ಮನರೇಗಾ ಯೋಜನೆಯ ಬದಲಾವಣೆಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಖಂಡನೆ
ಉಡುಪಿ, ಜ.11: ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ಅನುಷ್ಠಾನಗೊಳಿಸಿದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಬದಲಿಸುವ ಬಿಜೆಪಿ ನೇತೃತ್ವ ಕೇಂದ್ರ ಸರಕಾರದ ಕ್ರಮವನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಖಂಡಿಸಿದೆ.
ಜಿಲ್ಲಾ ಅಧ್ಯಕ್ಷ ಅಶೋಕಕುಮಾರ್ ಕೊಡವೂರು ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಇತ್ತೀಚೆಗೆ ನಡೆದ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಮನರೇಗಾ ಯೋಜನೆಯ ಹೆಸರನ್ನು ನರೇಂದ್ರ ಮೋದಿ ಸರಕಾರ ರಾಮ್ ಜಿ ಹೆಸರಲ್ಲಿ ಮಾಡಲು ಹೋಗಿ ಯುಪಿಎ ಸರ್ಕಾರ ಮಾಡಿರುವ ಉತ್ತಮ ಯೋಜನೆಯನ್ನು ದುರುಪಯೋಗಪಡಿಸುವ ಉದ್ದೇಶ ಹೊಂದಿದೆ ಎಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ವಿನಯ್‌ಕುಮಾರ್ ಸೊರಕೆ, ಮನರೇಗಾ ಯೋಜನೆಯನ್ನು ಬದಲಿಸುವ ಮೂಲಕ ಜನಸಾಮಾನ್ಯರಿಗೆ ದೊರಕುವ ಉದ್ಯೋಗ ಖಾತ್ರಿಯನ್ನು ಮೋದಿ ಸರಕಾರ ಕಸಿದುಕೊಂಡಿದೆ ಮತ್ತು ಪಂಚಾಯತ್ ಮಟ್ಟದಲ್ಲಿ ಇದ್ದ ಅಧಿಕಾರವನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸಿದೆ ಎಂದು ವಿವರಿಸಿ ಕೇಂದ್ರ ಸರಕಾರದ ಈ ಪಿತೂರಿಯನ್ನು ನಾವು ವಿರೋಧಿಸಬೇಕು ಎಂದರು.
ಮಾಜಿ ಸಚಿವ ಹಾಗೂ ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಯೋಜನೆಯಿಂದ ಜನಸಾಮಾನ್ಯರಿಗಾಗುವ ಪ್ರಯೋಜನ ಕಿತ್ತುಕೊಂಡು ಪಟ್ಟಭದ್ರ ಹಿತಾಸಕ್ತಿಗಳಿಗೆ ಈ ಯೋಜನೆಯ ಲಾಭ ಸಿಗುವಂತೆ ಮಾಡಲಾಗಿದೆ. ಇದನ್ನು ನಾವು ತೀವ್ರವಾಗಿ ವಿರೋಧಿಸಬೇಕಾಗಿದೆ ಎಂದು ಹೇಳಿದರು.
ಸಭೆಯಲ್ಲಿ ರಾಜ್ಯಮಟ್ಟದ ಕಾಂಗ್ರೆಸ್ ಸಮಿತಿಗಳಲ್ಲಿ ಅಧಿಕಾರ ಸ್ಥಾನ ಪಡೆದ ಗೀತಾ ವಾಗ್ಳೆ, ಜೇಬಾ ಸೆಲ್ವನ್, ಭಾನು ಭಾಸ್ಕರ್, ಅನಿತಾ ಡಿಸೋಜ, ಹಬೀಬ್ ಅಲಿ, ಚಂದ್ರಶೇಖರ್ ಮೆಂಡನ್‌ರನ್ನು ಗೌರವಿಸಲಾಯಿತು.
ಸಭೆಯಲ್ಲಿ ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಪೂರ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್‌ಹೆಗ್ಡೆ ಕೊಳ್ಕೆಬೈಲ್, ದಿನೇಶ ಹೆಗ್ಡೆ ಮೊಳಹಳ್ಳಿ, ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಜೇಬಾ ಸೆಲ್ವನ್, ಉದಯಕುಮಾರ್‌ಶೆಟ್ಟಿ ಮುನಿಯಾಲ್, ಹಿರಿಯಣ್ಣಬಿ., ನರಸಿಂಹಮೂರ್ತಿ, ದಿನೇಶ್ ಪುತ್ರನ್, ಮಹಾಬಲ ಕುಂದರ್, ನೀರೇ ಕೃಷ್ಣ ಶೆಟ್ಟಿ, ಗೀತಾ ವಾಗೆ,್ಲ ಬಿಪಿನ್ ಚಂದ್ರಪಾಲ್ ನಕ್ರೆ, ಶಬೀರ್ ಅಹ್ಮದ್, ಸರ್ಪುದ್ದೀನ್ ಶೇಖ್, ಕೃಷ್ಣ ಶೆಟ್ಟಿ ಬಜೆಗೋಳಿ, ರಮೇಶ್ ಕಾಂಚನ್, ವೈ. ಸುಕುಮಾರ್, ಗೋಪಿನಾಥ್ ಭಟ್, ಶುಭದ ರಾವ್ ಕಾರ್ಕಳ, ಹರಿಪ್ರಸಾದ್ ಶೆಟ್ಟಿ, ಮಮತಾ ಶೆಟ್ಟಿ, ಕೀರ್ತಿ ಶೆಟ್ಟ್ವಿ, ಹಬೀಬ್ ಆಲಿ, ಕಿರಣ್ ಹೆಗ್ಡೆ, ಸರಸು ಬಂಗೇರ, ರೋಶನಿ ಒಲಿವರಾ , ಡಾ. ಸುನಿತಾ ಶೆಟ್ಟಿ, ಮೀನಾಕ್ಷಿ ಮಾಧವ ಬನ್ನಂಜೆ, ಗೋಪಿ ನಾಯ್ಕ, ಸಂಧ್ಯಾ ತಿಲಕ್, ಸುರೇಶ್ ಶೆಟ್ಟಿ ಬನ್ನಂಜ್ವೆ, ಜಯಕುಮಾರ್, ಉದ್ಯಾವರ ನಾಗೇಶ್ ಕುಮಾರ್‌ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್‌ನ ಹಿರಿಯ ಉಪಾಧ್ಯಕ್ಷ ವಾಸುದೇವ ಯಡಿಯಾಳ್ ಸ್ವಾಗತಿಸಿ, ಸಹಕಾರಿ ಕಾಂಗ್ರೆಸ್ ಅಧ್ಯಕ್ಷ ಅಣ್ಣಯ್ಯ ಸೇರಿಗಾರ್ ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲಾ ವಕ್ತಾರ ಭಾಸ್ಕರ್ ರಾವ್ ಕಿದಿಯೂರ್ ವಂದಿಸಿದರು.