×
Ad

ವೈ.ಸಿ.ಅಬ್ದುಲ್ಲಾ ನಿಧನ

Update: 2024-08-22 12:30 IST

ಕಾಪು, ಆ.22: ಜಮಾಅತೆ ಇಸ್ಲಾಮಿ ಹಿಂದ್ ಕಾಪು ವರ್ತುಲದ ಹಿರಿಯ ಸದಸ್ಯ ವೈ.ಸಿ.ಅಬ್ದುಲ್ಲಾ(74) ಅಲ್ಪಕಾಲದ ಅನಾರೋಗ್ಯದಿಂದ ಉಚ್ಚಿಲದ ತಮ್ಮ ಸ್ವಗೃಹದಲ್ಲಿ ಗುರುವಾರ ಬೆಳಗ್ಗೆ ನಿಧನ ಹೊಂದಿದರು.

ಮೃತರು ಐವರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಮೂರು ದಶಕಗಳಿಂದ ಸನ್ಮಾರ್ಗ ವಾರಪತ್ರಿಕೆ ಮತ್ತು ಅನುಪಮಾ ಮಾಸಿಕದ ಪ್ರತಿನಿಧಿಯಾಗಿ ಮೈಸೂರು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ್ದ ವೈ.ಸಿ.ಅಬ್ದುಲ್ಲಾ, ಸಾವಿರಾರು ಮಂದಿಯನ್ನು ಚಂದಾದಾರನ್ನಾಗಿಸಿದ್ದರು.

ಸಂತಾಪ: ವೈ.ಸಿ.ಅಬ್ದುಲ್ಲಾರ ನಿಧನಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ, ಕಾಪು ವರ್ತುಲದ ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ ಸಂತಾಪ ಸೂಚಿಸಿದ್ದಾರೆ.

ಅಪರಾಹ್ನ 3 ಗಂಟೆಯ ಸುಮಾರಿಗೆ ದಫನ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News