×
Ad

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸುಜಿ ಕುರ್ಯ ಪ್ರ.ಕಾರ್ಯದರ್ಶಿಯಾಗಿ ನಝೀರ್ ಪೊಲ್ಯ, ಕೋಶಾಧಿಕಾರಿಯಾಗಿ ಹರೀಶ್ ಆಯ್ಕೆ

Update: 2025-11-09 18:31 IST

ಸುಜಿ ಕುರ್ಯ / ನಝೀರ್ ಪೊಲ್ಯ / ಹರೀಶ್ ಕುಂದರ್

ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ವಿಜಯ ಕರ್ನಾಟಕ ಪತ್ರಿಕೆಯ ಉಡುಪಿ ಜಿಲ್ಲಾ ಹಿರಿಯ ವರದಿಗಾರ ಸುಬ್ರಹ್ಮಣ್ಯ ಜಿ.ಭಟ್(ಸುಜಿ ಕುರ್ಯ), ಪ್ರಧಾನ ಕಾರ್ಯದರ್ಶಿಯಾಗಿ ವಾರ್ತಾಭಾರತಿ ಪತ್ರಿಕೆಯ ಉಡುಪಿ ಜಿಲ್ಲಾ ವರದಿಗಾರ ನಝೀರ್ ಪೊಲ್ಯ ಹಾಗೂ ಕೋಶಾಧಿಕಾರಿ ಸುವರ್ಣ ಚಾನೆಲ್ ಉಡುಪಿ ಜಿಲ್ಲಾ ವಿಡಿಯೋ ಜರ್ನಲಿಸ್ಟ್ ಹರೀಶ್ ಕುಂದರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2025-2028ನೇ ಸಾಲಿಗೆ ನಡೆದ ಚುನಾವಣೆಯಲ್ಲಿ ಈ ಆಯ್ಕೆ ಮಾಡಲಾಗಿದೆ. ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಉಡುಪಿ ಜಿಲ್ಲಾ ವಾರ್ತಾ ಇಲಾಖೆಯ ಅಧಿಕಾರಿ ಮಂಜುನಾಥ್ ಈ ಬಗ್ಗೆ ಇಂದು ಅಧಿಕೃತವಾಗಿ ಘೋಷಣೆ ಮಾಡಿದರು.

ರಾಜ್ಯ ಕಾರ್ಯಕಾರಿಣಿ ಸಮಿತಿಯ ಸದಸ್ಯ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಮೂವರು ಸ್ಪರ್ಧಿಸಿದ್ದು, ಇದರಲ್ಲಿ ಉದಯವಾಣಿ ಪತ್ರಿಕೆಯ ಫೋಟೋ ಜರ್ನಲಿಸ್ಟ್ ಆಸ್ಟ್ರೋ ಮೋಹನ್ 44 ಮತಗಳ ಅಂತರದಿಂದ ವಿಜಯಶಾಲಿಯಾಗಿದ್ದಾರೆ.

ಅದೇ ರೀತಿ ಉಪಾಧ್ಯಕ್ಷರುಗಳಾಗಿ ಉಡುಪಿ ಮಿತ್ರ ಪತ್ರಿಕೆಯ ಸಂಪಾದಕ ಪ್ರಭಾಕರ ಆಚಾರ್ಯ ಚಿತ್ತೂರು, ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರ ಉದಯ ಕುಮಾರ್ ಮುಂಡ್ಕೂರು, ಉದಯವಾಣಿ ಹೆಬ್ರಿ ವರದಿಗಾರ ಉದಯ ಕುಮಾರ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಗಳಾಗಿ ಜಯಕಿರಣ ಪತ್ರಿಕೆಯ ಉಡುಪಿ ವರದಿಗಾರ ಉಮೇಶ್ ಮಾರ್ಪಳ್ಳಿ, ಕರಾವಳಿ ಅಲೆ ವರದಿಗಾರ ಸುರೇಶ್ ಎರ್ಮಾಳ್ ಹಾಗೂ ಉದಯವಾಣಿ ಪತ್ರಿಕೆಯ ವರದಿಗಾರ ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರುಗಳಾಗಿ ಪ್ರಜ್ವಲ್ ಅಮೀನ್ ಟಿವಿ 9, ಜನಾರ್ದನ ಕೊಡವೂರು ಸಂಜೆ ಪ್ರಭ, ಚೇತನ್ ಮಟಪಾಡಿ ಪಬ್ಲಿಕ್ ಟಿವಿ, ಮುಹಮ್ಮದ್ ಶರೀಫ್ ವಾರ್ತಾಭಾರತಿ, ರಮಾನಂದ ಅಜೆಕಾರು ಕನ್ನಡ ಪ್ರಭ, ಯೋಗೀಶ್ ಕುಂಭಾಶಿ ವಾರ್ತಾಭಾರತಿ, ಬಿ.ರಾಘವೇಂದ್ರ ಪೈ ವಿಜಯವಾಣಿ, ಕೆ.ಚಂದ್ರಶೇಖರ್ ಚಾಲುಕ್ಯ, ಪ್ರಮೋದ್ ಸುವರ್ಣ ನಮ್ಮ ಕುಡ್ಲ, ವಿಜಯ ಆಚಾರ್ಯ ಉಚ್ಚಿಲ ಉದಯವಾಣಿ, ಪ್ರವೀಣ್ ಮುದ್ದೂರು ಉದಯವಾಣಿ, ಮೋಹನ್ ಉಡುಪ ವಿಜಯ ಕರ್ನಾಟಕ, ಸುಕುಮಾರ್ ಮುನಿಯಾಲು ಪ್ರಜಾವಾಣಿ ಅವರನ್ನು ಆಯ್ಕೆ ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News