ಉಡುಪಿ | ಅಪರಿಚಿತ ಗಂಡಸಿನ ಅಸ್ಥಿಪಂಜರ ಪತ್ತೆ
Update: 2025-12-12 21:45 IST
ಸಾಂದರ್ಭಿಕ ಚಿತ್ರ | PC : freepik
ಉಡುಪಿ, ಡಿ.12: ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿಯ ಗಿಡಗಂಟಿಗಳ ನಡುವೆ ಅಪರಿಚಿತ ಗಂಡಸಿನ ಅಸ್ಥಿಪಂಜರ ಪತ್ತೆಯಾಗಿದೆ.
ಅಪರಿಚಿತ ವ್ಯಕ್ತಿ ಕೆಲವು ಸಮಯಗಳ ಹಿಂದೆ ಮೃತಪಟ್ಟಿದ್ದು, ಮೃತರ ಬಗ್ಗೆ ನಿಖರ ಕಾರಣ ಪೊಲೀಸ್ ತನಿಖೆ ಹಾಗೂ ವೈದ್ಯಕೀಯ ಪರೀಕ್ಷೆಯಿಂದ ತಿಳಿಯಬೇಕಾಗಿದೆ.
ಮಾಹಿತಿ ಪಡೆದ ವಿಶು ಶೆಟ್ಟಿ, ಈ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಶು ಶೆಟ್ಟಿ ಅಂಬಲಪಾಡಿ ಪೊಲೀಸರ ಸಮಕ್ಷಮ ರಾಮದಾಸ್ ಪಾಲನ್ ಉದ್ಯಾವರ ಸಹಾಯದಿಂದ ಮೃತ ವ್ಯಕ್ತಿಯ ಅಸ್ತಿ ಪಂಜರ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಸಾಗಿಸಿದ್ದಾರೆ.