ವಿಜಯನಗರ | ಭಾರತೀಯ ಸೈನಿಕರಿಗಾಗಿ ದರ್ಗಾ ಜಾಮಿಯ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ
Update: 2025-05-09 16:19 IST
ವಿಜಯನಗರ(ಹೊಸಪೇಟೆ) : ಕಾಶ್ಮೀರದಲ್ಲಿನ ಘಟನೆಗೆ ಪ್ರತಿಕಾರವಾಗಿ ಪಾಕಿಸ್ತಾನದ ಭಯೋತ್ಪಾದಕರ ವಿರುದ್ಧ ಹೋರಾಡುತ್ತಿರುವ ಭಾರತೀಯ ಸೈನಿಕರ ನೈತಿಕ ಸ್ಥೈರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವರ ಸೂಚನೆಯಂತೆ ಶುಕ್ರವಾರ ನಗರದ ದರ್ಗಾ ಜಾಮಿಯ ಮಸೀದಿಯ ಕಮಿಟಿಯ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ನಗರದ ಸೈಯದ್ ಮೊಹಮ್ಮದ್ ಶಾ ಖಾದರಿ ಜಾಮಿಯಾ ಮಸೀದಿಯಲ್ಲಿ ದೇಶದ ಶಾಂತಿ ಸೌಹಾರ್ದತೆಗಾಗಿ ಮತ್ತು ಭಾರತೀಯ ಸೇನೆಯ ಸೈನಿಕರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ದಾದಾಪೀರ್, ಬಡವಲಿ, ದುರ್ಗಾ ಜಾಮಿಯಾ ಮಸೀದಿಯ ಮುತ್ತಲ್ಲಿ ಮಹಮುದ್, ರಫೀಕ್, ಕೌಲ್ ಪೆಟ್ ಆರಿಫ್, ಜಾಫರ್, ಉಮೆರ್ ಮತ್ತು ಮುಸ್ಲಿಂ ಮುಖಂಡರು ಭಾಗವಹಿಸಿದ್ದರು.