Photo  Credit: AI

ಜೂನಿಯರ್ ಟ್ರಾನ್ಸ್ಲೇಟರ್, ಲ್ಯಾಬ್ ಅಸಿಸ್ಟೆಂಟ್, ಸಿಬ್ಬಂದಿ ಮತ್ತು ಕಲ್ಯಾಣ ನಿರೀಕ್ಷಕರು ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ

ರೈಲ್ವೆ ನೇಮಕಾತಿ ಮಂಡಳಿಗಳು (RRB) 2026ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಒಟ್ಟು 191 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿವೆ.

ಜೂನಿಯರ್ ಟ್ರಾನ್ಸ್ಲೇಟರ್, ಲ್ಯಾಬ್ ಅಸಿಸ್ಟೆಂಟ್, ಸಿಬ್ಬಂದಿ ಮತ್ತು ಕಲ್ಯಾಣ ನಿರೀಕ್ಷಕರು ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. 12ನೇ ತರಗತಿ, ಡಿಪ್ಲೊಮಾ, ಪದವಿ ಹಾಗೂ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.

ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು:

https://www.rrbapply.gov.in/#/auth/home

►ಪ್ರಮುಖ ದಿನಾಂಕಗಳು

• ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ: 05 ನವೆಂಬರ್ 2026

• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04 ಡಿಸೆಂಬರ್ 2026 (ರಾತ್ರಿ 11:59)

• ಶುಲ್ಕ ಪಾವತಿಗೆ ಕೊನೆಯ ದಿನಾಂಕ: 06 ಡಿಸೆಂಬರ್ 2026

• ಅರ್ಜಿ ತಿದ್ದುಪಡಿ ಅವಧಿ: 07 ಡಿಸೆಂಬರ್ನಿಂದ 16 ಡಿಸೆಂಬರ್ 2026

►ಪ್ರಮುಖ ವಿವರಗಳು

• ನೇಮಕಾತಿ ಸಂಸ್ಥೆ: ರೈಲ್ವೆ ನೇಮಕಾತಿ ಮಂಡಳಿ (RRB)

• ಒಟ್ಟು ಹುದ್ದೆಗಳು: 191

• ಹುದ್ದೆಗಳ ಹೆಸರು: ಜೂನಿಯರ್ ಟ್ರಾನ್ಸ್ಲೇಟರ್, ಲ್ಯಾಬ್ ಅಸಿಸ್ಟೆಂಟ್ ಸೇರಿದಂತೆ ವಿವಿಧ ಹುದ್ದೆಗಳು

• ಉದ್ಯೋಗ ಸ್ಥಳ: ಅಖಿಲ ಭಾರತ

• ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್

►ಯಾವ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ?

• ಜೂನಿಯರ್ ಅನುವಾದಕ (ಹಿಂದಿ): 79

• ಲ್ಯಾಬ್ ಅಸಿಸ್ಟೆಂಟ್ ಗ್ರೇಡ್ III: 36

• ಸಿಬ್ಬಂದಿ ಮತ್ತು ಕಲ್ಯಾಣ ನಿರೀಕ್ಷಕರು: 27

• ಸಾರ್ವಜನಿಕ ಅಭಿಯೋಜಕರು: 21

• ಮುಖ್ಯ ಕಾನೂನು ಸಹಾಯಕ: 17

• ಹಿರಿಯ ಪ್ರಚಾರ ನಿರೀಕ್ಷಕರು: 8

• ವೈಜ್ಞಾನಿಕ ಸಹಾಯಕ (ತರಬೇತಿ): 3

ಒಟ್ಟು: 191

►ವೇತನ

• ಮುಖ್ಯ ಕಾನೂನು ಸಹಾಯಕ / ಸಾರ್ವಜನಿಕ ಅಭಿಯೋಜಕ: ಹಂತ 7, ಆರಂಭಿಕ ವೇತನ 44,900 ರೂ.

• ಹಿರಿಯ ಪ್ರಚಾರ ನಿರೀಕ್ಷಕರು, ಕಿರಿಯ ಅನುವಾದಕರು, ಸಿಬ್ಬಂದಿ ಮತ್ತು ಕಲ್ಯಾಣ ನಿರೀಕ್ಷಕರು, ವೈಜ್ಞಾನಿಕ ಸಹಾಯಕ: ಹಂತ 6, ಆರಂಭಿಕ ವೇತನ 35,400 ರೂ.

• ಪ್ರಯೋಗಾಲಯ ಸಹಾಯಕ ದರ್ಜೆ III: ಹಂತ 2, ಆರಂಭಿಕ ವೇತನ 19,900 ರೂ.

►ಶೈಕ್ಷಣಿಕ ಅರ್ಹತೆಗಳು

• ಕಿರಿಯ ಅನುವಾದಕ (ಹಿಂದಿ): ಹಿಂದಿ/ಇಂಗ್ಲಿಷ್ನಲ್ಲಿ ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಸಂಯೋಜನೆಯ ವಿದ್ಯಾರ್ಹತೆ, ಜೊತೆಗೆ ಅನುವಾದ ಡಿಪ್ಲೊಮಾ/ಪ್ರಮಾಣಪತ್ರ ಅಥವಾ ಅನುಭವ.

• ಸಿಬ್ಬಂದಿ ಮತ್ತು ಕಲ್ಯಾಣ ನಿರೀಕ್ಷಕರು: ಪದವಿ ಜೊತೆಗೆ ಮಾನವ ಸಂಪನ್ಮೂಲ/ಕಾರ್ಮಿಕ ಕಲ್ಯಾಣ/ಕಾನೂನು/ಒಃಂ-ಊಖ ಸಂಬಂಧಿತ ಅರ್ಹತೆ.

• ವೈಜ್ಞಾನಿಕ ಸಹಾಯಕ (ತರಬೇತಿ): ಶೇ. 50 ಅಂಕಗಳೊಂದಿಗೆ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ.

• ಲ್ಯಾಬ್ ಅಸಿಸ್ಟೆಂಟ್ ಗ್ರೇಡ್ III: ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳೊಂದಿಗೆ 12ನೇ ತರಗತಿ.

• ಮುಖ್ಯ ಕಾನೂನು ಸಹಾಯಕ: ಮೂರು ವರ್ಷಗಳ ವಕೀಲ ವೃತ್ತಿಯ ಅನುಭವದೊಂದಿಗೆ ಕಾನೂನು ಪದವಿ.

• ಸಾರ್ವಜನಿಕ ಅಭಿಯೋಜಕ: ವಕೀಲರಾಗಿ ಐದು ವರ್ಷಗಳ ಅನುಭವದೊಂದಿಗೆ ಕಾನೂನು ಪದವಿ.

►ವಯಸ್ಸಿನ ಮಿತಿ

ಅಭ್ಯರ್ಥಿಯು 01-01-2027ರಂತೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ ವಯಸ್ಸು ಹೊಂದಿರಬೇಕು. ರೈಲ್ವೆ ನಿಯಮಾವಳಿಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ.

►ಅರ್ಜಿ ಶುಲ್ಕ

• ಇತರೆ ಅಭ್ಯರ್ಥಿಗಳಿಗೆ: 500 ರೂ.

• SC/ST, ಮಾಜಿ ಸೈನಿಕರು, PwBD, ಮಹಿಳೆಯರು, ಟ್ರಾನ್ಸ್ಜೆಂಡರ್, ಅಲ್ಪಸಂಖ್ಯಾತರು ಮತ್ತು EBC ಅಭ್ಯರ್ಥಿಗಳಿಗೆ: 250 ರೂ.

• ಪಾವತಿ ವಿಧಾನ: ಆನ್ಲೈನ್

►ಆಯ್ಕೆ ಪ್ರಕ್ರಿಯೆ

• ಏಕ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)

• ಅನುವಾದ ಪರೀಕ್ಷೆ (ಜೂನಿಯರ್ ಅನುವಾದಕ ಹುದ್ದೆಗಳಿಗೆ ಮಾತ್ರ)

• ದಾಖಲೆ ಪರಿಶೀಲನೆ

• ವೈದ್ಯಕೀಯ ಪರೀಕ್ಷೆ

►ಅರ್ಜಿ ಸಲ್ಲಿಸುವುದು ಹೇಗೆ?

• ಮೊದಲಿಗೆ ಅಧಿಕೃತ RRB ಅರ್ಜಿ ವೆಬ್ಸೈಟ್ಗೆ ಭೇಟಿ ನೀಡಿ.

• ನೇಮಕಾತಿ ಅಧಿಸೂಚನೆಯನ್ನು ಓದಿ, ನಿಮ್ಮ ವಿದ್ಯಾರ್ಹತೆ ಮತ್ತು ವಯೋಮಿತಿಗೆ ಅನುಗುಣವಾಗಿ ಅರ್ಹತೆಯನ್ನು ಪರಿಶೀಲಿಸಿ.

• ಅಗತ್ಯವಿದ್ದಲ್ಲಿ ಹೊಸ ನೋಂದಣಿ ಮಾಡಿಕೊಂಡು, ಅರ್ಜಿ ನಮೂನೆಯಲ್ಲಿ ಕೇಳಿರುವ ವೈಯಕ್ತಿಕ ಹಾಗೂ ಶೈಕ್ಷಣಿಕ ವಿವರಗಳನ್ನು ಭರ್ತಿ ಮಾಡಿ.

• ಅಗತ್ಯ ದಾಖಲೆಗಳು, ಫೊಟೋ ಮತ್ತು ಸಹಿಯನ್ನು ಅಪ್ಲೋಡ್ ಮಾಡಿ.

• ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಪಾವತಿಸಿ.

• ಅರ್ಜಿಯನ್ನು ಸಲ್ಲಿಸಿದ ನಂತರ ಅದರ ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಮುಂದಿನ ಉಲ್ಲೇಖಕ್ಕಾಗಿ ಸುರಕ್ಷಿತವಾಗಿ ಇಟ್ಟುಕೊಳ್ಳಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor