನ್ನು ಹೊಂದಿರುವ ವಿಶಿಷ್ಟ ಕಂಬಳವಾಗಿದ್ದು ಸಂಪ್ರದಾಯ ಶಿಸ್ತು ಹಾಗೂ ಸಮಯ ಪಾಲನೆಗೆ ಹೆಸರಾಗಿದೆ ಸುಮಾರು 200ಕೂ ಅಧಿಕ ಜೋಡಿ ಕೋಣಗಳು ಭಾಗಿಯಾಗಲಿವೆ ಎಂದು ಪತ್ರಿಕಾ ಭವನದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬೆಳಿಗ್ಗೆ ಎಂಟು ಮೂವತ್ತಕ್ಕೆ ಕಂಬಕ್ಕೆ ಚಾಲನೇ ನೀಡಲಾಗುವುದು. ಶ್ರೀ ಮಾಹ ಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಹರಿದಾಸ್ ಭಟ್, ಮಿಯರು ಚರ್ಚ್ ಗುರುಗಳಾದ ವಂದನಿಯ ಕ್ಯಾ ನಿಟ್ ಬರ್ಬೋಜಾ, ಮಿಯರು ಜಾಮಿಯಾ ಮಸೀದಿಯ ಧರ್ಮ ಗುರುಗಳಾದ ರಾಜಿಕ್ ಅಹಮದ್ ಗ್ರಾಮ ಪಂಚಾಯತ್ ಅಧ್ಯಕ್ಷ ಸನ್ಮತಿ ನಾಯಕ್ ರಾಜ್ಯ ಸಹಕಾರ ಮಾರಾಟ ಮಂಡಳ ಅಧ್ಯಕ್ಷ ಡಾಕ್ಟರ್ ಎಂ ಎನ್ ರಾಜೇಂದ್ರ ಕುಮಾರ್ ಭಾಗವಹಿಸಲಿದ್ದಾರೆ.

ಸಮಿತಿಯ ಕಾರ್ಯಧ್ಯಕ್ಷ ಜೀವನ್ ಅಡ್ಯಾತನ್ ತ್ಯಾ ಯ, ಉಪಾಧ್ಯಕ್ಷರಾದ ಉ ದಯ ಎಸ್. ಕೋಟಿಯಾನ್, ಅಂತೋನಿ ನಕ್ರೆ, ತೀರ್ಪುಗಾರರಾದ ರವೀಂದ್ರ ಕುಮಾರ್ ವಿಜಯ ಕುಮಾರ್ ಕಂಗಿನಮನೆ ಕೋಶಾಧಿಕಾರಿ ಶಾಮ್ ಎನ್ ಶೆಟ್ಟಿ, ಹಾಗೂ ಸಮೀತಿ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News