×
Ad

Udupi | ಅಗ್ನಿ ಅವಘಢ: ಹಳೆಯ ಶಾಲಾ ಬಸ್ ಬೆಂಕಿಗಾಹುತಿ

Update: 2025-12-01 21:13 IST

ಉಡುಪಿ: ಒಣ ಹುಲ್ಲಿಗೆ ಹತ್ತಿಕೊಂಡ ಬೆಂಕಿಯಿಂದ ಹಳೆಯ ಶಾಲಾ ಬಸ್‌ವೊಂದು ಸಂಪೂರ್ಣ ಸುಟ್ಟು ಹೋದ ಘಟನೆ ಮಣಿಪಾಲ ಅಲೆವೂರು ಪ್ರಗತಿ ನಗರದ ಕೇಂದ್ರೀಯ ವಿದ್ಯಾಲಯ ಪರಿಸರದಲ್ಲಿ ಸೋಮವಾರ ಸಂಜೆ ನಡೆದಿದೆ.

ಅಲೆವೂರು ಪ್ರಗತಿ ನಗರ ಪರಿಸರದಲ್ಲಿ ಒಣ ಹುಲ್ಲಿಗೆ ತಗಲಿದ ಬೆಂಕಿ ಪರಿಸರವಿಡಿ ವ್ಯಾಪಿಸಿದೆ. ಅಲ್ಲೇ ಸಮೀಪ ನಿಲ್ಲಿಸಿದ್ದ ಹಳೆಯ ಖಾಸಗಿ ಶಾಲಾ ಬಸ್ ಬೆಂಕಿಗಾಹುತಿಯಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಮಲ್ಪೆ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಅವಘಡದಿಂದ ಬಸ್ ಸಂಪೂರ್ಣ ಸುಟ್ಟು ಕರಕಲಾಗಿತ್ತು ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News