Vijayanagara | ಮಳೆಗಾಗಿ ಹರಾಳು ಗ್ರಾಮದಲ್ಲಿ ಕತ್ತೆಗಳಿಗೆ ಮದುವೆ

Update: 2026-07-17 21:38 IST

ಕೊಟ್ಟೂರು (ವಿಜಯನಗರ) : ಮಳೆಗಾಗಿ ಪ್ರಾರ್ಥಿಸಿ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಹರಾಳು ಗ್ರಾಮದಲ್ಲಿ ಗ್ರಾಮಸ್ಥರು ಸಾಂಪ್ರದಾಯಿಕವಾಗಿ ಜೋಡಿ ಕತ್ತೆಗಳಿಗೆ ಶಾಸ್ತ್ರೋಕ್ತವಾಗಿ ಮದುವೆ ನೆರವೇರಿಸಿ, ಬಳಿಕ ಗ್ರಾಮ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಮಳೆ ಕೊರತೆ ಅಥವಾ ಬರಗಾಲದ ಸಂದರ್ಭದಲ್ಲಿ ಮಳೆಯಾಗಲಿ ಎಂಬ ನಂಬಿಕೆಯಿಂದ ಕತ್ತೆ ಮದುವೆ ನಡೆಸುವ ಸಂಪ್ರದಾಯವಿದ್ದು, ಅದೇ ಸಂಪ್ರದಾಯದಂತೆ ಗ್ರಾಮಸ್ಥರು ಈ ಆಚರಣೆ ನೆರವೇರಿಸಿದರು.

ಈ ಕಾರ್ಯಕ್ರಮಕ್ಕಾಗಿ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದಿಂದ ಗಂಡು ಹಾಗೂ ಹೆಣ್ಣು ಕತ್ತೆಗಳನ್ನು ಕರೆತರಲಾಗಿತ್ತು. ಬಾಸಿಂಗ, ಹೊಸ ಬಟ್ಟೆ, ತಾಳಿ ಸೇರಿದಂತೆ ವಿವಾಹಕ್ಕೆ ಅಗತ್ಯವಿರುವ ಎಲ್ಲ ಸಾಮಗ್ರಿಗಳನ್ನು ಬಳಸಿ ಕತ್ತೆಗಳನ್ನು ವಧು-ವರರಂತೆ ಅಲಂಕರಿಸಿ ಶಾಸ್ತ್ರೋಕ್ತವಾಗಿ ವಿವಾಹ ನೆರವೇರಿಸಲಾಯಿತು.

ಬಳಿಕ ನವದಂಪತಿಗಳಂತೆ ಅಲಂಕರಿಸಲಾದ ಜೋಡಿ ಕತ್ತೆಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ಗ್ರಾಮದ ಹಿರಿಯರು, ಮುಖಂಡರು, ಮಕ್ಕಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಳೆಗಾಗಿ ಪ್ರಾರ್ಥಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News