×
Ad

ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಪಶ್ಚಿಮ ಬಂಗಾಳ ಮೂಲದ ಗರ್ಭಿಣಿ ರಕ್ಷಣೆ

Update: 2023-07-22 20:11 IST

ಉಡುಪಿ: ಇಂದ್ರಾಳಿಯ ರೈಲ್ವೆ ನಿಲ್ದಾಣದಲ್ಲಿ ಇಂದು ಅಸಹಾಯಕ ಸ್ಥಿತಿಯಲ್ಲಿದ್ದ ಪಶ್ಚಿಮ ಬಂಗಾಳ ಮೂಲದ 8 ತಿಂಗಳ ಗರ್ಭಿಣಿಯನ್ನು ಮಹಿಳಾ ಸಾಂತ್ವನ ಕೇಂದ್ರದದ ಸಹಕಾರದೊಂದಿಗೆ ಸಮಾಜ ಸೇವಕ ನಿತ್ಯಾನಂದ ಒಳಕಾಡು ರಕ್ಷಿಸಿ ರಾಜ್ಯ ಮಹಿಳಾ ನಿಲಯಕ್ಕೆ ದಾಖಲಿಸಿದ್ದಾರೆ.

ರಕ್ಷಿಸಲ್ಪಟ್ಟ ಮಹಿಳೆಯನ್ನು ಪಶ್ಚಿಮ ಬಂಗಾಳದ ಮೂಲದ 35 ವರ್ಷದ ಸುಲೇಖ ಎಂದು ಗುರುತಿಸಲಾಗಿದೆ. ಈಕೆ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಅಸಹಾಯಕತೆಯಿಂದ ಅಳಲುತ್ತಿದ್ದು, ವಿಚಾರಿಸಿದಾಗ ಈಕೆ ಬಂಗಾಳ ಮೂಲ ದವಳೆಂದು ತಿಳಿದುಬಂದಿದೆ. ಬಳಿಕ ಬಂಗಾಳಿ ಭಾಷೆ ಬಲ್ಲ ಸುಜಯ ಪತ್ರ ಎಂಬವರನ್ನು ಕರೆತಂದು ವಿಚಾರಿಸಿದಾಗ ಈಕೆ ಎಂಟು ತಿಂಗಳ ಗರ್ಭಿಣಿ ಯಾಗಿದ್ದು, ಬಂಗಾಳದಿಂದ ಉಡುಪಿಗೆ ಬಂದಿರುವುದಾಗಿ ತಿಳಿದುಬಂತು.

ರಕ್ಷಣಾ ಕಾರ್ಯಾಚರಣೆಯಲ್ಲಿ ಸೆಂಟ್ರಲ್ ರೈಲ್ವೆಯ ಶ್ರೀಕಾಂತ್, ವೆಸ್ಟರ್ನ್ ಸೆಂಟ್ರಲ್ ರೈಲ್ವೆಯ ಜೀನಾ ಪಿಂಟೋ, ರೈಲ್ವೆ ನಿರೀಕ್ಷಕ ಸುಧೀರ್ ಶೆಟ್ಟಿ, ಮಹಿಳಾ ಸಾಂತ್ವನ ಕೇಂದ್ರದ ಪೂರ್ಣಿಮಾ ಮತ್ತು ಸುಮತಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News