×
Ad

Harapanahalli | ಖೋಟಾ ನೋಟು ಚಲಾವಣೆ; ಬಾಲಕ ಸೇರಿ 6 ಮಂದಿಯ ಬಂಧನ

Update: 2025-12-25 13:15 IST

ವಿಜಯನಗರ : ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಆರೋಪದ ಮೇಲೆ ಬಾಲಕ ಸೇರಿ 6 ಮಂದಿ ಆರೋಪಿಗಳನ್ನು ಬಂಧಿಸಿ 500 ರೂ. ಮುಖ ಬೆಲೆಯ ಒಟ್ಟು 40,000 ಮೊತ್ತದ 80 ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅರಸೀಕೆರೆ ಗ್ರಾಮದಲ್ಲಿ ನಡೆದ ಶ್ರೀ ದಂಡಿ ದುರ್ಗಮ್ಮ ದೇವಸ್ಥಾನದ ಜಾತ್ರಾ ಸಮಯದಲ್ಲಿ ಆಟಿಕೆ ನಡೆಸುವ ಶ್ರೀಮಾತ ಅಮ್ಯೂಸ್‌ಮೆಂಟ್ ಪಾರ್ಕ್‌ನ ಅಂಗಡಿಯಲ್ಲಿ ಅಪರಿಚಿತರು 500 ರೂ. ಮುಖ ಬೆಲೆಯ ಎರಡು ನೋಟುಗಳನ್ನು ಚಲಾವಣೆ ಮಾಡಿದ್ದರು.

ಈ ಕುರಿತು ಆಟಿಕೆ ಅಂಗಡಿ ಮಾಲೀಕ ವೀರಭದ್ರಪ್ಪ ಎಚ್.ಕೆ ಅವರು ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಕ್ಷಣ ಕಾರ್ಯ ಪ್ರವೃತ್ತರಾದ ಅರಸೀಕೆರೆ ಪೊಲೀಸರು ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಅರಸೀಕೆರೆ ಕೆ.ಮಹಮ್ಮದ್ ರಿಹಾನ್ (18), ಉಚ್ಚಂಗಿದುರ್ಗದ ಮುಹಮ್ಮದ್ ಅಖಿಲ್ ( 18), ಆರಸೀಕೆರೆ ನರೇಂದ್ರ ಪ್ರಸಾದ್ ಎನ್.ಪಿ (19), ಕೂಡ್ಲಿಗಿಯ ಅಜಾದ್ ನಗರದ ಬಿ ಬಾಬು (36), ಮೊಳಕಾಲ್ಲೂರು ತಾಲ್ಲೂಕಿನ ರಾಂಪುರ ಗ್ರಾಮ ಟಿ ಕುಮಾರಸ್ವಾಮಿ (43) ಹಾಗೂ ಒಬ್ಬ ಬಾಲಕ ಎಂದು ತಿಳಿದು ಬಂದಿದೆ.

ಬಂಧಿತರಿಂದ 500 ರೂ. ಮುಖಬೆಲೆ 80 ಖೋಟಾ ನೋಟುಗಳು, ಪ್ರಕರಣದಲ್ಲಿ ಭಾಗಿಯಾದ ಒಂದು ಗೂಡ್ಸ್ ವಾಹನ, ಎರಡು ಮೋಟಾರ್ ಸೈಕಲ್‌ಗಳು, 5 ಮೊಬೈಲ್ ಪೋನ್‌ಗಳು ಅಂದಾಜು 4.50.000/-ರೂ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣದ ಆರೋಪಿತರ ಪತ್ತೆಗಾಗಿ ಡಿವೈಎಸ್ಪಿ ಸಂತೋಷ ಚೌವ್ಹಾಣ್, ಸಿಪಿಐಗಳಾದ ಮಹಾಂತೇಶ ಸಜ್ಜನ್, ವಿಕಾಸ್ ಲಮಾಣಿ, ಸಬ್ ಇನ್ಸ್‌ಪೆಕ್ಟರ್ ವಿಜಯಕೃಷ್ಣ, ಎ.ಕಿರಣ್ ಕುಮಾರ ಹಾಗೂ ಸಿಬ್ಬಂದಿಗಳಾದ ಆನಂದ, ರವಿದಾದಪುರ, ಮಾಲತೇಶ, ಸಿದ್ದಿ ಮುಬಾರಕ್, ಯರಿಸ್ವಾಮಿ, ವಸಂತಕುಮಾರ, ಯು ದಾದಪೀಠ, ಹಸನ್‌ಸಾಬ್, ಕೆ ಗುರುರಾಜ, ಹರೀಶ್ ದೇವರಟ್ಟಿ, ಮತ್ತಿಹಳ್ಳಿ ಕೊಟ್ರೇಶ, ಗುರಾನಾಯ್ಕ್‌, ರವಿನಾಯ್ಕ, ಅಜ್ಜಪ್ಪ ಎಚ್, ಹಾಗೂ ಕರಿಬಸಪ್ಪ ಇ. ಸಿ.ಡಿ.ಆರ್ ವಿಭಾಗ ಸಿಬ್ಬಂದಿ ಕುಮಾರನಾಯ್ಕ್‌ ಹಾಗೂ ಜೀಪ್ ಚಾಲಕರಾದ ನಾಗರಾಜನಾಯ್ಕ ಅವರುಗಳನ್ನು ಒಳಗೊಂಡ ತಂಡವನ್ನು ವಿಜಯನಗರ ಪೊಲೀಸ್ ಅಧೀಕ್ಷಕಿ ಜಾಹ್ನವಿ, ಪೊಲೀಸ್ ಹೆಚ್ಚುವರಿ ಅಧೀಕ್ಷಕರು ಮಂಜುನಾಥ ಜಿ, ಪ್ರಶಂಶಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News