ವಿಜಯನಗರ | ಈಜು ಕೊಳ ನಿರ್ವಹಣೆ ಹುದ್ದೆಗೆ ಅರ್ಜಿ ಆಹ್ವಾನ
ವಿಜಯನಗರ : ಹೊಸಪೇಟೆಯ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಈಜುಕೊಳ ನಿರ್ವಹಣೆ ಮತ್ತು ಸುರಕ್ಷತ ಕಾರ್ಯಗಳಿಗಾಗಿ ಇಲಾಖೆಯಲ್ಲಿ ಖಾಲಿ ಇರುವ ಒಂದು ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಬಯಸುವವರು ಉತ್ತಮ ಈಜು ಕೌಶಲ್ಯ, ಜೀವ ರಕ್ಷಕ ಪ್ರಮಾಣ ಪತ್ರ ಹೊಂದಿರಬೇಕು. ನೀರಿನಲ್ಲಿ ಸಿಲುಕಿದವರನ್ನು ರಕ್ಷಿಸುವ ಸಾಮರ್ಥ್ಯ ಹೊಂದಿರಬೇಕು. ಈಜು ಕೊಳದಲ್ಲಿ ಈಜುಗಾರರ ಸುರಕ್ಷತೆ ಮತ್ತು ಶಿಸ್ತನ್ನು ಕಾಪಾಡುವ ಸಾಮರ್ಥ್ಯದ ಜೊತೆಗೆ ತಾಂತ್ರಿಕ ನಿರ್ವಹಣೆಯ ಜ್ಞಾನವಿರುವ ಆಸಕ್ತ ಅರ್ಹ ಅಭ್ಯರ್ಥಿಗಳು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ನವೆಂಬರ್ 10 ರೊಳಗಾಗಿ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.