×
Ad

ಲೈಂಗಿಕ ಪ್ರಕರಣದ ಆರೋಪಿ ಎನ್ ಡಿಎ ಅಭ್ಯರ್ಥಿ ಬಗ್ಗೆ ಬಿಜೆಪಿ ಏಕೆ ಮೌನ : ಅನಿತಾ ಡಿಸೋಜ, ಬೆಳ್ಮಣ್

Update: 2024-04-29 12:31 IST

ಕಾರ್ಕಳ: ಮಾತೆತ್ತಿದರೆ ಮಾತೆಯರೇ ಎಂದು ಭಾಷಣ ಬಿಗಿಯುವ ಬಿಜೆಪಿ ನಾಯಕರು ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಪ್ರಕರಣದ ಬಗ್ಗೆ ಮೌನ ವಹಿಸಿದ್ದನ್ನು ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಡಿಸೋಜ ಬೆಳ್ಮಣ್ ಪ್ರಶ್ನಿಸಿದ್ದಾರೆ.

ಅಂತಾರಾಷ್ಟ್ರೀಯ ಮಹಿಳಾ ಕುಸ್ತಿ ಪಟುಗಳಿಗೆ ಆದ ಅನ್ಯಾಯ, ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮಾಡಿದ ಪ್ರಕರಣ, ಈಗ ಹಲವು ಮಹಿಳೆಯರನ್ನು ಶೋಷಣೆಮಾಡಿ ತನ್ನ ಲೈಂಗಿಕ ತೃಷೆ ತೀರಿಸಿಕೊಂಡದ್ದಲ್ಲದೇ ಅವನ್ನೆಲ್ಲಾ ವೀಡಿಯೋ ಮಾಡಿದ ಆರೋಪ ಹೊತ್ತ ಎನ್ ಡಿಎ ಅಭ್ಯರ್ಥಿ ಪ್ರಜ್ವಲ್ ಬಗ್ಗೆ ಪ್ರಧಾನಿ ಸಹಿತ ಎಲ್ಲರೂ ಮೌನವಾಗಿರುವುದು ಮಹಿಳೆಯರ ವಿಚಾರದಲ್ಲಿ ಬಿಜೆಪಿಗೆ ಅಸಡ್ಡೆ, ಕೀಳು ಭಾವನೆ ಇರುವುದನ್ನು ಸಾಬೀತು ಪಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತನ್ನ ಮೇಲಿನ ಆರೋಪಕ್ಕೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪಲಾಯನ ಮಾಡುವುದೆಂದರೆ ಅವರು ಅಪರಾಧ ಮಾಡಿದ್ದಾರೆ ಎಂದು ಪರೋಕ್ಷವಾಗಿ ಒಪ್ಪಿಕೊಂಡಂತೆ. ಬಿಜೆಪಿಯ ಮಹಿಳಾ ನಾಯಕರಾದರೂ ಈವಿಚಾರವಾಗಿ ಮಾತಾಡಬೇಕು ಎಂದು ಅವರು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News