ಶಿರಸಿ : ರಾಜ್ಯದ ಉತ್ತರಕನ್ನಡ ಜಿಲ್ಲೆಯನ್ನು ಬೌಗೋಳಿಕ ಹಿನ್ನಲೆ ಮತ್ತು ಕಾನೂನಾತ್ಮಕ ಅವಕಾಶಗಳ ಅನ್ವಯ ಗುಡ್ಡಗಾಡು ಜಿಲ್ಲೆಯೆಂದು ಘೋಷಿಸುವುದು. ಅಲ್ಲದೇ, ಅರಣ್ಯ ಜಿಲ್ಲೆಯಲ್ಲಿ ಪರಿಸರ ವಿರೋಧ ಯೋಜನೆ ಸಂಪೂರ್ಣ ವಾಗಿ ನಿರ್ಭಂದಿಸಬೇಕು. ಗುಡ್ಡಗಾಡು ತ್ಯಾಗದ ಜಿಲ್ಲೆಗೆ ಸರಕಾರಿ ಸಿ, ಡಿ ವೃಂದದ ನೌಕರಿಯನ್ನು ಜಿಲ್ಲೆಯವರೆಗೆ ಆಧ್ಯತೆ ನೀಡಲು ಅರಣ್ಯವಾಸಿಗಳ ಮುಂದಿನ ಹೋರಾಟದಲ್ಲಿ ಹಮ್ಮಿಕೋಳ್ಳಲು ಹೋರಾಟಗಾರರ ವೇದಿಕೆ ನಿರ್ಧರಿಸಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಿಸಿದರು.

ಶಿರಸಿ ತಾಲೂಕಿನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಇಂದು ನ.31 ರಂದು ಜರುಗಿದ ಜಿಲ್ಲಾ ಮಟ್ಟದ ಗ್ರೀನ್ ಕಾರ್ಡ ಪ್ರಮುಖರ ಉಪಸ್ಥಿತಿಯಲ್ಲಿ ಜರುಗಿದ ಅರಣ್ಯ ಭೂಮಿ ಹೋರಾಟದ 3 ನೇ ಹಂತದ ಕ್ರೀಯಾ ಯೋಜನೆ ಯನ್ನ ಪ್ರಕಟಿಸಿದ ಸಂದರ್ಭದಲ್ಲಿ ಮೇಲಿನಂತೆ ಅವರು ಹೇಳಿದರು.

ಈಗಾಗಲೇ ಶೆ.60 ಕ್ಕಿಂತ ಹೆಚ್ಚು ಅರಣ್ಯ ಇರುವಂತ ಪ್ರದೇಶವನ್ನು ಗುಡ್ಡಗಾಡು ಜಿಲ್ಲೆಯೆಂದು ಗುರುತಿಸಿ ವಿಶೇಷ ಸ್ಥಾನಮಾನ ನೀಡಲು ಸಂವಿಧಾನ ಮತ್ತು ಕಾನೂನು ಇರುವುದರಿಂದ, ಇಂತಹ ಪ್ರದೇಶಗಳಿಗೆ ಯೋಜನಾ ಆಯೋಗದ ಪ್ರಸ್ತುತ `ನೀತಿ ಆಯೋಗದಿಂದ ವಿಶೇಷ ಅನುದಾನ ಮತ್ತು ಮನ್ನಣೆ ಪಡೆಯಲು ಅವಕಾಶ ಇರುವುದು. ಉತ್ತರ ಕನ್ನಡ ಜಿಲ್ಲೆಯ ವಾಸ್ತವ್ಯದ ಜನಸಾಂದ್ರತೆ ಪ್ರಮಾಣ ಪ್ರತಿ ಚದರ್ ಕಿಮೀ ಗೆ 140 ಜನ ಮಾತ್ರ ಇರುವುದು ಗುಡ್ಡ ಗಾಡು ಜಿಲ್ಲೆ ಘೋಷಣೆಗೆ ವಿಶೇಷ ಅಂಶದ ಜೊತೆಯಲ್ಲಿ ಅರಣ್ಯವಾಸಿಗಳ ಭೂಮಿ ಹಕ್ಕಿನ ಸಾಮಾಜಿಕ ಭದ್ರತೆಗೆ ಪ್ರಮುಖ ಅಂಶವಾಗಿದೆ ಎಂದು ಅವರು ಹೇಳಿದರು.

ಕಸ್ತೂರಿ ರಂಗನ್ ವರದಿಯಲ್ಲಿ ಜಿಲ್ಲೆಯ 11 ತಾಲೂಕುಗಳಲ್ಲಿ 567 ಸೂಕ್ಮ್ಷ ಪ್ರದೇಶ ಹಳ್ಳಿ, ಹಾಗೂ ಜಿಲ್ಲೆಯಲ್ಲಿ 80 ಸಾವಿರಕ್ಕೂ ಮಿಕ್ಕಿ ಅರಣ್ಯವಾಸಿಗಳು ಅಂದರೆ , ಜಿಲ್ಲೆಯ ಜನಸಂಖ್ಯೆಯಲ್ಲಿ ಒಂದು ಮೂರಾಂಶ ಜನರು ವಾಸ್ತವ್ಯ ಮತ್ತು ಸಾಗುವಳಿ ಅರಣ್ಯ ಭೂಮಿಯ ಮೇಲೆ ಅವಲಂಬಿತರಾಗಿರುವುದರಿಂದ ಜಿಲ್ಲೆಯನ್ನು ಗುಡ್ಡ ಗಾಡು ಜಿಲ್ಲೆಯೆಂದು ಘೋಷಿಸಲು ಪ್ರಸಕ್ತವಾದ ಅಂಶವೆಂದು ಅವರು ಪ್ರಸ್ತಾಪಿಸಿದರು.

ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಮೊಬೈಲ್ ನೆಟವರ್ಕ ಇಲ್ಲದ ಜಿಲ್ಲೆಯಾದ ಉತ್ತರಕನ್ನಡವೂ , ಈಗಾಗಲೇ ದೇಶದ ಇನ್ನೀತರ ಗುಡ್ಡಗಾಡು ಜಿಲ್ಲೆಯೆಂದು ಘೋಷಿಸಿದ ತಮಿಳುನಾಡಿನ ನೀಲಗಿರಿ, ಅಸ್ಸಾಂ ದಿಮಾ ಹಸಾವೋ,ಪಶ್ಚಿಮ ಬಂಗಾಳದ ಡಾಜ್ ಲಿಂಗ್ ಮುಂತಾದ ಜಿಲ್ಲೆಗಳ ವರ್ಗೀಕರಣಕ್ಕೆ ಸಮಾನವಾಗಿದೆ ಎಂದು ಅವರು ಹೇಳಿದರು.

ಉತ್ತರಕನ್ನಡ ಜಿಲ್ಲೆ ಅರಣ್ಯ ಮತ್ತು ಗುಡ್ಡಗಾಡು ಪ್ರದೇಶದಿಂದ ಶೇ. 80 ರಷ್ಟು ಅರಣ್ಯ , ಸಮುದ್ರ ಮಟ್ಟದಿಂದ ಕನಿಷ್ಟ 600 ಮೀಟರ್ ಗಿಂತ ಹೆಚ್ಚು ಎತ್ತರ, ಪಶ್ಚಿಮ ಘಟ್ಟಗಳ ಜೀವ ವೈವಿಧ್ಯತೆ ಮತ್ತು ಪರಿಸರ ಸೂಕ್ಷ್ಮತೆ ಹೊಂದಿರು ವುದು, ಸಾಮಾನ್ಯವಾಗಿ 30 ಡಿಗ್ರಿಗಿಂತ ಹೆಚ್ಚು ಭೂಮಿಯು ಕಡಿದಾದ ಇಳಿಜಾರು ಪ್ರದೇಶ, ಮಣ್ಣಿನ ಸವೆತ, ಜಿಲ್ಲಾಡಳಿತವೇ 100 ಗುಡ್ಡಗಳ ಕುಸಿತದ ಸೂಕ್ಷ್ಮ ಪ್ರದೇಶ ಗುರುತಿಸುವಿಕೆ , ಭೂ ಕುಸಿತ ಭೀತಿ , ಗಿರಿಜನ್ ವಾಸಿಸುವ ಪಶ್ಚಿಮ ಘಟ್ಟದ ಕಡಿದಾದ ಗುಡ್ಡಗಾಡುಗಳಿಂದ ಚಿಕ್ಕ ಚಿಕ್ಕ ಹಳ್ಳಿ, ಕಡಿದಾದ ರಸ್ತೆಗಳು, ನೈಸರ್ಗಿಕ ಅಡೆ ತಡೆಗಳಿಂದ , ಮೂಲ ಸೌಕರ್ಯದ ಕೊರತೆ, ಹಳ್ಳಿಯಿಂದ ಹಳ್ಳಿಗೆ ಅಂತರ , ತುರ್ತು ಆರೋಗ್ಯ ಸೇವೆಗೆ ಅನುಗುಣ ವಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದಿರುವುದು ಗುಡ್ಡಗಾಡು ಜಿಲ್ಲೆ ಘೋಷಣೆಗೆ ಪ್ರಮುಖ ಅಂಶವೆಂದು ಅವರು ಹೇಳಿದರು.

ಸಿ ಡಿ ವೃಂದದ ನೌಕರಿ ಜಿಲ್ಲೆಯ ಯುವಕರಿಗೆ ಆಧ್ಯತೆ:

ತ್ಯಾಗದ ಜಿಲ್ಲೆಯಾದ ಉತ್ತರಕನ್ನಡ ಜಿಲ್ಲೆಯ ಪರಿಸರ ಸೂಕ್ಷ್ಮ ವಲಯದ ಕಟ್ಟು ನಿಟ್ಟಿನ ನಿಯಮಗಳಿಂದ, ಕೈಗಾರೀಕ , ಔದೋಗಿಕರಣಕ್ಕೆ ಅವಕಾಶ ಯುವಕರಿಗೆ ಜಿಲ್ಲೆಯಲ್ಲಿ ವಂಚಿತ. ಜಿಲ್ಲೆಯ ಒಟ್ಟು ಬೌಗೋಳಿಕವಾಗಿ ಶೇ.10 ರಷ್ಟು ಜಿಲ್ಲೆಯ ಕ್ಷೇತ್ರ ಕೃಷಿ ಜಮೀನಿಗೆ ಸೀಮಿತವಾಗಿರುವುದರಿಂದ ಯುವಕರಿಗೆ ಸ್ವ ಉದ್ಯೋಗ ಮತ್ತು ಕೃಷಿಗೆ ಜಿಲ್ಲೆಯ ಬೌಗೋಳಿಕ ಪರಿಸರ ಸವಾಲಾಗಿ ಇರುವುದರಿಂದ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗ ನೇಮಕಾತಿಗಳಲ್ಲಿ ಜಿಲ್ಲೆಯ ಯುವಕರಿಗೆ ನಿಯಮಾವಳಿಗಳ ಸಡಲೀಕರಣ ಮತ್ತು ಜಿಲ್ಲೆಯ ಯುಕರಿಗೆ ಸಿ ಡಿ ವೃಂದದ ನೌಕರಿಯಲ್ಲಿ ವಿಶೇಷ ಆಧ್ಯತೆ, ಸೌವಲತ್ತುಗಳನ್ನು ಕಾನೂನಿನಲ್ಲಿರುವ ಅವಕಾಶಗಳನ್ನು ಒದಗಿಸುವುದು ಅವಶ್ಯವಿದೆ ಎಂದು ಅವರು ಹೇಳಿದರು.

ಸ್ವಾತಂತ್ಯ್ರ ನಂತರದ ದಿನದಿಂದ ಉತ್ತರಕನ್ನಡ ಜಿಲ್ಲೆಯಲ್ಲಿನ 64,365 ಹೇ ಅರಣ್ಯ ಪ್ರದೇಶವನ್ನ ಯೋಜನೆ ಮತ್ತು ಮೂಲಭೂತ ಸೌಕರ್ಯಗಳಿಗೆ ಸರ್ಕಾರವು ಅರಣ್ಯೇತರ ಚಟುವಟಿಕೆಗಳಿಗೆ ಇಂದಿನವರೆಗೆ ಬಿಡುಗಡೆಗೊಳಿಸಿದ್ದು, ಇದರಿಂದ ಪಶ್ಚಿಮ ಘಟ್ಟ ಸೂಕ್ಷ್ಮ ಪ್ರದೇಶಕ್ಕೆ ಆತಂಕ ಉಂಟಾಗಿದೆ. ಅಲ್ಲದೇ, ಯುನಿಸ್ಕೋ 1972 ರ ಸಮ್ಮೇಳನದ ತತ್ವ ಸಿದ್ದಾಂತಕ್ಕೆ ವ್ಯತಿರಿಕ್ತವಾಗಿ ಪರಿಸರ ವಿರೋಧಿ ಯೋಜನೆ ಜಾರಿಯಾಗುತ್ತಿರುವುದು ವಿಷಾಧಕರ. ಜಿಲ್ಲೆಯಲ್ಲಿ ರಾಷ್ರಿ್ಠೀಯ ಐದು ಜಲ ವಿದ್ಯುತ್ ಯೋಜನೆ ಹಾಗೂ ಮೂಲಭೂತ ಸೌಲಭ್ಯಕ್ಕಾಗಿ ಕಾಳಿ ಹೈಡ್ರೋ ಪ್ರೋಜೆಕ್ಟಗೆ 15205.365 ಹೇ, ಶರವಾತಿ ಟೇಲರೆಸ್ 700.00 ಹೇ, ಕೈಗಾ ಅನುಸ್ಥಾವರಕ್ಕೆ 732 ಹೇ, ನೌಕ ನೆಲೆ 2259 ಹೇ, ಕೋಕಣ ರೈಲ್ವೇ 272.140 ಹೇ, ಹುಬ್ಬಳ್ಳಿ ಅಂಕೋಲ ರೈಲ್ವೇ ಯೋಜನೆಗೆ ಪರಿಸರ ಸೂಕ್ಷ್ಮ ಪ್ರದೇಶ ಹೊರ ತಾಗಿ 600 ರಿಂದ 770 ಹೆ, ನಿಯೋಜಿತ ಶರಾವತಿ ಪಂಪ್ಢ ಸ್ಟೋರೇಜ 193.34 ಹೇ, ಬೇಡ್ತಿ ನದಿ ಜೋಡಣೆ ಇವುಗಳಿಂದ ಜಿಲ್ಲೆಯ ದಾರಣ ಸಾಮರ್ಥ್ಯಕ್ಕೆ ಧÀಕ್ಕೆ ಉಂಟಾಗುತ್ತಿದೆ. ಆದ್ದರಿಂದ ಗುಡ್ಡ ಗಾಡು ಜಿಲ್ಲೆಯಲ್ಲಿ ಪರಿಸರ ವಿರೋಧ ಯೋಜನೆ ಸಂಪೂರ್ಣ ನಿಷೇಧಿಸಲು ಹೋರಾಟ ಮುಂದುವರೆಸಲಾಗುವುದು ಎಂದು ಅವರು ಹೇಳಿದರು.

ಜಿಲ್ಲೆಯ ಯುವಜನಾಂಗದ ಸಮಸ್ಯೆಗಳ ಕುರಿತು ವಿದ್ಯಾರ್ಥಿ ನಾಯಕ ರಜತ್ ತಂಡದೊಂದಿಗೆ ಅಧ್ಯಕ್ಷ ರವೀಂದ್ರ ನಾಯ್ಕ ಹೋರಾಟದ ರೂಪರೇಷೆಯ ಕುರಿತು ಚರ್ಚಿಸಿದರು.

ಸಭೆಯಲ್ಲಿ ಜಿಲ್ಲಾ ಸಂಚಾಲಕರಾದ ರಾಜೇಶ್ ಮಿತ್ರ ನಾಯ್ಕ ಸ್ವಾಗತಿಸಿದರು, ಮಂಜುನಾಥ ಮರಾಠಿ ನಾಗೂರು ಪ್ರಸ್ತಾವಿಕ ಮಾತನಾಡಿದರು, ಸಂಚಾಲಕರಾದ ಇಬ್ರಾಹೀಂ ಸಾಬ ಗೌಡಳ್ಳಿ, ಮಹಭಲೇಶ್ವರ ನಾಯ್ಕ ಬೇಡ್ಕಣಿ , ರಮಾನಂದ ನಾಯಕ ಅಚವೆ, ದೇವೇಂದ್ರ ಎಸ್ ನಾಯ್ಕ ಬೆಡಸಗಾಂವ್, ಕಿರಣ ಮರಾಠಿ, ಪ್ರಕಾಶ ವಿ ನಾಯ್ಕ ಕತಗಾಲ, ಹರಿಹರ ನಾಯ್ಕ ಓಂಕಾರ, ಮಹೇಂದ್ರ ಕತಗಾಲ , ಸ್ವಾತಿ ಜೈನ್ , ಪ್ರಶಾಂತ್ ಜೈನ, ಗಜಾನನ ಜಟ್ಟಪ್ಪ ನಾಯ್ಕ, ಜಗದೀಶ್ ಹರಿಕಂತ್ರ ಮಾತನಾಡಿದರು. ಗ್ರೀನ್ ಕಾರ್ಡ ಪ್ರಮುಖರಾದ ಚಂದ್ರ ಶಾನಭಾಗ, ನೆಹರು ನಾಯ್ಕ, ಎಮ್ ಆರ್ ನಾಯ್ಕ, ಗಣಪತಿ ಟಿ ನಾಯ್ಕ, ಗೋಪಾಲ ಕೆ ಗೌಡ, ಜೆಜೆ ಕುರಿಯಾ ಕೋಸ್ತ , ಮಂಜುನಾಥ ಎಮ್ ನಾಯ್ಕ ಕಂಚಿಕೊಪ್ಪ, ವೆಂಕಟ್ರಮಣ ಹೊಲನಗದ್ದೆ ಅಲ್ಲಾಭಕ್ಷ ಎಚ್ ವಾಲಿಕರ್ ನಂದಿಕಟ್ಟ, ಭೀಮಸೀ ವಾಲ್ಮೀಕಿ, ಶಿವಾನಂದ ಜೋಗಿ, ವಿನಾಯಕ ಜೋಯಿಡಾ, ವಿನೋಧ ಮರಾಠಿ, ಅರವಿಂದ ಗೌಡ, ಚಂದ್ರಶೇಖರ ಪೂಜಾರಿ ಮಂಚಿಕೇರಿ, ಲಕ್ಷ್ಮಣ ನಾಯ್ಕ, ರಫೀಕ ಗೌಡಳ್ಳಿ, ಜನಾರ್ಧನ್ ನಾಯ್ಕ ,ಸತೀಶ್ ನಾಯ್ಕ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದರು.



 


 




 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor