ಉಡುಪಿ | ಸ್ವರ್ಗ ಆಶ್ರಮದಲ್ಲಿ ವಿಶಿಷ್ಟ ರೀತಿಯಲ್ಲಿ ಕ್ರಿಸ್ಮಸ್ ಆಚರಣೆ
Update: 2025-12-26 19:43 IST
ಉಡುಪಿ, ಡಿ.26: ಹೋಂ ಡಾಕ್ಟರ್ ಫೌಂಡೇಶನ್ ಉಡುಪಿ ಇದರ ವತಿಯಿಂದ ವಿಶಿಷ್ಟ ರೀತಿಯಲ್ಲಿ 7ನೇ ವರ್ಷದ ಕ್ರಿಸ್ಮಸ್ ಸಂಭ್ರಮ ಕಾರ್ಯಕ್ರಮ ಸ್ವರ್ಗ ಆಶ್ರಮದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಅಮ್ಮ ಡ್ರೀಮ್ಸ್ ತಂಡದ ವಿಶೇಷ ಸಂಗೀತ ಕಾರ್ಯಕ್ರಮ ಜರಗಿತು. ಅದೇ ರೀತಿ 3 ಅಸಹಾಯಕ ಕುಟುಂಬಗಳಿಗೆ 2 ತಿಂಗಳ ತಲಾ 25 ಕೆಜಿ ಅಕ್ಕಿ, 3 ಅಸಹಾಯಕರಿಗೆ ತಲಾ 10 ಸಾವಿರ ರೂ. ಸಹಾಯಧನ ವಿತರಣೆ ಮಾಡಲಾಯಿತು.
ಹೋಮ್ ಡಾಕ್ಟರ್ ಫೌಂಡೇಶನ್ ಮುಖ್ಯಸ್ಥ ಡಾ.ಶಶಿಕಿರಣ್ ಶೆಟ್ಟಿ ಮಾತನಾಡಿದರು. ವೇದಿಕೆಯಲ್ಲಿ ಸಂಸ್ಥೆಯ ಡಾ.ಸುಮಾ ಎಸ್.ಶೆಟ್ಟಿ, ರಾಘವೇಂದ್ರ ಪೂಜಾರಿ, ಉದಯ ನಾಯ್ಕ್, ರಾಘವೇಂದ್ರ ಕರ್ವಾಲು ಮುಂತಾದವರು ಉಪಸ್ಥಿತರಿದ್ದರು.