ರೈಲು ಢಿಕ್ಕಿ: ಯುವಕ ಮೃತ್ಯು
Update: 2026-01-08 20:55 IST
ಕುಂದಾಪುರ, ಜ.8: ಚಲಿಸುತ್ತಿದ್ದ ರೈಲು ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಹಟ್ಟಿಯಂಗಡಿ ಗ್ರಾಮದ ಸಬ್ಲಾಡಿ ಎಂಬಲ್ಲಿ ಜ.8ರಂದು ಬೆಳಗ್ಗೆ ನಡೆದಿದೆ.
ಮೃತರನ್ನು ಹಟ್ಟಿಯಂಗಡಿಯ ಜನಾರ್ದನ(39) ಎಂದು ಗುರುತಿಸ ಲಾಗಿದೆ. ಬೆಂಗಳೂರಿನಲ್ಲಿ ಕಂಪೆನಿಯ ಕೆಲಸವನ್ನು ಮಾಡಿಕೊಂಡಿದ್ದ ಇವರು, 10 ದಿನಗಳ ಹಿಂದೆ ಊರಿಗೆ ಬಂದಿದ್ದರು. ಹಟ್ಟಿಯಂಗಡಿ ಸ್ವೀಲ್ ಬ್ರಿಡ್ಜ್ ಸಮೀಪ ರೈಲ್ವೆ ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜನಾರ್ದನ ಅವರಿಗೆ ಕೇರಳದಿಂದ ಗೋವಾ ಕಡೆಗೆ ಹೋಗುವ ದುರಂತ್ ಎಕ್ಸ್‌ಪ್ರೆಸ್ ರೈಲು ಆಕಸ್ಮಿಕವಾಗಿ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.