ಮಧ್ಯವರ್ತಿಗಳ ಉದ್ಯೋಗ ಆಮಿಷಕ್ಕೆ ಒಳಗಾಗಬೇಡಿ: ಡಿಎಚ್ ಒ ಡಾ.ಶಂಕರ್ ನಾಯ್ಕ್
Update: 2025-12-10 19:40 IST
ವಿಜಯನಗರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ಇತರ ಇಲಾಖೆಗಳಲ್ಲಿ ಕೆಲಸ ಕೊಡಿಸುವುದಾಗಿ ಕೆಲವು ನಕಲಿ ಸಂಸ್ಥೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ದೂರವಾಣಿ ಸಂಖ್ಯೆ ನೀಡುತ್ತಿದ್ದು, ಈ ಬಗ್ಗೆ ಅಕಾಂಕ್ಷಿಗಳು ವಿಚಾರಿಸಿದಾಗ ಅವರಿಂದ ಹಣ ದೋಚಿ ಪರಾರಿಯಾಗಿರುವ ಬಗ್ಗೆ ವರದಿಯಾಗಿದೆ. ಸಾರ್ವಜನಿಕರು ಇಂತಹ ಯಾವುದೇ ನಕಲಿ ಮತ್ತು ವಂಚನೆಗಳ ಸುದ್ದಿಗಳಿಗೆ ಕಿವಿಗೊಡಬಾರದೆಂದು ಡಿಎಚ್ ಒ ಡಾ.ಶಂಕರ್ ನಾಯ್ಕ್ ಹೇಳಿದ್ದಾರೆ.
ಆರೋಗ್ಯ ಇಲಾಖೆಯಲ್ಲಿ ಯಾರಾದರೂ ಕೆಲಸ ಕೊಡಿಸಲು ಹಣದ ಬೇಡಿಕೆಯಿಟ್ಟರೆ ಕೂಡಲೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಗೆ ಮಾಹಿತಿ ನೀಡಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಲ್.ಆರ್.ಶಂಕರ್ ನಾಯ್ಕ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.