ನ.11ರಂದು ಉಡುಪಿ ಫುಲ್ ಮ್ಯಾರಥಾನ್
ಉಡುಪಿ, ಜ.9: ಉಡುಪಿ ಜಿಲ್ಲಾಡಳಿತ, ಎನ್‌ಇಬಿ ಸ್ಪೋರ್ಟ್ಸ್ ಬೆಂಗಳೂರು ಮತ್ತುಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಫುಲ್ ಮ್ಯಾರಥಾನ್ ನ.11ರಂದು ಬೆಳಿಗ್ಗೆ 4ಗಂಟೆಗೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈಗಾಗಲೇ ಈ ಸ್ಪರ್ಧೆಯ ಎಲ್ಲಾ ವಿಭಾಗಗಳಲ್ಲಿ 5500 ಕ್ರೀಡಾಪಟುಗಳು ನೋಂದಣಿ ಮಾಡಿಕೊಂಡಿದ್ದು, ಎಲ್ಲಾ ವಿಭಾಗಗಳಿಗೆ ಒಟ್ಟು 10 ಲಕ್ಷ ರೂ. ನಗದು ಬಹುಮಾನ ನೀಡಲಾಗುವುದು. ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ವಹಿಸಲಿರುವರು.
ಬಹುಮಾನ ವಿತರಣಾ ಸಮಾರಂಭವು ಬೆಳಿಗ್ಗೆ 9.30ಕ್ಕೆ ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆಯಲಿದೆ. ಮ್ಯಾರಥಾನ್ ಸ್ಪರ್ಧೆಯು ಬೆಳಿಗ್ಗೆ 4 ಗಂಟೆಗೆ, ಹಾಫ್ ಮ್ಯಾರಥಾನ್ ಬೆಳಿಗ್ಗೆ 5.30ಕ್ಕೆ, 10 ಕಿ.ಮೀ. ಓಟ ಬೆಳಗ್ಗೆ 6.30ಕ್ಕೆ ಹಾಗೂ 5 ಕಿ.ಮೀ. ಫನ್ ರನ್ ಬೆಳಗ್ಗೆ 7.30ಕ್ಕೆ ಆರಂಭಗೊಳ್ಳಲಿದೆ. ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿ ಗಾಗಿ 3 ಕಿ.ಮೀ ಮತ್ತು 5 ಕಿ.ಮೀ ಓಟ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯು ಬೆಳಿಗ್ಗೆ 7.45ರ ನಂತರ ಪ್ರಾರಂಭಗೊಳ್ಳಲಿದೆ. ಮೊದಲ ಆರು ಸ್ಥಾನಗಳಿಗೆ ನಗದು ಬಹುಮಾನಗಳನ್ನು ನೀಡಲಾಗುವುದು ಎಂದು ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಹರಿಪ್ರಸಾದ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.