×
Ad

ತುಳು ಲಿಪಿ ಯುನಿಕೋಡ್‌ಗೆ ಸೇರ್ಪಡೆ ಕಾರ್ಯ ಶೇ.80ರಷ್ಟು ಮಾತ್ರ ಪೂರ್ಣ: ಡಾ.ಆಕಾಶ್‌ರಾಜ್ ಜೈನ್

Update: 2024-09-10 17:48 IST

ಉಡುಪಿ, ಸೆ.10: ತುಳು ಲಿಪಿಯನ್ನು ಯುನಿಕೋಡ್‌ಗೆ ಸೇರ್ಪಡಿಸುವ ಕಾರ್ಯ ಶೇ.80ರಷ್ಟು ಮಾತ್ರ ಪೂರ್ಣಗೊಂಡಿದೆ. ಇನ್ನಷ್ಟು ತಾಂತ್ರಿಕ ಕಾರ್ಯಗಳು ಬಾಕಿ ಇವೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಡಾ.ಆಕಾಶ್‌ ರಾಜ್ ಜೈನ್ ತಿಳಿಸಿದ್ದಾರೆ.

ತುಳು ಲಿಪಿಯನ್ನು ಯುನಿಕೋಡ್‌ಗೆ ಸೇರ್ಪಡಿಸುವ ಕಾರ್ಯ 2017ರಲ್ಲಿ ಆರಂಭಿಸ ಲಾಯಿತು. ಅದಕ್ಕೂ ಸುಮಾರು 10 ವರ್ಷಗಳಷ್ಟು ಮೊದಲು ಬ್ರಾಹ್ಮಿ ಲಿಪಿ ಮೂಲದಿಂದ ಪ್ರಚಲಿತವಿದ್ದ ಉತ್ತರ ಕನ್ನಡ ಭಾಗದಲ್ಲಿ ಪ್ರಚಲಿತವಿದ್ದ ಇನ್ನೊಂದು ಲಿಪಿ ತಿಗಳಾರಿ ಲಿಪಿಯನ್ನು ಯುನಿಕೋಡ್‌ಗೆ ಸೇರ್ಪಡಿಸಲು ವೈಷ್ಣವಿಮೂರ್ತಿ ಮತ್ತು ವಿನೋದ್ ರಾಜ್ ಆರಂಭಿಸಿದ ಕಾರ್ಯಕ್ಕೆ ಯುನಿ ಕೋಡ್ ಕನ್ಸೊರ್ಟಿಯಮ್ ಕ್ಯಾಲಿಫೋರ್ನಿಯದಿಂದ ಒಪ್ಪಿಗೆ ನೀಡಲಾಗಿದೆ.

ಆ ಲಿಪಿಯನ್ನು ತುಳು-ತಿಗಳಾರಿ ಲಿಪಿ ಎಂದು ಕರೆಯಲಾಗುತ್ತದೆ. ಪ್ರಸ್ತುತ ಬಳಕೆಯಲ್ಲಿರುವ ತುಳು ಲಿಪಿಗೂ ತುಳು ತಿಗಳಾರಿ ಲಿಪಿಗೂ ಸುಮಾರು ಶೇ.25 ವ್ಯತ್ಯಾಸ ಇದೆ. ಕನ್ನಡ ಮತ್ತು ತೆಲುಗು ಲಿಪಿಗಳಿದ್ದಂತೆ ತುಳು ಮತ್ತು ತುಳು-ತಿಗಳಾರಿ ಲಿಪಿಗಳಿಗೂ ಹಲವು ಸಾಮ್ಯತೆಗಳಿವೆ ಎಂದರು.

ಪ್ರಸ್ತುತ ತುಳು ಲಿಪಿ ಯುನಿಕೋಡ್ ಸೇರ್ಪಡೆ ಸಂಪೂರ್ಣಗೊಳಿಸಲು ಇನ್ನೂ ಸ್ವಲ್ಪ ಕಾರ್ಯ ಬಾಕಿಯಿದ್ದು, ಆಸಕ್ತರು ಕಾರ್ಯದ ಸಂಪೂರ್ಣ ವಿವರವನ್ನು ’ಯುನಿಕೋಡ್ ಕನ್ಸೊರ್ಟಿಯಮ್’ ವೆಬ್‌ಸೈಟ್‌ನಲ್ಲಿ ತುಳು ಯುನಿಕೋಡ್ ವಿಚಾರ ಆಯ್ಕೆ ಮಾಡಿ ತಿಳಿದುಕೊಳ್ಳಬಹುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News