ನಿಯಮ ಉಲ್ಲಂಘನೆ: ಬಾರ್ ವಿರುದ್ಧ ಪ್ರಕರಣ ದಾಖಲು
Update: 2026-01-06 21:44 IST
ಮಲ್ಪೆ, ಜ.6: ಅಬಕಾರಿ ಇಲಾಖೆಯ ನಿಯಮ ಉಲ್ಲಂಘಿಸಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟ ಬಾರ್ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡುತೋನ್ಸೆ ಗ್ರಾಮದ ಕೆಮ್ಮಣ್ಣುವಿನ ಸರೋವರ್ ಬಾರ್ ರೆಸ್ಟೊರೆಂಟ್‌ನ ಕಟ್ಟಡ ಕಾಮಗಾರಿ ಕೆಲಸ ನಡೆಯುತ್ತಿದ್ದು, ಆದರೂ ಜ.4ರಂದು ಕಟ್ಟಡದ ಹೊರಗೆ ಪರವಾನಿಗೆಯ ನಿಯಮ ಉಲಂಘನೆ ಮಾಡಿ ಬೆಳಗಿನ ಜಾವ ಗಿರಾಕಿಗಳಿಗೆ ಮದ್ಯವನ್ನು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಪೋಟೋ ಸಮೇತ ಮಾಹಿತಿಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.
ಅದರಂತೆ ಮಲ್ಪೆ ಪೊಲೀಸರು ಪರಿಶೀಲನೆ ನಡೆಸಿದ್ದು, ಅಬಕಾರಿ ಇಲಾಖೆಯ ನಿಯಮಗಳನ್ನು ಉಲ್ಲಂಘನೆ ಮಾಡಿ, ಕಟ್ಟಡದ ಹೊರಾಂಗಣ ದಲ್ಲಿ ಮದ್ಯ ಸೇವನೆ ಮಾಡಲು ಅವಕಾಶ ನೀಡಿರುವ ಬಾರ್ ಮಾಲಕ ಸಂಪತ್ ಕುಮಾರ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.