×
Ad

ಉಡುಪಿ | ಸ್ಕೂಟರ್‌ನಲ್ಲಿ ಅಪಾಯಕಾರಿ ಸ್ಟಂಟ್ ಮಾಡುವ ರೀಲ್ಸ್ ವೈರಲ್; ಓರ್ವ ಯುವಕನ ಬಂಧನ

Update: 2023-08-03 14:15 IST

ಉಡುಪಿ, ಆ.3,: ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮಾರ್ಗದಲ್ಲಿ ಬುಧವಾರ ಅಪಾಯಕಾರಿ ರೀತಿಯಲ್ಲಿ ಸ್ಕೂಟರ್ ಸ್ಟಂಟ್ ಮಾಡಿ ಅದರ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟ ಯುವಕರಿಬ್ಬರ ಪೈಕಿ ಒಬ್ಬನನ್ನು ಪೊಲೀಸರು ಬಂಧಿಸಿ ಸ್ಕೂಟರ್ ವಶ ಪಡಿಸಿಕೊಂಡಿದ್ದಾರೆ. ಬಂಧಿತನನ್ನು 19 ವರ್ಷದ‌ ಪರ್ಕಳ ನಿವಾಸಿ ಅಶಿಕ್ ಎಂದು ಗುರುತಿಸಲಾಗಿದೆ.

ವೀಡಿಯೊದಲ್ಲಿ ಇಬ್ಬರು ಯುವಕರು ಸ್ಕೂಟರ್ ನಲ್ಲಿ ಡಿಸಿ ಕಚೇರಿ ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿರುವಂತೆ ಅಪಾಯಕಾರಿ ರೀತಿಯಲ್ಲಿ ಸ್ಟಂಟ್ ಮಾಡುತ್ತಿರುವುದು ಕಂಡುಬರುತಿದ್ದು, ಇತರ ವಾಹನ ಚಾಲಕರಿಗೂ ಇದು ಅಪಾಯ ಉಂಟು ಮಾಡುವ ಸಾಧ್ಯತೆ ಇತ್ತು.ಈ ಅಪಾಯಕಾರಿ ರೀತಿಯ ರೀಲ್ಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ತಕ್ಷಣ ಕಾರ್ಯಾಚರಣೆ ಗಿಳಿದ ಪೊಲೀಸರು ಉಡುಪಿ ರಿಜಿಸ್ಟ್ರೇಶನ್ ಆದ ಸ್ಕೂಟರ್ ಪತ್ತೆ ಹಚ್ಚಿ ಅದನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News