ಉಡುಪಿ ತಾಲೂಕು ಕೃಷಿಕ ಸಮಾಜದ ಚುನಾವಣೆ: ನಾಮಪತ್ರ ಸಲ್ಲಿಕೆಗೆ ಅವಕಾಶ
Update: 2026-06-08 20:44 IST
ಸಾಂದರ್ಭಿಕ ಚಿತ್ರ
ಉಡುಪಿ : ಕರ್ನಾಟಕ ಪ್ರದೇಶ ಕೃಷಿಕ ಸಮಾಜದ 5 ವರ್ಷಗಳ ಅವಧಿಗೆ ಉಡುಪಿ ತಾಲೂಕು ಮಟ್ಟದ ಕೃಷಿಕ ಸಮಾಜದ ಚುನಾವಣೆಯನ್ನು, ಜುಲೈ 11ರ ಶನಿವಾರ ಉಡುಪಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಬೆಳಗ್ಗೆ 8:00ರಿಂದ ಅಪರಾಹ್ನ 3:00 ಗಂಟೆಯವರೆಗೆ ನಿಗದಿಪಡಿಸಲಾಗಿದೆ.
ಈ ಚುನಾವಣೆಗೆ ನಾಮಪತ್ರ ಸಲ್ಲಿಸುವ ಉಮೇದುದಾರರಿಗೆ ಜೂನ್ 30 ರಿಂದ ಉಡುಪಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಾಮಪತ್ರ ವಿತರಿಸಲಾಗುವುದು. ಆಕಾಂಕ್ಷಿಗಳು ಚುನಾವಣಾಧಿಕಾರಿಗಳಿಗೆ ಅರ್ಜಿ ಮೂಲಕ 250 ರೂ. ಗಳನ್ನು ಠೇವಣಿಯಾಗಿ ಪಾವತಿಸಿದ ಮೂಲ ರಶೀದಿ ಹಾಗೂ ಸಂಬಂಧಿಸಿದ ತಹಶೀಲ್ದಾರರಿಂದ ದೃಢೀಕೃತ ಪಹಣಿ ಪತ್ರಿಯೊಂದಿಗೆ ನಾಮಪತ್ರ ಸಲ್ಲಿಸಲು ಜುಲೈ 4ರ ಬೆಳಗ್ಗೆ 11ರಿಂದ ಸಂಜೆ 5ವರೆಗೆ ಅವಕಾಶವಿರುತ್ತದೆ ಎಂದು ಉಡುಪಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.