ಉಡುಪಿ: ಉಡುಪಿ ನಗರ ಸಹಿತ ಜಿಲ್ಲೆಯ ವಿವಿಧಡೆ ಶನಿವಾರ ಮುಂಜಾನೆ ದಟ್ಟ ಮಂಜು ಆವರಿಸಿದ ವಾತಾವರಣ ಕಂಡುಬಂದಿದೆ.

ಮಳೆ ಕಡಿಮೆಯಾದ ತರುವಾಯ ಅಕ್ಟೋಬರ್ ಮೊದಲ ವಾರದಲ್ಲೇ ಈ ರೀತಿಯ ದಟ್ಟ ಮಂಜು ಆವರಿಸಿರುವುದು ಗಮನ ಸೆಳೆದಿದೆ. ಬೆಳಗ್ಗೆ 7:30ರ ನಂತರವೂ ಮಂಜು ಮುಸುಕಿದ ವಾತಾವರಣ ಮುಂದುವರಿದಿದ್ದು, ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.

ಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲಿ ಮಂಜು ಕಾಣಿಸಿಕೊಳ್ಳುತ್ತದೆ. ಆದರೆ ಈ ಬಾರಿ ಅಕ್ಟೋಬರ್ನಲ್ಲೇ ದಟ್ಟ ಮಂಜು ಕಾಣಿಸಿಕೊಂಡಿದ್ದು, ರೈತರು ಹಾಗೂ ತೋಟಗಾರರಲ್ಲಿ ಹವಾಮಾನ ವೈಪರೀತ್ಯದ ಕುರಿತು ಆತಂಕ ವ್ಯಕ್ತವಾಗಿದೆ.

ಇನ್ನೊಂದೆಡೆ, ಮಳೆ ಕೊರತೆ ಹಾಗೂ ಹವಾಮಾನದಲ್ಲಿನ ಬದಲಾವಣೆ ಮುಂದಿನ ದಿನಗಳಲ್ಲಿ ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ಬಗ್ಗೆ ಸಾರ್ವಜನಿಕರಲ್ಲಿ ಚಿಂತೆ ಮೂಡಿಸಿದೆ.

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor