×
Ad

Bhatkal | ಮೆಗಾ ಲೋಕ ಅದಾಲತ್‌ನಲ್ಲಿ 1,371 ಪ್ರಕರಣಗಳ ರಾಜಿ ಸಂಧಾನ

Update: 2026-07-12 23:26 IST

ಭಟ್ಕಳ: ಇಲ್ಲಿನ ನ್ಯಾಯಾಲಯ ಸಂಕೀರ್ಣದಲ್ಲಿ ಶನಿವಾರ ನಡೆದ ಮೆಗಾ ಲೋಕ ಅದಾಲತ್‌ನಲ್ಲಿ ಮೂರು ವಿವಿಧ ಪೀಠಗಳ ಮೂಲಕ ಒಟ್ಟು 1,371 ಪ್ರಕರಣಗಳನ್ನು ಪರಸ್ಪರ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.

ಹಿರಿಯ ಸಿವಿಲ್ ನ್ಯಾಯಾಲಯದ ಪೀಠದಲ್ಲಿ ನ್ಯಾಯಾಂಗ ಸಂಧಾನಕಾರರಾಗಿ ನ್ಯಾಯಾಧೀಶೆ ರೂಪಶ್ರೀ ಹಾಗೂ ನ್ಯಾಯಾಂಗೇತರ ಸಂಧಾನಕಾರರಾಗಿ ನಾಗರತ್ನ ಕೆ. ನಾಯ್ಕ ಕಾರ್ಯನಿರ್ವಹಿಸಿದ್ದು, 334 ಪ್ರಕರಣಗಳು ಇತ್ಯರ್ಥಗೊಂಡವು.

ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಪೀಠದಲ್ಲಿ ನ್ಯಾಯಾಂಗ ಸಂಧಾನಕಾರರಾಗಿ ನ್ಯಾಯಾಧೀಶೆ ದೀಪಾ ಅರಳಗಂಡಿ ಹಾಗೂ ನ್ಯಾಯಾಂಗೇತರ ಸಂಧಾನಕಾರರಾಗಿ ಮಂಜುನಾಥ ಸಿ. ಭಟ್ ಕಾರ್ಯನಿರ್ವಹಿಸಿದ್ದು, 464 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡವು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಪೀಠದಲ್ಲಿ ನ್ಯಾಯಾಧೀಶೆ ಅರ್ಪಿತಾ ಅಧ್ಯಕ್ಷತೆ ವಹಿಸಿದ್ದು, ನ್ಯಾಯಾಂಗೇತರ ಸಂಧಾನಕಾರರಾಗಿ ಶ್ರಾವ್ಯಾ ವಿ. ನಾಯ್ಕ ಸೇವೆ ಸಲ್ಲಿಸಿದರು. ಈ ಪೀಠದಲ್ಲಿ 573 ಪ್ರಕರಣಗಳು ಇತ್ಯರ್ಥಗೊಂಡವು.

ಒಟ್ಟಾರೆ ಮೆಗಾ ಲೋಕ ಅದಾಲತ್‌ನಲ್ಲಿ 1,371 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿದ್ದು, ಪರ್ಯಾಯ ವಿವಾದ ಪರಿಹಾರ ವ್ಯವಸ್ಥೆ (Alternative Dispute Resolution–ADR) ಮೂಲಕ ತ್ವರಿತ ಹಾಗೂ ಸೌಹಾರ್ದಯುತ ನ್ಯಾಯ ಒದಗಿಸುವ ಉದ್ದೇಶಕ್ಕೆ ಮತ್ತಷ್ಟು ಬಲ ದೊರೆತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News