×
Ad

ಪತ್ರಕರ್ತರಾದ ಶೇಖರ್ ಅಜೆಕಾರ್- ಶಶಿಧರ್ ಹೆಮ್ಮಣ್ಣಗೆ ಶ್ರದ್ಧಾಂಜಲಿ ಸಭೆ

Update: 2023-11-11 18:15 IST

ಉಡುಪಿ : ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇತ್ತೀಚೆಗೆ ಅಗಲಿದ ಹಿರಿಯ ಪತ್ರಕರ್ತರಾದ ಶೇಖರ್ ಅಜೆಕಾರ್ ಹಾಗೂ ಶಶಿಧರ್ ಹೆಮ್ಮಣ್ಣ ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ಶನಿವಾರ ಉಡುಪಿ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿತ್ತು.

ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಬರಹದ ಹುಚ್ಚಿನ ದಾರಿಯ ಬದುಕು ಯಾವತ್ತೂ ಸುಲಭ ಅಲ್ಲ. ಬಹಳ ಸವಾಲು, ಸಂಕಷ್ಟ ಎದುರಿಸಿಯೇ ಮುಂದೆ ಹೆಜ್ಜೆ ಇಡಬೇಕಾಗುತ್ತದೆ. ಪತ್ರಕರ್ತರು ಸವಾಲುಗಳನ್ನು ಒಡ್ಡಿ ಸಮಾಜದ ಮುಂದೆ ತಮ್ಮನ್ನು ಗುರುತಿಸಿ ಕೊಳ್ಳುತ್ತಾರೆ. ಹಾಗಾಗಿ ಬರಹದ ಹುಚ್ಚಿನಿಂದ ಪತ್ರಕರ್ತ ವ್ಯಕ್ತಿಯಾಗಿ ಬೆಳೆಯ ಬಹುದೇ ಹೊರತು ಆರ್ಥಿಕವಾಗಿ ಬೆಳೆಯುವುದು ಕಷ್ಟ ಎಂದು ಹೇಳಿದರು.

ಶೇಖರ್ ಅಜೆಕಾರು ಸಾಮಾಜಿಕ ಬದುಕಿನಲ್ಲಿ ಆಳವಾದ ಅಧ್ಯಯನ ಮಾಡಿ ದ್ದಾರೆ. ಶಶಿಧರ್ ಹೆಮ್ಮಣ್ಣ ಅವರ ಬರವಣಿಗೆ ವಾಸ್ತವ್ಯ ಸ್ಥಿತಿಗೆ ಬಹಳಷ್ಟು ಹತ್ತಿರವಾಗಿರುತ್ತದೆ. ಇಬ್ಬರದ್ದು ಸಾಯುವ ವಯಸ್ಸು ಅಲ್ಲ. ಆರೋಗ್ಯವಾಗಿ ರುತ್ತಿದ್ದರೆ ಇನ್ನಷ್ಟು ವರ್ಷ ಬದುಕಲು ಬೇಕಾದ ಅವಕಾಶಗಳು ಇರುತ್ತಿತ್ತು. ಎಲ್ಲರ ಒಳಗೊಂಡ ಸಾಮಾಜ ಕಟ್ಟು ಅವರ ಕಲ್ಪನೆಗೆ ಇನ್ನಷ್ಟು ಶಕ್ತಿ ಬರುತ್ತಿತ್ತು ಎಂದರು.

ಉಡುಪಿ ರಂಗಭೂಮಿ ಉಪಾಧ್ಯಕ್ಷ ಭಾಸ್ಕರ ರಾವ್ ಕಿದಿಯೂರು, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ಮಾಜಿ ಅಧ್ಯಕ್ಷ ಗೋಕುಲ್‌ದಾಸ್ ಪೈ, ಹಿರಿಯ ಉಪಸಂಪಾದಕ ಕರುಣಾಕರ್, ಪತ್ರಕರ್ತರಾದ ದೀಪಕ್ ಜೈನ್, ಶಶಿಧರ್ ಮಾಸ್ತಿಬೈಲು ನುಡಿನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಮಾಜಿ ಅಧ್ಯಕ್ಷ ಜಯಕರ ಸುವರ್ಣ, ಪತ್ರಿಕಾ ಭವನ ಸಂಚಾಲಕ ಅಜಿತ್ ಅರಾಡಿ, ಸಹ ಸಂಚಾಲಕ ಅಂಕಿತ್ ಶೆಟ್ಟಿ, ಉತ್ತರ ಕನ್ನಡ ಜಿಲ್ಲಾ ವಾರ್ತಾಧಿಕಾರಿ ಶಿವಕುಮಾರ್, ಕೆಮ್ಮಣ್ಣು ಗ್ರಾಪಂ ಕಾರ್ಯದರ್ಶಿ ದಿನಕರ ಬೆಂಗ್ರೆ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ರಹೀಂ ಉಜಿರೆ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News