×
Ad

ಉಡುಪಿ: ಬಸ್ಸಿನಲ್ಲಿ ಅಸ್ವಸ್ಥಗೊಂಡ ವಿದ್ಯಾರ್ಥಿನಿ: ಬಸ್ಸನ್ನೇ ಆಸ್ಪತ್ರೆಗೆ ಕೊಂಡೊಯ್ದ ಚಾಲಕ

Update: 2024-08-22 15:21 IST

ಉಡುಪಿ, ಆ.22: ಬಸ್ ಪ್ರಯಾಣದ ವೇಳೆ ವಿದ್ಯಾರ್ಥಿನಿಯೊಬ್ಬಳು ದಿಢೀರ್ ಅಸ್ವಸ್ಥಗೊಂಡಿದ್ದರಿಂದ ಚಾಲಕ ಆಸ್ಪತ್ರೆಗೆ ಕೊಂಡೊಯ್ದ ಮಾನವೀಯತೆ ಮೆರೆದ ಮತ್ತೊಂದು ಪ್ರಸಂಗ ಗುರುವಾರ ಬೆಳಗ್ಗೆ ಉಡುಪಿಯಲ್ಲಿ ನಡೆದಿದೆ.

ಇಂದು ಬೆಳಗ್ಗೆ ಮಂಗಳೂರಿನಿಂದ ಮಣಿಪಾಲಕ್ಕೆ ಹೊರಟಿದ್ದ ಎಕೆಎಂಎಸ್ ಖಾಸಗಿ ಬಸ್ಸಿಗೆ ಮುಲ್ಕಿಯಲ್ಲಿ ವಿದ್ಯಾರ್ಥಿನಿಯೊಬ್ಬಳು ಹತ್ತಿದ್ದಾಳೆ. ಉಡುಪಿಗೆ ಹೊರಟಿದ್ದ ಆಕೆ ಬಸ್ ಕಟಪಾಡಿ ದಾಟಿ ಉದ್ಯಾವರ ಸಮೀಪಿಸುತ್ತಿದ್ದಂತೆ ಏಕಾಏಕಿ ಅಸ್ವಸ್ಥಗೊಂಡಳೆನ್ನಲಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಬಸ್ ಚಾಲಕ ನಸೀಫ್ ಹಾಗೂ ನಿರ್ವಾಹಕ ಮೋಹಿತ್ ಕೂಡಲೇ ಬಸ್ಸನ್ನು ಉಡುಪಿಯ ಟಿ.ಎಂ.ಎ. ಪೈ ಆಸ್ಪತ್ರೆ ಆವರಣಕ್ಕೆ ಕೊಂಡೊಯ್ದ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ.

ವಿದ್ಯಾರ್ಥಿನಿಗೆ ಸಕಾಲದಲ್ಲಿ ಚಿಕಿತ್ಸೆ ಕೊಡಿಸಲು ನೆರವಾಗುವ ಮೂಲಕ ಮಾನವೀಯತೆ ಮೆರೆದ ಬಸ್ ಚಾಲಕ ಹಾಗೂ ನಿರ್ವಾಹಕರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News