Photo: Rockstar Games

GTA 6 ಕ್ರೇಜ್ ಎಷ್ಟರಮಟ್ಟಿಗೆ ನಿಜವಾಗಿದೆ ಎಂದರೆ ಈಗಾಗಲೇ ತನ್ನ 1 ಶತಕೋಟಿ ಡಾಲರ್ ಬಜೆಟ್ ಮೀರಿ ಆದಾಯ ಗಳಿಸಿದೆ. ಆದರೆ ಭಾರತದಲ್ಲಿ ಇದು ದುಬಾರಿ ಆಟವಾಗಿರುವುದು ಸುಳ್ಳಲ್ಲ.

13 ವರ್ಷಗಳ ಕಾಯುವಿಕೆಯ ನಂತರ ಕೊನೆಗೂ GTA 6 ಬಂದಿದೆ. ರಾಕ್ ಸ್ಟಾರ್ ಗೇಮ್ಸ್ ಒಂದು ದಶಕಕ್ಕೂ ಹೆಚ್ಚು ಕಾಲ ಆಟದ ಮೇಲೆ ಕೆಲಸ ಮಾಡಿದೆ. ವರದಿಯಾದ 1 ಬಿಲಿಯನ್ ಬಜೆಟ್ನೊಂದಿಗೆ ಇದು ಈವರೆಗೆ ಮಾಡಿದ ಅತ್ಯಂತ ದುಬಾರಿ ವೀಡಿಯೋ ಗೇಮ್ ಆಗಿದೆ.

ಈ ಆಟದ ಕತೆಯು ವೈಸ್ ಸಿಟಿಯನ್ನು ಒಳಗೊಂಡಿದೆ. ಫ್ಲೋರಿಡಾದಿಂದ ಪ್ರೇರಿತವಾದ ‘ಲಿಯೋನಿಡಾ’ ಎಂಬ ಕಾಲ್ಪನಿಕ ರಾಜ್ಯದಲ್ಲಿ ನಡೆಯುತ್ತದೆ. ಇದರಲ್ಲಿ ಜೇಸನ್ ಡುವಾಲ್ ಮತ್ತು ಲೂಸಿಯಾ ಕ್ಯಾಮಿನೋಸ್ ಎಂಬ ಮುಖ್ಯಪಾತ್ರಗಳಿವೆ. ನೈಜ ಪ್ರಪಂಚದ ಪರಿಣಾಮಗಳ ಭಯವಿಲ್ಲದೆ ಇದ್ದಾಗ ವ್ಯಕ್ತಿ ಎಷ್ಟು ಕೆಟ್ಟದಾಗಿ ವರ್ತಿಸಲು ಆಯ್ಕೆ ಮಾಡಿಕೊಳ್ಳುತ್ತಾನೆ ಎಂಬುದರ ಮೂಲಕ ಆಟಗಾರನ ಮನಸ್ಥಿತಿಯನ್ನು ಪರೀಕ್ಷಿಸುವುದೇ GTA ಸರಣಿಯ ಮುಖ್ಯ ಆಕರ್ಷಣೆಯಾಗಿದೆ.

GTA 6 ನಿರ್ಮಾಣ ವೆಚ್ಚವೆಷ್ಟು?

ರಾಕ್ಸ್ಟಾರ್ ಗೇಮ್ಸ್ ಸಂಸ್ಥೆಯು GTA 6 ಗೇಮ್ನ ಬಜೆಟ್ ಅನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆರಂಭದಲ್ಲಿ ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದ ನಿರ್ಮಾಣ ವೆಚ್ಚಕ್ಕೆ ಸಮನಾಗಿ ಸುಮಾರು 12,500 ಕೋಟಿ ರೂ.ಗೂ ಅಧಿಕ ವೆಚ್ಚದ ಬಜೆಟ್ ಹೊಂದಿರಬಹುದು ಎಂದು ವದಂತಿಗಳು ಹರಡಿದ್ದವು. ಆದರೆ ಇದು ನಿಜವಲ್ಲ ಎಂದು ರಾಕ್ಸ್ಟಾರ್ ಸಂಸ್ಥೆ ಹೇಳಿದೆ.

ಟೇಕ್-ಟು ಇಂಟರಾಕ್ಟಿವ್ ಸಿಇಒ ಸ್ಟ್ರಾಸ್ ಜೆಲ್ನಿಕ್ ಅವರು GTA 6 ನಿರ್ಮಿಸುವುದು ದುಬಾರಿಯಾಗಿತ್ತು ಎಂದಷ್ಟೇ ಹೇಳಿರುವುದಾಗಿ ವರದಿಯಾಗಿದೆ. ಅವರು ನಿಖರವಾದ ಅಂಕಿ-ಅಂಶ ನೀಡಿಲ್ಲ. ಆದರೆ ವರದಿಗಳ ಪ್ರಕಾರ 8,300 ಕೋಟಿ ರೂ.ಗೂ ಮೀರಿದ ವೆಚ್ಚವಾಗಿದೆ ಎಂದು ಹೇಳಲಾಗುತ್ತಿದೆ.

GTA 6 ಈವರೆಗೆ ಎಷ್ಟು ಗಳಿಸಿದೆ?

ಒಂದು ಶತಕೋಟಿ ಡಾಲರ್ ಬಜೆಟ್ನಲ್ಲಿ ನಿರ್ಮಾಣವಾಗಿರುವುದು ಎಂದು ಹೇಳುವುದೇ ದೊಡ್ಡದಾಗಿ ಕಾಣಿಸುತ್ತದೆ. ಆದರೆ ಗ್ರ್ಯಾಂಡ್ ಥೆಫ್ಟ್ ಆಟೋ (GTA) ಮೇಲಿರುವ ಕ್ರೇಝ್ ನೋಡಿದರೆ ರಾಕ್ಸ್ಟಾರ್ ಸಂಸ್ಥೆ ಸರಿಯಾದ ಲೆಕ್ಕಾಚಾರ ಹಾಕಿದೆ ಎನಿಸುತ್ತದೆ. ಸಂಶೋಧನಾ ಸಂಸ್ಥೆ ಸೆನ್ಸರ್ ಟವರ್ ಅಂಕಿ-ಅಂಶಗಳ ಪ್ರಕಾರ ನವೆಂಬರ್ 19 ಗುರುವಾರದಂದು ಗೇಮ್ ಅಧಿಕೃತವಾಗಿ ಬಿಡುಗಡೆಯಾಗುವ ಮೊದಲೇ GTA 6 ನ ಸುಮಾರು 12 ದಶಲಕ್ಷಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿವೆ. ಈ ಮಾರಾಟದಿಂದ ಗೇಮ್ಗೆ ಸುಮಾರು 1.65 ಶತಕೋಟಿ ಡಾಲರ್ ಆದಾಯ ಬಂದಿದ್ದು, ಅಂದಾಜು ಬಜೆಟ್ ಅನ್ನು ಸುಲಭವಾಗಿ ಮೀರಿಸಿದೆ ಎಂದು ವರದಿಯಾಗಿದೆ.

ವಿವಿಧ ಪ್ಲಾಟ್ಫಾರ್ಮ್ಗಳ ಮಾರಾಟ ಗಮನಿಸಿದರೆ ಶೇ 75ರಷ್ಟು ಮಾರಾಟವು ಸೋನಿ ಪಿಎಸ್ 5ಗಾಗಿ ಆಗಿದ್ದರೆ, ಉಳಿದವು ಮೈಕ್ರೋಸಾಫ್ಟ್ ನ ಎಕ್ಸ್ಬಾಕ್ಸ್ ಕನ್ಸೋಲ್ಗಳು ಮಾರಾಟವಾಗಿವೆ. ಸೋನಿ ಮತ್ತು ಮೈಕ್ರೋಸಾಫ್ಟ್ ಎರಡೂ ಸಂಸ್ಥೆಗಳ ಪ್ರಕಾರ ತಮ್ಮ ಡಿಜಿಟಲ್ ಸ್ಟೋರ್ಗಳಲ್ಲಿ ಅತಿ ಹೆಚ್ಚು ಪ್ರಿ ಆರ್ಡರ್ ಆದ ಗೇಮ್ ಇದಾಗಿದೆ. GTA 6 ಸದ್ಯಕ್ಕೆ ಪಿಸಿಯಲ್ಲಿ ಲಭ್ಯವಿಲ್ಲ.

ʼಸೆನ್ಸರ್ ಅವರ್ʼ ನ ಅಂಕಿಅಂಶಗಳು ಕೇವಲ ಡಿಜಿಟಲ್ ಮಾರಾಟದ ವಿವರ ಮಾತ್ರ ಒಳಗೊಂಡಿದೆ. ಸ್ಟೋರ್ಗಳಿಂದ (ಸಿಡಿ/ಡಿಸ್ಕ್) ಮಾರಾಟದಿಂದ ಬಂದ ಆದಾಯ ಸೇರಿಸಲಾಗಿಲ್ಲ.

ಓಪನ್ಹೈಮರ್ ಅಂದಾಜಿನ ಪ್ರಕಾರ GTA 6 ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲಿ 1.85 ಶತಕೋಟಿ ಡಾಲರ್ ಒಟ್ಟು ಆದಾಯ ಗಳಿಸಬಹುದು. ಇದಕ್ಕೆ ಹೋಲಿಸಿದರೆ 2013ರಲ್ಲಿ ಬಿಡುಗಡೆಯಾದ GTA 5 ತನ್ನ ಮೊದಲ ಮೂರು ದಿನಗಳಲ್ಲಿ ವಿಶ್ವಾದ್ಯಂತ 1 ಶತಕೋಟಿ ಡಾಲರ್ ಚಿಲ್ಲರೆ ಮಾರಾಟ ದಾಖಲಿಸಿತ್ತು ಎಂದು ವರದಿಯಾಗಿದೆ.

ಇದು ಕೇವಲ ಆರಂಭವಷ್ಟೇ. GTA 6 ನಂತಹ ದೊಡ್ಡ ಬಜೆಟ್ನ ಗೇಮ್ಗಳು ಸಾಮಾನ್ಯವಾಗಿ ದೀರ್ಘಕಾಲದವರೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಉಳಿದಿಕೊಂಡಿರುತ್ತವೆ. ಹೀಗಾಗಿ ಆರ್ಥಿಕವಾಗಿ ರಾಕ್ಸ್ಟಾರ್ ಸಂಸ್ಥೆಯು ಇನ್ನೂ ಹೆಚ್ಚಿನದನ್ನು ನಿರೀಕ್ಷಿಸಬಹುದು.

ಭಾರತದಲ್ಲಿ ದುಬಾರಿಯಾದ GTA 6

ಭಾರತದಲ್ಲಿ GTA 6 ರ ಸ್ಟ್ಯಾಂಡರ್ಡ್ ಎಡಿಷನ್ ಬೆಲೆ 5,999 ರೂ.ಗಳಾಗಿದ್ದರೆ, ಅಲ್ಟಿಮೇಟ್ ಎಡಿಷನ್ ಬೆಲೆ 7499 ರೂ.ಗಳು. ವೈಸ್ ಸಿಟಿಯ ಜಗತ್ತನ್ನು ಪ್ರವೇಶಿಸಲು ಬಯಸುವವರಿಗೆ ಇದು ಕೇವಲ ಆರಂಭಿಕ ವೆಚ್ಚವಷ್ಟೇ ಆಗಿರುತ್ತದೆ. ಪ್ಲೇಸ್ಟೇಷನ್ 5 ಅಥವಾ ಎಕ್ಸ್ಬಾಕ್ಸ್ನಂತಹ ಸೂಕ್ತ ಗೇಮಿಂಗ್ ಕನ್ಸೋಲ್ಗಳನ್ನು ಈಗಾಗಲೇ ಹೊಂದಿರುವವರಿಗೆ ಈ ಆಟವನ್ನು ಖರೀದಿಸುವುದು ಸುಲಭದ ನಿರ್ಧಾರವಾಗಬಹುದು. ಆದರೆ ಇಂತಹ ಕನ್ಸೋಲ್ಗಳನ್ನು ಹೊಂದಿರದವರಿಗೆ GTA 6 ಆಡಲು ಪ್ರಾರಂಭಿಸುವ ಮೊದಲೇ ಆಟದ ಬೆಲೆಗಿಂತಲೂ ಹಲವು ಪಟ್ಟು ಹೆಚ್ಚು ಹಣವನ್ನು ಹಾರ್ಡ್ವೇರ್ಗಾಗಿ (ಗೇಮಿಂಗ್ ಕನ್ಸೋಲ್) ವೆಚ್ಚ ಮಾಡಬೇಕಾಗಿ ಬರಬಹುದು.

ಎಕ್ಸ್ಬಾಕ್ಸ್ ಸೀರೀಸ್ ಎಸ್ ನ ಬೆಲೆ ಸುಮಾರು 31,990 ರೂ.ಗಳಿಂದ ಪ್ರಾರಂಭವಾಗುತ್ತದೆ. ಹಾಗೆಯೇ ಪ್ಲೇಸ್ಟೇಷನ್ 5 ಸ್ಲಿಮ್ 44,990 ರೂ.ಗಳಿಗೆ ಲಭ್ಯವಿದೆ. ಎಕ್ಸ್ಬಾಕ್ಸ್ ಸೀರೀಸ್ ಎಕ್ಸ್ ಬೆಲೆ ಸುಮಾರು 74,999 ರೂ.ಗಳಷ್ಟಿದೆ. ಈ ಬೆಲೆಗಳು ಮಾರಾಟಗಾರರು ಮತ್ತು ಲಭ್ಯವಿರುವ ಕೊಡುಗೆಗಳನ್ನು ಅವಲಂಬಿಸಿ ಬದಲಾಗಬಹುದು.

ಇದರರ್ಥ Xbox ಸರಣಿ S ಮತ್ತು GTA 6 ಖರೀದಿಸುವ ಭಾರತೀಯ ಗ್ರಾಹಕರು ಸುಮಾರು 37,989 ರೂ.ಗಳನ್ನು ವೆಚ್ಚ ಮಾಡಬಹುದು. PS5 ಸ್ಲಿಮ್ ಅನ್ನು ಆಯ್ಕೆ ಮಾಡುವ ಖರೀದಿದಾರರು, ಪರಿಕರಗಳು ಚಂದಾದಾರಿಕೆಗಳು ಅಥವಾ ಇತರ ವೆಚ್ಚಗಳನ್ನು ಲೆಕ್ಕ ಹಾಕುವ ಮೊದಲು ಸುಮಾರು 50,989 ರೂ.ಗಳನ್ನು ವೆಚ್ಚ ಮಾಡಬೇಕಾಗಿ ಬರಬಹುದು.

GTA 6 ಆಡಲು ತೆರಬೇಕಾದ ನಿಜವಾದ ಬೆಲೆ

ಆಧುನಿಕ ಗೇಮಿಂಗ್ ಸೆಟಪ್ ಕನ್ಸೋಲ್ ಅಥವಾ ಗೇಮಿಂಗ್ ಪಿಸಿ, ಟೆಲಿವಿಷನ್ ಅಥವಾ ಮಾನಿಟರ್, ಸ್ಥಿರ ಬ್ರಾಡ್ ಬ್ಯಾಂಡ್ ಸಂಪರ್ಕ ಮತ್ತು ಕೆಲವು ಸಂದರ್ಭಗಳಲ್ಲಿ ಪಾವತಿಸಿದ ಆನ್ಲೈನ್ ಗೇಮಿಂಗ್ ಚಂದಾದಾರಿಕೆಗಳು ಸೇರಿದಂತೆ ಅನೇಕ ಇತರ ವೆಚ್ಚಗಳನ್ನು ಒಳಗೊಂಡಿರುತ್ತವೆ. ಸಂಗ್ರಹಣೆ ಮತ್ತೊಂದು ಅಗತ್ಯವಾಗಿರುವ ಅಂಶ. GTA 6 ಗೆ 212 GB ಉಚಿತ ಸ್ಥಳಾವಕಾಶ ಬೇಕಾಗುತ್ತದೆ. ಸೀಮಿತ ಸಂಗ್ರಹಣೆ ಹೊಂದಿರುವ ಗೇಮರ್ಗಳು ಅಂತಿಮವಾಗಿ ಹೆಚ್ಚು ಶೇಖರಣಾ ವೆಚ್ಚ ಆಯ್ಕೆ ಮಾಡಬೇಕಾಗುತ್ತದೆ.

ಕೃಪೆ: indiatoday.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Contributor - ಎನ್ ಕೆ ಸುಪ್ರಭಾ

contributor

ಎನ್ ಕೆ ಸುಪ್ರಭಾ, ಹಿರಿಯ ಪತ್ರಕರ್ತೆ ಮತ್ತು ಅನುವಾದಕಿ. ಸಮಕಾಲೀನ ವಿದ್ಯಮಾನಗಳು, ರಾಷ್ಟ್ರೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುವ ಉತ್ಸಾಹಿ. ಸುದೀರ್ಘ ಎರಡೂವರೆ ದಶಕಗಳ ಕಾಲ ಮುದ್ರಣ ಹಾಗೂ ಡಿಜಿಟಲ್‌ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿದ ಅನುಭವಿ. ತರಂಗ ಮತ್ತು ದಿ ಸಂಡೇ ಇಂಡಿಯನ್‌ ಸಾಪ್ತಾಹಿಕ, ಉಷಾಕಿರಣ, ಟೈಮ್ಸ್‌ ಆಫ್‌ ಇಂಡಿಯಾ ಕನ್ನಡ, ಕನ್ನಡಪ್ರಭ, ವಾರ್ತಾಭಾರತಿ ದಿನಪತ್ರಿಕೆಗಳು ಹಾಗೂ ದಿ ಸ್ಟೇಟ್‌, ಈ ದಿನ ಡಿಜಿಟಿಲ್ ಮಾಧ್ಯಮ ಸಂಸ್ಥೆಗಳಲ್ಲಿ ಸಂಪಾದಕೀಯ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಸಿನಿಮಾ, ತಂತ್ರಜ್ಞಾನ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ವರದಿ, ವಿಶ್ಲೇಷಣೆಗಳನ್ನು ಪ್ರಕಟಿಸಿದ್ದಾರೆ.