×
Ad

ಉಡುಪಿ | ಡಿ.29ರಂದು ನಿಧಿ ಆಪ್ಕೆ ನಿಕಟ್

Update: 2025-12-22 19:31 IST

ಉಡುಪಿ, ಡಿ.22: ನಿಧಿ ಆಪ್ಕೆ ನಿಕಟ್/ ಭವಿಷ್ಯನಿಧಿ ನಿಮ್ಮ ಹತ್ತಿರ ಎಂಬುದು ಭವಿಷ್ಯ ನಿಧಿ ಸದಸ್ಯರ ಹಾಗೂ ಪಿಂಚಣಿದಾರರ ಕುಂದುಕೊರತೆಗಳನ್ನು ಪರಿಹರಿಸಲು ಮತ್ತು ಜಾಗೃತಿ ಮೂಡಿಸಲು ಭವಿಷ್ಯ ನಿಧಿ ಸಂಘಟನೆಯ ಪ್ರಧಾನ ಕಚೇರಿ ಇರುವ ಹೊಸದಿಲ್ಲಿಯಿಂದ ಪ್ರಾರಂಭಿಸಲಾದ ಜಿಲ್ಲಾ ವಾರ್ಷಿಕ ಕಾರ್ಯಕ್ರಮ.

ಇದರಂತೆ ಡಿಸೆಂಬರ್ ತಿಂಗಳ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ ಇದೇ ಡಿ.29ರಂದು ಬೆಳಗ್ಗೆ 11:30ರಿಂದ ಉಡುಪಿ ಎ.ಜೆ.ಅಲ್ಸೆ ರಸ್ತೆಯ ಅಲಂಕಾರ್ ಥಿಯೇಟರ್ ಹಿಂಭಾಗದಲ್ಲಿರುವ ‘ಪ್ರಸಾದ್ ನೇತ್ರಾಲಯ ಕಣ್ಣಿನ ಆಸ್ಪತ್ರೆ’ಯಲ್ಲಿ ನಡೆಯಲಿದೆ.

ನಿಧಿ ಆಪ್ಕೆ ನಿಕಟ್ ಎಂಬುದು ತನ್ನ ಲಕ್ಷಾಂತರ ಚಂದಾದಾರರಿಗೆ ತನ್ನ ವಿವಿಧ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು ಭವಿಷ್ಯ ನಿಧಿ ಸಂಸ್ಥೆ ನಡೆಸುವ ಪ್ರಯತ್ನವಾಗಿದೆ. ಇದರ ಪ್ರಾಥಮಿಕ ಗಮನ ಜಿಲ್ಲೆಯನ್ನು ಕೇಂದ್ರೀಕರಿಸುವ, ಒಗ್ಗೂಡಿಸುವ ಮತ್ತು ಸುಸಂಬದ್ಧವಾದ ಕಾರ್ಯಕ್ರಮದ ಗುರಿಯನ್ನು ಹೊಂದಿದೆ.

ಇದು ಉದ್ಯೋಗದಾತರು ಹಾಗೂ ಉದ್ಯೋಗಿಗಳಿಗೆ ಸಹಭಾಗಿತ್ವದ ಅರಿವು ಮೂಡಿಸುವ ಕಾರ್ಯಕ್ರಮವಾಗಿದ್ದು, ಸದಸ್ಯರ ಕುಂದುಕೊರತೆ ಪರಿಹಾರ ಮತ್ತು ಮಾಹಿತಿ ವಿನಿಮಯ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತದೆ.

ಡಿ.29ರ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮದಲ್ಲಿ ಎಲ್ಲಾ ಪಿಎಫ್ ಚಂದಾದಾರರು, ಇಪಿಎಸ್ ಪಿಂಚಣಿದಾರರು, ಪಿಎಫ್ ವ್ಯಾಪ್ತಿಗೆ ಒಳಪಡುವ ಸಂಸ್ಥೆಗಳ ಉದ್ಯೋಗದಾತರು, ಟ್ರೇಡ್ ಯೂನಿಯನ್ ಮುಖಂಡರು ಮತ್ತು ಸದಸ್ಯರು ಹಾಜರಿದ್ದು, ಪ್ರಯೋಜನ ಪಡೆದುಕೊಳ್ಳುವಂತೆ ಉಡುಪಿ ಪ್ರಾದೇಶಿಕ ಕಾರ್ಯಾಲಯದ ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News