×
Ad

ಉಡುಪಿ ಜಿಲ್ಲೆಯ ನಕ್ಸಲ್ ಪ್ರಕರಣಗಳು | 39 ಪ್ರಕರಣಗಳ ನ್ಯಾಯಾಂಗ ವಿಚಾರಣೆ, 28 ಕೇಸು ವಿಲೇವಾರಿ : ಎಸ್ಪಿ

Update: 2025-12-22 19:41 IST

ಹರಿರಾಂ ಶಂಕರ್

ಉಡುಪಿ : ಜಿಲ್ಲೆಯಲ್ಲಿ 2003ರಲ್ಲಿ ಕಾಣಿಸಿಕೊಂಡ ನಕ್ಸಲ್ ಚಟುವಟಿಕೆ ಸಂಬಂಧ ಈವರೆಗೆ ದಾಖಲಾದ ಒಟ್ಟು 68 ಪ್ರಕರಣಗಳಲ್ಲಿ 39 ಪ್ರಕರಣಗಳು ನ್ಯಾಯಾಂಗ ವಿಚಾರಣೆಯಲ್ಲಿದ್ದು, 28 ಪ್ರಕರಣಗಳು ವಿಲೇವಾರಿಯಾಗಿದೆ. ಇದರಲ್ಲಿ ಒಂದು ಪ್ರಕರಣ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಲು ಬಾಕಿ ಇದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.

ಮೂವರು ಆರೋಪಿಗಳ ವಿರುದ್ಧ ಹೆಚ್ಚುವರಿ ದಾಖಲಾತಿ ಸಲ್ಲಿಸಲು ಬಾಕಿ ಇದೆ. ಒಂದು ಪ್ರಕರಣ ಸಿಐಡಿ ತನಿಖೆಯಲ್ಲಿದೆ. ಕಳೆದ 6 ತಿಂಗಳಲ್ಲಿ 39 ಪ್ರಕರಣಗಳಲ್ಲಿ 11 ಜನ ನಕ್ಸಲ್ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಈ 39 ಪ್ರಕರಣಗಳಲ್ಲಿ ಹಾಜರುಪಡಿಸಿದ ಆರೋಪಿಗಳ ವಿರುದ್ಧ ನ್ಯಾಯಾಲಯದಲ್ಲಿ ಚಾರ್ಜ್ ಪ್ರೇಮ್ ಆಗಿದ್ದು, ನ್ಯಾಯಾಲಯದ ವಿಚಾರಣೆಯಲ್ಲಿದೆ ಎಂದು ಅವರು ತಿಳಿಸಿದರು.

ಕಳಸದ ಎಂ.ವನಜಾಕ್ಷಿ ಯಾನೆ ಜ್ಯೋತಿ ಯಾನೆ ಕಲ್ಪನ(58) ಸದ್ಯ ಬೆಂಗಳೂರು ಸೆಂಟ್ರಲ್ ಜೈಲ್ ನಲ್ಲಿದ್ದು, ಇವರ ವಿರುದ್ಧ ಆರು ಪ್ರಕರಣಗಳಲ್ಲಿ ಜಾರ್ಜ್ ಪ್ರೇಮ್ ಆಗಿದೆ. ಶೃಂಗೇರಿಯ ಬಿ.ಜಿ.ಕೃಷ್ಣಮೂರ್ತಿ ಯಾನೆ ವಿಜಯ್(46) ಸದ್ಯ ಕೇರಳ ರಾಜ್ಯದ ವಿಯೂರ್ ತ್ರಿಶೂರ್ ಹೈ ಸೆಕ್ಯೂರಿಟಿ ಪ್ರಿಸನ್ ನಲ್ಲಿದ್ದಾರೆ. ಇವರ ವಿರುದ್ಧ 7 ಪ್ರಕರಣಗಳಲ್ಲಿ ಜಾರ್ಜ್ ಪ್ರೇಮ್ ಆಗಿದೆ.

ಕಳಸದ ಸಾವಿತ್ರಿ ಜೆ.ಎಲ್. ಯಾನೆ ಉಷಾ(33) ಸದ್ಯ ಕೇರಳ ರಾಜ್ಯದ ತ್ರಿಶೂರ್ನಲ್ಲಿರುವ ಮಹಿಳಾ ಕಾರಾಗೃಹದಲ್ಲಿದ್ದಾರೆ. ಇವರ ವಿರುದ್ಧ ಎರಡು ಪ್ರಕರಣಗಳಲ್ಲಿ ಜಾರ್ಜ್ ಪ್ರೇಮ್ ಆಗಿದೆ. ಕೊಪ್ಪದ ನೀಲಗುಳಿ ಪದ್ಮನಾಭ ಜಾಮೀನು ಪಡೆದು ಬಿಡುಗಡೆಗೊಂಡಿದ್ದು, ಇವರ ವಿರುದ್ಧ 2 ಪ್ರಕರಣಗಳಲ್ಲಿ ಜಾರ್ಜ್ ಪ್ರೇಮ್ ಆಗಿದೆ.

ಕುಂದಾಪುರ ಮಚ್ಚಟ್ಟು ಗ್ರಾಮದ ತೊಂಬಟ್ಟು ಲಕ್ಷ್ಮಿ(39) ಜಾಮೀನು ಪಡೆದುಕೊಂಡಿದ್ದು, ಇವರ ವಿರುದ್ಧ ಮೂರು ಪ್ರಕರಣಗಳಲ್ಲಿ ಜಾರ್ಜ್ ಪ್ರೇಮ್ ಆಗಿದೆ. ಶೃಂಗೇರಿಯ ಲತಾ ಯಾನೆ ಮುಂಡಗಾರು ಲತಾ(45) ಬೆಂಗಳೂರು ಸೆಂಟ್ರಲ್ ಜೈಲ್ ನಲ್ಲಿದ್ದು, ಇವರ ವಿರುದ್ಧ 12 ಪ್ರಕರಣಗಳಲ್ಲಿ ಜಾರ್ಜ್ ಪ್ರೇಮ್ ಆಗಿದೆ.

ರಾಯಚೂರು ಜಿಲ್ಲೆಯ ಮಾನ್ವಿಯ ಮಹೇಶ ಯಾನೆ ಮಾದವ(49) ಸದ್ಯ ಕೇರಳ ರಾಜ್ಯದ ತ್ರಿಶೂರ್ ಹೈ ಸೆಕ್ಯೂರಿಟಿ ಪ್ರಿಸನ್ನಲ್ಲಿದ್ದು, 8 ಪ್ರಕರಣಗಳಲ್ಲಿ ಜಾರ್ಜ್ ಪ್ರೇಮ್ ಆಗಿದೆ. ಕಳಸದ ಕನ್ಯಾಕುಮಾರಿ ಬೆಂಗಳೂರು ಸೆಂಟ್ರಲ್ ಜೈಲ್ ನಲ್ಲಿದ್ದು, ಇವರ ವಿರುದ್ಧದ 10 ಪ್ರಕರಣಗಳಲ್ಲಿ ಜಾರ್ಜ್ ಪ್ರೇಮ್ ಆಗಿದೆ. ಎ.ಎಸ್.ಸುರೇಶ್ ಯಾನೆ ಮಹೇಶ್(50) ಕೇರಳ ರಾಜ್ಯದ ಕಣ್ಣೂರು ಸೆಂಟ್ರಲ್ ಪ್ರಿಸನ್ ನಲ್ಲಿದ್ದು, ಇವರ ವಿರುದ್ಧದ 23 ಪ್ರಕರಣಗಳಲ್ಲಿ ಜಾರ್ಜ್ ಪ್ರೇಮ್ ಆಗಿದೆ.

ಬೆಳ್ತಂಗಡಿ ಕುತ್ಲೂರಿನ ಸುಂದರಿ ಯಾನೆ ಗೀತಾ, ಸದ್ಯ ಪರಪ್ಪನ ಅಗ್ರಹಾರ ಬೆಂಗಳೂರು ಸೆಂಟ್ರಲ್ ಜೈಲ್ ನಲ್ಲಿದ್ದು, ಇವರ ವಿರುದ್ಧ 9 ಪ್ರಕರಣಗಳಲ್ಲಿ ಜಾರ್ಜ್ ಪ್ರೇಮ್ ಆಗಿದೆ. ಆಗುಂಬೆಯ ಪ್ರಭಾ ಯಾನೆ ಹೊಸಗದ್ದೆ ಪ್ರಭಾ ತಮಿಳುನಾಡು ವೆಲ್ಲೂರಿನ ಸಾಯಿ ಓಲ್ಡ್ ಏಜ್ ಹೋಮ್ ನಲ್ಲಿದ್ದು, ಇವರ ವಿರುದ್ಧ 6 ಪ್ರಕರಣಗಳಲ್ಲಿ ಜಾರ್ಜ್ ಪ್ರೇಮ್ ಆಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News