ಉಡುಪಿ: ವೆಸ್ಟ್‌ಸೈಡ್ ಸ್ಟೋರ್‌ನಲ್ಲಿಟ್ಟಿದ್ದ 10ಲಕ್ಷ ರೂ. ಕಳವು
Update: 2025-11-09 23:33 IST
ಉಡುಪಿ: ಕುಂಜಿಬೆಟ್ಟುವಿನಲ್ಲಿರುವ ವೆಸ್ಟ್ ಸೈಡ್ ಬಟ್ಟೆಯಂಗಡಿಯ ಲಾಕರ್‌ನಲ್ಲಿ ಇಟ್ಟಿದ್ದ ಲಕ್ಷಾಂತರ ರೂ. ಕಳವಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ.22ರಂದು ವೆಸ್ಟ್‌ಸೈಡ್ ಸ್ಟೋರ್‌ನ ವ್ಯವಹಾರ ಮುಗಿದ ನಂತರ ರಾತ್ರಿ ವ್ಯವಸ್ಥಾಪಕರು ಬೀಗ ಹಾಕಿದ್ದು, ಅ.23ರಂದು ಬೆಳಗ್ಗೆ ಸ್ಟೋರ್ ಬಾಗಿಲು ತೆಗೆದು, ಸೇಫ್ ಲಾಕರ್ ತೆರೆದು ನೋಡಿದಾಗ ಅದರಲ್ಲಿಟ್ಟಿದ್ದ 10,10,336ರೂ. ಕಳವಾಗಿರುವುದು ಕಂಡುಬಂದಿದೆ. ಅದೇ ರೀತಿ ಆ ದಿನದ ಸಿಸಿಟಿವಿ ಫೂಟೆಜ್ ಕೂಡ ಕಾಣೆಯಾಗಿರುವುದು ಕಂಡು ಬಂದಿದೆ.