×
Ad

ಉಡುಪಿ : ಉಪವಲಯ ಅರಣ್ಯಾಧಿಕಾರಿಗಳ ಸಂಘದ ರಜತ ಸಂಭ್ರಮ

Update: 2025-12-26 21:15 IST

ಉಡುಪಿ: ಉಡುಪಿ ಜಿಲ್ಲೆ ಉಪವಲಯ ಅರಣ್ಯಾಧಿಕಾರಿಗಳ ಸಂಘದ ರಜತ ಸಂಭ್ರಮ, ನೂತನತ ವರ್ಷದ ಡೈರಿ ಬಿಡುಗಡೆ, ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ, ರಕ್ತದಾನಿಗಳಿಗೆ ಗೌರವ, ಪ್ರತಿಭಾ ಪುರಸ್ಕಾರ ಸಮಾರಂಭ ಮುಂದಿನ ವರ್ಷದ ಜ.4ರಂದು ಬೆಳಗ್ಗೆ 9:30ಕ್ಕೆ ಉಡುಪಿಯ ಕಿದಿಯೂರು ಹೊಟೇಲಿನ ಶೇಷಶಯನ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ನಾಗೇಶ ಬಿಲ್ಲವ ತಿಳಿಸಿದ್ದಾರೆ.

ಉಡುಪಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2000ನೇ ಸಾಲಿನಲ್ಲಿ ಪ್ರಾರಂಭಗೊಂಡ ನಮ್ಮ ಸಂಘವನ್ನು ಪ್ರಾರಂಭದಲ್ಲಿ ವನಪಾಲಕರ ಸಂಘ, ಅರಣ್ಯಪಾಲಕರ ಸಂಘ ಎಂದು ಕರೆಸಿಕೊಳ್ಳುತಿದ್ದು, ಇದೀಗ ಉಪವಲಯ ಅರಣ್ಯಾಧಿಕಾರಿಗಳ ಸಂಘ ಎಂದು ನಾಮಾಂಕಿತ ಗೊಂಡಿದೆ ಎಂದರು.

ನಮ್ಮ ಸಂಘದ ಪ್ರಮುಖ ಕಾರ್ಯಕ್ರಮ ಪ್ರತಿವರ್ಷ ನಡೆಯುವ ರಕ್ತದಾನ ಶಿಬಿರ. ಅರಣ್ಯ ಹುತಾತ್ಮರ ದಿನದಂಗವಾಗಿ, ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ನಡೆಯುವ ಈ ಶಿಬಿರದಲ್ಲಿ ನೂರಾರು ಯುನಿಟ್ ರಕ್ತೆವನ್ನು ಸಂಗ್ರಹಿಸಿ ನೀಡಲಾಗುತ್ತಿದೆ. 2025ರಲ್ಲಿ 155 ಯುನಿಟ್ ರಕ್ತವನ್ನು ದಾನ ಮಾಡಿದ್ದೇವೆ ಎಂದು ನಾಗೇಶ್ ಬಿಲ್ಲವ ತಿಳಿಸಿದರು.

ಅಲ್ಲದೇ ಪ್ರತಿವರ್ಷ ಜಿಲ್ಲಾಮಟ್ಟದಲ್ಲಿ, ಅಂತರಜಿಲ್ಲಾ ಮಟ್ಟದಲ್ಲಿ ಅರಣ್ಯ, ಪರಿಸರ ಹಾಗೂ ವನ್ಯಜೀವಿಗಳ ಕುರಿತು ನಡೆಸುವ ಚಿತ್ರಕಲಾ ಸ್ಪರ್ಧೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸುತಿದ್ದಾರೆ ಎಂದ ಅವರು ಈ ಬಾರಿ ರಜತ ಮಹೋತ್ಸವದ ಸಂದರ್ಭದಲ್ಲಿ ಅನಾರೋಗ್ಯ ಪೀಡಿತರಿಗೆ ಹಾಗೂ ಅನಾಥಾಶ್ರಮದವರಿಗೆ ಧನ ಸಹಾಯ ಮಾಡಲಾಗುವುದು ಎಂದರು.

ಈ ಬಾರಿಯ ಕಾರ್ಯಕ್ರಮವನ್ನು ಅದಾನಿ ಪವರ್‌ನ ಅಧ್ಯಕ್ಷ ಕಿಶೋರ್ ಆಳ್ವ ಉದ್ಘಾಟಿಸಲಿದ್ದಾರೆ. ಶಾಸಕರಾದ ಯಶಪಾಲ ಸುವರ್ಣ, ಉಮಾನಾಥ ಕೋಟ್ಯಾನ್ ಅಲ್ಲದೇ ವಿನಯಕುಮಾರ್ ಸೊರಕೆ, ಕೆ.ರಘುಪತಿ ಭಟ್, ಡಿಸಿ ಸ್ವರೂಪ ಟಿ.ಕೆ. ಭಾಗವಹಿಸಲಿದ್ದಾರೆ.

ಮಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಡಾ.ವಿ.ಕರಿಕಲನ್, ಕುಂದಾಪುರ ಪ್ರಾದೇಶಿಕ ವಿಭಾಗದ ಉಪಅರಣ್ಯ ಸಂರಕ್ಷಣಾದಿಕಾರಿ ಗಣಪತಿ ಕೆ., ಕುದುರೆಮುಖ ವನ್ಯಜೀವಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಸಿವರಾಮ ಬಾಬು, ಉಡುಪಿ ಸಾಮಾಜಿಕ ಅರಣ್ಯ ವಿಭಾಗದ ರವೀಂದ್ರ ಕುಮಾರ್ ಡಿ.ಎನ್.ಉಪಸ್ಥಿತರಿರುವರು.

ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ರವಿ, ಖಜಾಂಚಿ ಗೋವಿಂದ ಎಂ.ಪಟಗಾರ್, ಜೊತೆ ಕಾರ್ಯದರ್ಶಿ ನಾಗರಾಜ್, ಸಂಘಟನಾ ಕಾರ್ಯದರ್ಶಿ ಜಿ.ಕೃಷ್ಣಪ್ಪ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News