Vijayanagara | '108' ರಲ್ಲಿ ಹಾವು ಕಡಿತಕ್ಕೆ ಔಷಧಿ ಲಭ್ಯವಿಲ್ಲ
ವಿಜಯನಗರ, (ಹೊಸಪೇಟೆ) : ಕಳೆದ ಕೆಲವು ದಿನಗಳಿಂದ '108'ರಲ್ಲಿ ಹಾವು ಕಡಿತಕ್ಕೆ ಔಷಧಿ ಲಭ್ಯವಿದೆ, ಯಾರಿಗಾದರೂ ಹಾವು ಕಚ್ಚಿದರೆ 108ಕ್ಕೆ ಕರೆಮಾಡಿ, ಅವರು ಬಂದು ಇಂಜಕ್ಷನ್ ನೀಡುತ್ತಾರೆ ಎಂಬ ಸುದ್ದಿ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸುದ್ದಿಯು ಸಂಪೂರ್ಣ ಸುಳ್ಳು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಲಿಂಗರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾವುದೇ ಹಾವು ಕಚ್ಚಿದ ಪ್ರಕರಣಗಳಲ್ಲಿ ಸಾರ್ವಜನಿಕರು ಕೂಡಲೇ ಸ್ಥಳೀಯ ಸರಕಾರಿ ಸಾರ್ವಜನಿಕ ಆಸ್ಪತ್ರೆ, ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಹಾವು ಕಡಿತಕ್ಕೆ 108ರ ತುರ್ತು ಚಿಕಿತ್ಸೆ ವಾಹನದಲ್ಲಿ ಯಾವುದೇ ಲಸಿಕೆ ನೀಡಲು ಅವಕಾಶವಿಲ್ಲ ಎಂದು ಅವರು ತಿಳಿಸಿದ್ದಾರೆ.