ನಿದ್ರಾಹೀನತೆಯಿಂದ ಬಳಲುತ್ತಿರುವುದನ್ನು ತಿಳಿದುಕೊಳ್ಳುವುದು ಹೇಗೆ? ಇಲ್ಲಿವೆ 9 ಸೂಚನೆಗಳು
ಸಾಂದರ್ಭಿಕ ಚಿತ್ರ | Photo Credit : magnific
ಆಂತರಿಕವಾಗಿ ದೇಹದ ಗಡಿಯಾರಗಳು ಸ್ವಾಭಾವಿಕವಾಗಿ ವಿಳಂಬವಾದಾಗ ಜನರು ಬೇಗನೇ ನಿದ್ರೆ ಮಾಡಲು ಕಷ್ಟಪಡಬಹುದು. ಆದರೆ ಬೇಗನೇ ಎಚ್ಚರಗೊಂಡಲ್ಲಿ ದೀರ್ಘಕಾಲದ ನಿದ್ರಾಹೀನತೆ ಇನ್ನಷ್ಟು ಬಿಗಡಾಯಿಸಬಹುದು.
ಒಂದೆರಡು ದಿನ ತಡರಾತ್ರಿಯವರೆಗೆ ನಿದ್ರೆ ಮಾಡದೆ ಕುಳಿತಾಗ ಬಹುತೇಕರು ಕಪ್ಪು ವರ್ತುಲಗಳು ಅಥವಾ ನಿರಂತರ ಆಕಳಿಕೆಯನ್ನು ನಿರೀಕ್ಷಿಸುತ್ತಾರೆ. ಆದರೆ ನಿದ್ರಾಹೀನತೆಯು ವಿಚಿತ್ರ ರೀತಿಯಲ್ಲಿ ಕಾಣಿಸಿಕೊಳ್ಳಬಹುದು. ಆ ಸೂಚನೆಗಳು ನಿದ್ರೆಯ ಕೊರತೆಯು ಮೆದುಳು, ಹಾರ್ಮೋನುಗಳು, ರೋಗನಿರೋಧಕ ಶಕ್ರಿ ಮತ್ತು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತಿದೆ ಎಂಬ ದೇಹದ ಎಚ್ಚರಿಕೆ ವ್ಯವಸ್ಥೆಯೂ ಆಗಿರಬಹುದು.
ಐಎಸ್ಐಸಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಹೃದಯ ವಿಜ್ಞಾನಗಳ ನಿರ್ದೇಶಕ ಮತ್ತು ಮುಖ್ಯಸ್ಥ ಡಾ. ಅಸೀಮ್ ಧಾಲ್ ಪ್ರಕಾರ, “ತಲೆನೋವು, ಮನಸ್ಥಿತಿ ಬದಲಾವಣೆಗಳು, ಆಯಾಸ, ರಾತ್ರಿಯಲ್ಲಿ ಅನೇಕ ಬಾರಿ ಎಚ್ಚರಗೊಳ್ಳುವುದು ಅಥವಾ ಸಂಸ್ಕರಿತ ಆಹಾರಕ್ಕೆ ಹಂಬಲ ಹೆಚ್ಚಾಗುವುದು ಮೊದಲಾದ ಲಕ್ಷಣಗಳು ದೇಹಕ್ಕೆ ಉತ್ತಮ ನಿದ್ರೆ ಸಿಗುತ್ತಿಲ್ಲ ಎಂಬುದರ ಸೂಚಕಗಳಾಗಿವೆ ಎಂದು ಜನರಿಗೆ ಸಾಮಾನ್ಯವಾಗಿ ತಿಳಿದಿರುವುದಿಲ್ಲ!” ಇಂತಹ ನಿದ್ರೆಯ ಕೆಲವು ಅಡ್ಡಪರಿಣಾಮಗಳ ವಿವರ ಇಲ್ಲಿದೆ.
ನಿದ್ರಾಹೀನತೆಯು ಕೆಲವೊಮ್ಮೆ ಗಮನ ಅಸ್ವಸ್ಥತೆಗಳಲ್ಲಿ ಕಂಡುಬರಬಹುದು. ನಿದ್ರಾ ತಜ್ಞರ ಪ್ರಕಾರ ಒಬ್ಸ್ಟ್ರಕ್ಟಿವ್ ಸ್ಲೀಪ್ ಅಪೆನಿಯ ಮುಂತಾದ ಪರಿಸ್ಥಿತಿಗಳು ಏಕಾಗ್ರತೆ, ಗಮನ ಮತ್ತು ಹಠಾತ್ ಪ್ರವೃತ್ತಿಯ (impulsivity) ಸಮಸ್ಯೆಗಳನ್ನು ಇನ್ನಷ್ಟು ಹದಗೆಡಿಸಬಹುದು. ಇವು ಸಾಮಾನ್ಯವಾಗಿ ಎಡಿಎಚ್ಡಿಯೊಂದಿಗೆ (Attention-Deficit/Hyperactivity Disorder) ಸಂಬಂಧಿಸಿದ ಲಕ್ಷಣಗಳು. ಆಂತರಿಕವಾಗಿ ದೇಹದ ಗಡಿಯಾರಗಳು ಸ್ವಾಭಾವಿಕವಾಗಿ ವಿಳಂಬವಾದಾಗ ಜನರು ಬೇಗನೇ ನಿದ್ರೆ ಮಾಡಲು ಕಷ್ಟಪಡಬಹುದು. ಆದರೆ ಕೆಲಸ ಅಥವಾ ಇನ್ಯಾವುದೇ ಕಾರಣದಿಂದ ಬೇಗನೇ ಎಚ್ಚರಗೊಂಡಲ್ಲಿ ದೀರ್ಘಕಾಲದ ನಿದ್ರಾಹೀನತೆ ಹೆಚ್ಚಾಗುತ್ತದೆ.
ಸಂಸ್ಕರಿತ ಆಹಾರದ ಸೇವನೆಯ ಆಗ್ರಹ
ರಾತ್ರಿಯ ನಿದ್ರೆಯ ನಂತರ ಚಿಪ್ಸ್, ಸಿಹಿತಿನಿಸುಗಳು ಅಥವಾ ಐಸ್ಕ್ರೀಮ್ ತಿನ್ನಬೇಕೆಂಬ ಪ್ರಚೋದನೆಗೂ ಹಾರ್ಮೋನ್ಗೂ ಸಂಬಂಧವಿದೆ. ನಿದ್ರಾಹೀನತೆಯು ಹಸಿವನ್ನು ಹೆಚ್ಚಿಸುವ ಗ್ರೆಲಿನ್ ಮತ್ತು ಪೂರ್ಣತೆ ಸೂಚಿಸುವ ಲೆಪ್ಟಿನ್ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಮೆದುಳು ಅಧಿಕ ಕ್ಯಾಲರಿಯ ಹಿತಕರ ಆಹಾರವನ್ನು ಬಯಸಬಹುದು. ಹೀಗೆ ದೀರ್ಘಾವಧಿಯಲ್ಲಿ ಕಡಿಮೆ ನಿದ್ರೆಯ ಒತ್ತಡದ ಹಾರ್ಮೋನುಗಳು ಮತ್ತು ಚಯಾಪಚಯ ಕ್ರಿಯೆಯ ಮೇಲೆ ಅದರ ಪರಿಣಾಮದಿಂದಾಗಿ ಬೊಜ್ಜು ಮತ್ತು ಮಧುಮೇಹದ ಅಪಾಯ ಹೆಚ್ಚಾಗಬಹುದು.
ಭಾವನಾಮಯಿಯಾಗಿ ಬದಲಾವಣೆ
ಬೇಗನೇ ಅಳು ಬರುತ್ತಿದ್ದರೆ ಅಥವಾ ಕೋಪ ಪ್ರಕಟಿಸುತ್ತಿದ್ದರೆ ಅದರ ಹಿಂದೆ ನರವೈಜ್ಞಾನಿಕ ಕಾರಣವಿರಬಹುದು. ನಿದ್ರಾಹೀನತೆಯಿಂದ ಮೆದುಳಿನ ಭಾವನಾತ್ಮಕ ಕೇಂದ್ರವಾಗಿರುವ ಅಮಿಗ್ಡಾಲಾ ನಕಾರಾತ್ಮಕ ಅನುಭವಗಳಿಗೆ ಹೆಚ್ಚು ಪ್ರತಿಕ್ರಿಯಿಸುತ್ತದೆ ಮತ್ತು ಭಾವನೆಗಳನ್ನು ನಿಯಂತ್ರಿಸಲು ನೆರವಾಗುವ ಮೆದುಳಿನ ಭಾಗಗಳನ್ನು ದುರ್ಬಲಗೊಳಿಸುತ್ತದೆ.
ಮಾಡದೆ ಇರುವುದನ್ನು ಒಪ್ಪಿಕೊಳ್ಳುವುದು
2016ರ ಅಧ್ಯಯನವೊಂದರಲ್ಲಿ ನಿದ್ರೆಯ ಕೊರತೆ ಇದ್ದವರು ತಾವು ಮಾಡದ ಕೆಲಸವನ್ನು ತಪ್ಪಾಗಿ ಒಪ್ಪಿಕೊಳ್ಳುವ ಸಾಧ್ಯತೆ ನಾಲ್ಕು ಪಟ್ಟು ಹೆಚ್ಚು ಎಂದು ಕಂಡುಬಂದಿದೆ. ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ ನಿದ್ರೆಯ ಕೊರತೆ ಇದ್ದಾಗ ಆಯಾಸದ ಕಾರಣದಿಂದ ತೀರ್ಪು ತೆಗೆದುಕೊಳ್ಳುವುದು, ನಿರ್ಧಾರ ತೆಗೆದುಕೊಳ್ಳುವುದು ಮತ್ತು ಒತ್ತಡ ವಿರೋಧಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ನಿದ್ರೆಯಿಂದ ವಂಚಿತರಾದವರು ಒತ್ತಡದ ಸಂದರ್ಭಗಳಲ್ಲಿ ಮಣಿಯುವ ಸಾಧ್ಯತೆ ಹೆಚ್ಚಿರುತ್ತದೆ.
ನಿದ್ರೆಯಿಂದ ಏಳುವಾಗ ತಲೆನೋವು
ಬೆಳಗಿನ ಜಾವದ ತಲೆನೋವು ಸ್ಲೀಪ್ ಅಪೆನಾದ ಸಮಸ್ಯೆಯಾಗಿರಬಹುದು. ಈ ಸ್ಥಿತಿಯಲ್ಲಿ ನಿದ್ರೆಯ ಸಮಯದಲ್ಲಿ ಉಸಿರಾಟ ಪದೇಪದೆ ನಿಂತು ಪ್ರಾರಂಭವಾಗುತ್ತದೆ. ಉಸಿರಾಟದ ಅಡಚಣೆಯು ಆಮ್ಲಜನಕದ ಮಟ್ಟ ಕಡಿಮೆ ಮಾಡುತ್ತದೆ ಮತ್ತು ಮೆದುಳಿನಲ್ಲಿ ಇಂಗಾಲದ ಡೈ ಆಕ್ಸೈಡ್ ಸಂಗ್ರಹ ಹೆಚ್ಚಾಗಿ ಎಚ್ಚರವಾದಾಗ ತಲೆನೋವು ಬರುತ್ತದೆ.
ರಾತ್ರಿ ಹಲ್ಲುಗಳನ್ನು ಕಡಿಯುವುದು
ಹಲ್ಲು ಕಡಿಯುವುದು ಅಥವಾ ಬ್ರಕ್ಸಿಸಮ್ ಹೆಚ್ಚಾಗಿ ಒತ್ತಡದಿಂದ ಉಂಟಾಗುತ್ತದೆ. ನಿದ್ರೆಯ ತಜ್ಞರು ಹೇಳುವಂತೆ, ದವಡೆ ನೋವು ಕೂಡ ನಿದ್ರೆಯ ಗುಣಮಟ್ಟವನ್ನು ಕಡಿಮೆ ಮಾಡಿ ಕಳಪೆ ನಿದ್ರೆಯ ಜೊತೆಗೆ ರಾತ್ರಿ ಹಲ್ಲು ಕಡಿಯುವ ಸಾಧ್ಯತೆಯಿದೆ.
ರಾತ್ರಿ ಶೌಚಾಲಯಕ್ಕೆ ಹೋಗುವುದು
ಅನೇಕ ಬಾರಿ ಮೂತ್ರ ವಿಸರ್ಜನೆಗೆ ಎಚ್ಚರಗೊಳ್ಳುವುದನ್ನು ನೋಕ್ಟೋರಿಯ ಎನ್ನಲಾಗುತ್ತದೆ. ವಯಸ್ಸಾದಾಗ ಹೀಗೆ ಸಂಭವಿಸುತ್ತದೆ. ಪುನರಾವರ್ತಿತ ಉಸಿರಾಟದ ಅಡಚಣೆಗಳು ಹೃದಯದ ಮೇಲೆ ಒತ್ತಡ ಹೇರುತ್ತದೆ. ದೇಹ ಹೆಚ್ಚು ದ್ರವ ಬಿಡುಗಡೆಯಾಗುವ ಹಾರ್ಮೋನ್ ಬದಲಾವಣೆಗೆ ಪ್ರಚೋದಿಸುತ್ತದೆ.
ಕಣ್ಣು ಸೆಳೆತ
ಕೆಲವೊಮ್ಮೆ ರಾತ್ರಿ ಸಮಯದಲ್ಲಿ ನಿದ್ರೆಯ ನಂತರ ಕಿರಿಕಿರಿ ಉಂಟು ಮಾಡುವಂತೆ ಕಣ್ಣು ರೆಪ್ಪೆಗಳು ಚಡಪಡಿಸುತ್ತವೆಯೆ? ನಿದ್ರಾಹೀನತೆ ನರಮಂಡಲ ಮತ್ತು ಕಣ್ಣುನ ಸ್ನಾಯುಗಳ ಮೇಲೆ ಒತ್ತಡ ಹೇರಬಹುದು. ಹೀಗಾಗಿ ಕಣ್ಣುರೆಪ್ಪೆಗಳು ಸೆಳೆತಕ್ಕೆ ಒಳಗಾಗಬಹುದು.
ಬೆಳಕು ಅಥವಾ ಶಬ್ದಕ್ಕೆ ಸಂವೇದನೆ
ಪ್ರಕಾಶಮಾನವಾದ ಬೆಳಕುಗಳು ಇದಕ್ಕಿದ್ದಂತೆ ಕಣ್ಣಿಗೆ ಕಠಿಣವಾದಲ್ಲಿ ಮತ್ತು ಸಾಮಾನ್ಯ ಶಬ್ದಗಳಿಂದಲೂ ಕಿರಿಕಿರಿಯಾದಲ್ಲಿ ಕಳಪೆ ನಿದ್ರೆ ಪಾತ್ರವಹಿಸುತ್ತಿರಬಹುದು. ನಿದ್ರಾಹೀನತೆ ಮೆದುಳನ್ನು ಒಳಬರುವ ಸಂವೇದನೆಗೆ ಹೆಚ್ಚು ಪ್ರತಿಕ್ರಿಯಾತ್ಮಕವಾಗಿಸುತ್ತದೆ. ಹೀಗಾಗಿ ದೈನಂದಿನ ಶಬ್ದಗಳು, ಬೆಳಕು ಅಥವಾ ಹಿನ್ನೆಲೆಯ ಗೊಂದಲಗಳನ್ನು ಶೋಧಿಸಲು ಮೆದುಳು ಕಷ್ಟಪಡುತ್ತದೆ.
ಕೃಪೆ: indianexpress.com