ಉಡುಪಿ | ಎಕೆಎಂಎಸ್ ಬಸ್ ಮಾಲಕ ಸೈಫುದ್ದೀನ್ ಬರ್ಬರ ಹತ್ಯೆ
Update: 2025-09-27 13:33 IST
ಸೈಫುದ್ದೀನ್ ಆತ್ರಾಡಿ
ಮಲ್ಪೆ: ಎಕೆಎಂಎಸ್ ಬಸ್ ಮಾಲಕ ಸೈಪು ಯಾನೇ ಸೈಫುದ್ದೀನ್ ಆತ್ರಾಡಿಯನ್ನು ಹತ್ಯೆಗೈದಿರುವ ಘಟನೆ ಇಂದು(ಶನಿವಾರ) ಬೆಳಿಗ್ಗೆ ಕೊಡವೂರು ಸಮೀಪದ ಸಾಲ್ಮರ ಎಂಬಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಸೈಫುದ್ದೀನ್ ಅವರು ತಮ್ಮ ಮನೆಯಲ್ಲಿ ಒಬ್ಬರೇ ಇರುವ ವೇಳೆ ಆಗಮಿಸಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವುದಾಗಿ ತಿಳಿದುಬಂದಿದೆ.
ಸ್ಥಳಕ್ಕೆ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಡಿವೈಎಸ್ಪಿ ಪ್ರಭು ಡಿಟಿ ಮೊದಲಾದವರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.