ಕೇಂದ್ರ ಸರ್ಕಾರ ಅವಕಾಶ ನೀಡಿದರೆ ಗಡಿಯಲ್ಲಿ ನಿಂತು ಪಾಕ್ ವಿರುದ್ಧ ಹೋರಾಟಕ್ಕೆ ಸಿದ್ಧ: ಸಚಿವ ಝಮೀರ್ ಅಹ್ಮದ್
Update: 2025-05-03 15:46 IST
ಝಮೀರ್ ಅಹ್ಮದ್
ವಿಜಯನಗರ : ಪಾಕಿಸ್ತಾನ ನಮ್ಮ ವಿರೋಧಿ ರಾಷ್ಟ್ರ. ಅದರ ಮೇಲೆ ಕೇಂದ್ರ ಸರ್ಕಾರ ಯುದ್ಧ ಸಾರಿದರೆ, ನನಗೆ ಅವಕಾಶ ನೀಡಲಿ. ನಾನು ಗಡಿಯಲ್ಲಿ ನಿಂತು ಹೋರಾಟಕ್ಕೆ ಸಿದ್ಧನಿದ್ದೇನೆ ಎಂದು ಸಚಿವ ಝಮೀರ್ ಅಹ್ಮದ್ ತಿಳಿಸಿದ್ದಾರೆ.
ಜಮ್ಮು ಹಾಗೂ ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಏರ್ಪಟ್ಟಿರುವ ವಿಚಾರ ಸಂಬಂಧ ವಿಜಯನಗರ ಜಿಲ್ಲಾ ಕಚೇರಿಯ ಪೂರ್ವಭಾವಿ ಸಭೆಯಲ್ಲಿ ಪತ್ರಕರ್ತರ ಪ್ರಶ್ನೆಗೆ ಸಚಿವ ಝಮೀರ್ ಅಹ್ಮದ್ ಪ್ರತಿಕ್ರಿಯಿಸಿದರು.
ಪಾಕಿಸ್ತಾನಕ್ಕೂ ನಮಗೂ ಸಂಬಂಧವಿಲ್ಲ. ಪಾಕಿಸ್ತಾನ ಎಂದಿಗೂ ನಮ್ಮ ಶತ್ರು ದೇಶ. ಕೇಂದ್ರ ಸರ್ಕಾರ ಪಾಕಿಸ್ತಾನದ ಮೇಲೆ ಕೂಡಲೇ ಯುದ್ಧ ಸಾರಲಿ. ಗಡಿಯಲ್ಲಿ ನಿಂತು ಭಾರತಕ್ಕಾಗಿ ಹೋರಾಟ ಮಾಡುತ್ತೇವೆ ಎಂದರು.