ವಿಜಯನಗರ | ಹಿರಿಯ ನಾಗರಿಕರ ವೃದ್ಧಾಶ್ರಮ ಪ್ರಾರಂಭಿಸಲು ಸ್ವಯಂ ಸೇವೆ ಸಂಸ್ಥೆಗಳಿಂದ ಅರ್ಜಿ ಆಹ್ವಾನ
Update: 2025-05-16 21:15 IST
ವಿಜಯನಗರ(ಹೊಸಪೇಟೆ) : ಜಿಲ್ಲೆಯ ಹರಪನಹಳ್ಳಿ ಉಪವಿಭಾಗದ ವ್ಯಾಪ್ತಿಯಲ್ಲಿ ಹಿರಿಯ ನಾಗರಿಕರ ವೃದ್ಧಾಶ್ರಮವನ್ನು ಪ್ರಾರಂಭಿಸಲು ಅರ್ಹ ಸ್ವಯಂ ಸೇವಾ ಸಂಸ್ಥೆಗಳ ಅರ್ಜಿ ಅಹ್ವಾನಿಸಲಾಗಿದೆ.
ಅಸಕ್ತಿಯುಳ್ಳ ಅರ್ಹ ಸಂಸ್ಥೆಯವರು ಮೇ 17 ರಿಂದ ಜೂ 16 ರೊಳಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕಚೇರಿ, ಆಗಾಪೆ ಎಜಿ ಪ್ರಾರ್ಥನಾಲಯ ಎದುರು ರಸ್ತೆ, ಡಿ.ಸಿ. ಸಿವಿಲ್ ಇಂಜಿಯರ್ ಕಟ್ಟಡ, ಅಮರಾವತಿ ಹೊಸಪೇಟೆಯಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳನ್ನು ಕಚೇರಿ ಅವಧಿಯಲ್ಲಿ ಸಂರ್ಪಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.