×
Ad

ವಿಜಯನಗರ | ಮಹಿಳೆ ಕಾಣೆ : ಪ್ರಕರಣ ದಾಖಲು

Update: 2025-05-27 20:29 IST

ಸಿದ್ದಮ್ಮ

ವಿಜಯನಗರ (ಹೊಸಪೇಟೆ) : ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು 30 ವರ್ಷದ ಸಿದ್ದಮ್ಮ, ಕೂಡ್ಲಿಗಿ ತಾಲೂಕಿನ ಗೊಲ್ಲರಹಟ್ಟಿ ಗ್ರಾಮದ ಮಹಿಳೆ ಕಾಣೆಯಾಗಿರುವ ಕುರಿತು ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿ ಚಹರೆ : ತೆಳುವಾದ ಮೈಕಟ್ಟು, ಗೋಧಿ ಮೈಬಣ್ಣ, ಕೋಲುಮುಖ, 4 ಅಡಿ ಎತ್ತರದ ಮಹಿಳೆ, ಕನ್ನಡ ಮಾತನಾಡುತ್ತಾಳೆ, ಹಸಿರು ಬಣ್ಣದ ಸೀರೆ ಮತ್ತು ಕುಪ್ಪಸ ಧರಿಸಿರುತ್ತಾರೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಹೊಸಹಳ್ಳಿ ಪೊಲೀಸ್ ಠಾಣೆಗೆ ತಿಳಿಸಬೇಕೆಂದು ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News