ಉಡುಪಿ | ಹೂಡೆ ಸಾಲಿಹಾತ್ ಶಿಕ್ಷಣ ಸಂಸ್ಥೆಯ ಶಾಲಾ ವಾರ್ಷಿಕೋತ್ಸವ
ಉಡುಪಿ, ಡಿ.22: ತೋನ್ಸೆ ಹೂಡೆಯ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಇತ್ತೀಚೆಗೆ ಜರಗಿತು.
ಮುಖ್ಯ ಅತಿಥಿಯಾಗಿ ಜಮಾಆತೇ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಹಾಸನದ ಮನಸೂರ್ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಪದವಿಗಳನ್ನು ನೀಡುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಬೇಕು, ವಿದ್ಯಾರ್ಥಿಗಳು ವಿದ್ಯಾವಂತರಾಗಿ ಸಮಾಜಕ್ಕೆ ಪೂರಕವಾಗಿರಬೇಕೇ ವಿನಃ ಮಾರಕರಾಗಿ ರೂಪುಗೊಳ್ಳಬಾರದು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಾಲಿಹಾತ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಜನಾಬ್ ಇದ್ರಿಸ್ ಹೂಡೆ ವಹಿಸಿದರು. ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಡಾ.ತಾಹಾ ಮತೀನ್ ಮಾತನಾಡಿದರು.
ವೇದಿಕೆಯಲ್ಲಿ ಶಿಕ್ಷಣ ತಜ್ಞೆ ಫಕೀರಾ ಆತೀಕ್ ತಮಿಳುನಾಡು, ಜನಸೇವಾ ಕೋಪರೇಟೀವ್ ಸೊಸೈಟಿಯ ಪ್ರವರ್ತಕ ಅತೀಕ್ ಉರ್ ರೆಹಮಾನ್ ವಾನಂಬಡಿ, ಮಣಿಪಾಲ ಎಂ.ಐ.ಟಿ. ಕಾಲೇಜಿನ ಪ್ರೊಫೆಸರ್ ಡಾ.ಅಬ್ದುಲ್ ಅಜೀಜ್, ಸಾಲಿಹಾತ್ ಶಿಕ್ಷಣ ಸಂಸ್ಥೆಯ ಸಲಹಾ ಮಂಡಳಿ ಅಧ್ಯಕ್ಷ ಡಾ.ಶಹನವಾಜ್, ಟ್ರಸ್ಟ್ ನ ಖಜಾಂಚಿ ಅಬ್ದುಲ್ ಖಾದರ್, ಹಿರಿಯ ಟ್ರಸ್ಟಿಗಳಾದ ಮೌಲಾನ ಆದಂ ಸಾಹೇಬ್, ಹುಸೇನ್ ಮಾಸ್ಟರ್, ಶಾಲಾ ಅಕಾಡಮಿ ಮುಖ್ಯಸ್ಥ ಹಾಸೀಬ್ ತರಫ್ದಾರ್, ಪದವಿ ಕಾಲೇಜು ಪ್ರಾಂಶುಪಾಲೆ ಡಾ.ಸಬೀನಾ, ಪಿ.ಯು. ಕಾಲೇಜು ಪ್ರಾಂಶುಪಾಲೆ ದಿವ್ಯಾ ಪೈ, ಅರೇಬಿಕ್ ವಿಭಾಗದ ಮುಖ್ಯಸ್ಥೆ ಕುಲ್ಸುಮ್ ಅಬೂಬಕರ್, ಶಾಹಿದ್ ನದ್ವಿ, ಉಪ ಮುಖ್ಯ ಶಿಕ್ಷಕಿಯರಾದ ಶಾಹದತ್ ಬಾನು, ಯಾಸ್ಮೀನ್ ಬಾನು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ, ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮ ನಡೆಯಿತು. ಶಾಲಾ ವಿದ್ಯಾರ್ಥಿ ಅಕ್ಮಲ್ ಉಸ್ತಾದ್ ಪ್ರಾರ್ಥನೆಗೈದರು. ಆಡಳಿತಾಧಿಕಾರಿ ಅಸ್ಲಂ ಹೈಕಾಡಿ ಸ್ವಾಗತಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುನಂದ ವಂದಿಸಿದರು. ಶಿಕ್ಷಕಿ ಫಹೀನಾ ಹುಸೇನ್ ಕಾರ್ಯಕ್ರಮ ನಿರ್ವಹಿಸಿದರು.