ಉಡುಪಿ | ಬಜೆಟ್ ತಯಾರಿ: ಸಲಹೆ ಸೂಚನೆಗೆ ಆಹ್ವಾನ
Update: 2025-12-12 20:06 IST
ಉಡುಪಿ, ಡಿ.12: ಕರ್ನಾಟಕ ಪುರಸಭಾ ಲೆಕ್ಕಪತ್ರ ಮತ್ತು ಬಜೆಟ್ ನಿಯಮ 2006ರನ್ವಯ ಉಡುಪಿ ನಗರಸಭೆಯ 2026-27ನೇ ಸಾಲಿನ ಬಜೆಟ್ ತಯಾರಿಯ ಬಗ್ಗೆ ನಗರಸಭಾ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಅವಶ್ಯಕ ಅಭಿವೃದ್ಧಿ ಕೆಲಸ ಕಾರ್ಯಗಳ ವಿಚಾರ ವಿನಿಮಯಗಳ ಕುರಿತು ಹಾಗೂ ಸಂಪನ್ಮೂಲ ಕ್ರೋಢೀಕರಣದ ಬಗ್ಗೆ ಮೊದಲನೇ ಸುತ್ತಿನ ಪೂರ್ವಭಾವಿ ಸಾರ್ವಜನಿಕ ಸಮಾಲೋಚನಾ ಸಭೆಯು ಡಿ.17ರಂದು ಬೆಳಗ್ಗೆ 11 ಗಂಟೆಗೆ ನಗರಸಭೆಯ ಸಭಾಂಗಣದಲ್ಲಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡುವಂತೆ ಉಡುಪಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.