‘ಮೋದಿ ಕಹೀ ನಹೀ ಜಾಯೇಗಾ’ ಘೋಷಣೆಯ ಹೂಡಿ ಧರಿಸಿ ಪ್ರದರ್ಶಿಸಿದ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ: ಜನರ ಪ್ರತಿಕ್ರಿಯೆ ಏನು?
Photo Credit : Facebook
ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೊಟೋವೊಂದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವಿರುವ ಹೂಡಿ ಧರಿಸಿ ಭಂಡಾರಿ ಪ್ರಕಟಿಸಿರುವ ಪೋಸ್ಟ್ ಗೆ ಸಾಮಾಜಿಕ ಜಾಲತಾಣದಲ್ಲಿ ಜನರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ಮೋದಿ ಎಲ್ಲಿಯೂ ಹೋಗುವುದಿಲ್ಲ’ ಎಂಬ ಘೋಷಣೆಯನ್ನು ಉಲ್ಲೇಖಿಸಿ ಮಣಿಪುರ ಭೇಟಿ, ಪತ್ರಿಕಾಗೋಷ್ಠಿ, ವಿದೇಶ ಪ್ರವಾಸ, ಅಡುಗೆ ಅನಿಲದ ಬೆಲೆ ಏರಿಕೆ, ಅಗ್ನಿವೀರ್ ಯೋಜನೆ ಹಾಗೂ ಚುನಾವಣಾ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಕೆಲವರು ವ್ಯಂಗ್ಯಭರಿತ ಕಮೆಂಟ್ ಗಳನ್ನು ಮಾಡಿದ್ದರೆ, ಇನ್ನು ಕೆಲವರು ಮೋದಿ ಅವರ ನಾಯಕತ್ವವನ್ನು ಬೆಂಬಲಿಸಿದ್ದಾರೆ.
ನವೆಂಬರ್ 3ರಂದು ಪ್ರದೀಪ್ ಭಂಡಾರಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿರುವ ಫೊಟೋದಲ್ಲಿ ಭಂಡಾರಿ ಹಾಗೂ ಇನ್ನೊಬ್ಬರು ಕಪ್ಪು ಬಣ್ಣದ ಹೂಡಿ ಧರಿಸಿ ನಿಂತಿದ್ದಾರೆ. ಹೂಡಿಯ ಮೇಲೆ ಕೆಂಪು ಹಿನ್ನೆಲೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಹಾಗೂ ‘Modi Kahin Nahi Jaayega Bro’ (ಮೋದಿ ಎಲ್ಲಿಯೂ ಹೋಗುವುದಿಲ್ಲ ಬ್ರೋ) ಎಂಬ ಘೋಷಣೆ ಮುದ್ರಿಸಲಾಗಿದೆ. ಫೊಟೋದೊಂದಿಗೆ ‘NO CAPTION NEEDED!’ (ಯಾವುದೇ ಶೀರ್ಷಿಕೆಯ ಅಗತ್ಯವಿಲ್ಲ) ಎಂದು ಭಂಡಾರಿ ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಗೆ ಬಂದಿರುವ ಪ್ರತಿಕ್ರಿಯೆಗಳಲ್ಲಿ ಮಣಿಪುರದ ವಿಚಾರ ಪ್ರಮುಖವಾಗಿ ಪ್ರಸ್ತಾಪವಾಗಿದೆ. ‘हमें लगा था मणिपुर जाएगा?’ (ಮಣಿಪುರಕ್ಕೆ ಹೋಗುತ್ತಾರೆ ಎಂದು ನಾವು ಭಾವಿಸಿದ್ದೆವು?) ಎಂದು ಶರದ್ ಆಶಾ ಎಂಬ ಬಳಕೆದಾರರು ಪ್ರಶ್ನಿಸಿದ್ದಾರೆ. ರೋನಕ್ ಪಟೇಲ್ ಎಂಬವರು ‘Manipur bhi nai jayega bro?’ (ಮಣಿಪುರಕ್ಕೂ ಹೋಗುವುದಿಲ್ಲವೇ ಬ್ರೋ?) ಎಂದು ಕಮೆಂಟ್ ಮಾಡಿದ್ದಾರೆ.
ಪ್ರಿನ್ಸ್ ಮಿಶ್ರಾ ಎಂಬವರು ‘मणिपुर अरुणाचल भी नहीं जाएगा’ (ಮಣಿಪುರ, ಅರುಣಾಚಲಕ್ಕೂ ಹೋಗುವುದಿಲ್ಲ) ಎಂದು ಪ್ರತಿಕ್ರಿಯಿಸಿದ್ದಾರೆ. ಸ್ವರ್ಣೇಂದು ಸರ್ಕಾರ್ ಎಂಬವರು ‘Manipur jaygaaa?? Broooo’ ಎಂದು ಪ್ರಶ್ನಿಸಿದ್ದಾರೆ. ಶರತ್ ಚಂದ್ರ ಎಂಬವರು ‘Yes, Manipur kabhi nahin jayega’ ಎಂದು ಬರೆದಿದ್ದಾರೆ.
ಮಣಿಪುರದ ವಿಚಾರವನ್ನು ಪತ್ರಿಕಾಗೋಷ್ಠಿಯೊಂದಿಗೆ ಜೋಡಿಸಿರುವ ಮುಹಮ್ಮದ್ ನಯೀಮ್ ರಜಪೂತ್ ಎಂಬವರು ‘Manipur bhi, Press conference mein bhi nhi’ ಎಂದು ಕಮೆಂಟ್ ಮಾಡಿದ್ದಾರೆ. ಅಂದರೆ, ಮಣಿಪುರಕ್ಕೂ ಹೋಗುವುದಿಲ್ಲ, ಪತ್ರಿಕಾಗೋಷ್ಠಿಗೂ ಬರುವುದಿಲ್ಲ ಎಂಬುದು ಅವರ ಪ್ರತಿಕ್ರಿಯೆಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮುಕ್ತ ಪತ್ರಿಕಾಗೋಷ್ಠಿ ನಡೆಸುವ ವಿಚಾರವನ್ನೂ ಹಲವು ಬಳಕೆದಾರರು ಪ್ರಸ್ತಾಪಿಸಿದ್ದಾರೆ. ‘मोदी कभी नहीं जाएगा, प्रेस कांफ्रेंस में’ (ಮೋದಿ ಎಂದಿಗೂ ಪತ್ರಿಕಾಗೋಷ್ಠಿಗೆ ಹೋಗುವುದಿಲ್ಲ) ಎಂದು ಬಲರಾಮ್ ಸಿಂಗ್ ಎಂಬವರು ಬರೆದಿದ್ದಾರೆ. ಇದೇ ರೀತಿಯಲ್ಲಿ ರಾಕೇಶ್ ಚಂದೇಲ್ ಎಂಬವರು ‘मोदी कहीं नहीं जाएगा प्रेस कॉन्फ्रेंस में भी नहीं जाएगा’ ಎಂದು ಪ್ರತಿಕ್ರಿಯಿಸಿದ್ದಾರೆ.
ಶಿವಂ ಶ್ರೀವಾಸ್ತವ ಎಂಬವರು ‘Pradeep bhai neeche Press Conference karne likhna bhul gaye’ ಎಂದು ಕಮೆಂಟ್ ಮಾಡಿದ್ದಾರೆ. ಅಂದರೆ, ‘ಪ್ರದೀಪ್ ಭಾಯ್, ಕೆಳಗೆ ಪತ್ರಿಕಾಗೋಷ್ಠಿಗೆ ಹೋಗುವುದಿಲ್ಲ ಎಂದು ಬರೆಯಲು ಮರೆತಿದ್ದೀರಿ’ ಎಂದು ವ್ಯಂಗ್ಯವಾಡಿದ್ದಾರೆ.
ಮಿಸ್ಟರ್ ನೋ ಒನ್ ಎಂಬ ಹೆಸರಿನ ಬಳಕೆದಾರರು ‘Teleprompter ke bina aur press briefing karne kahi nahi jayega feku’ ಎಂದು ಟೀಕಿಸಿದ್ದಾರೆ. ಟೆಲಿಪ್ರಾಂಪ್ಟರ್ ಇಲ್ಲದೆ ಮಾತನಾಡಲು ಅಥವಾ ಪತ್ರಿಕಾಗೋಷ್ಠಿ ನಡೆಸಲು ಪ್ರಧಾನಿ ಮುಂದಾಗುವುದಿಲ್ಲ ಎಂಬುದು ಅವರ ಆರೋಪವಾಗಿದೆ.
ಸುಮ್ಹಾಂಗ್ ನೋಕ್ಬಿ ಎಂಬವರು ಇನ್ನಷ್ಟು ವಿವರವಾಗಿ ಪ್ರತಿಕ್ರಿಯಿಸಿದ್ದಾರೆ. ಮೋದಿ ಎಲ್ಲಿಯೂ ಹೋಗುವುದಿಲ್ಲ ಎಂದಾದರೆ ಅವರು ಪತ್ರಿಕಾಗೋಷ್ಠಿಯನ್ನು ಎದುರಿಸಬೇಕು. ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಬೇಕು. ತಮ್ಮ ನಾಯಕತ್ವದ ಬಗ್ಗೆ ವಿಶ್ವಾಸವಿದ್ದರೆ ಪತ್ರಕರ್ತರ ಪ್ರಶ್ನೆಗಳನ್ನು ಎದುರಿಸಲು ಹಿಂಜರಿಯುವುದೇಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಆದರೆ, ಪತ್ರಿಕಾಗೋಷ್ಠಿಯ ಕುರಿತ ಟೀಕೆಗಳಿಗೆ ಪ್ರಧಾನಿ ಬೆಂಬಲಿಗರೂ ಪ್ರತಿಕ್ರಿಯಿಸಿದ್ದಾರೆ. ಉಷಾ ಸಿಂಗ್ ಎಂಬವರು ಪ್ರಧಾನಿ ಪ್ರತಿದಿನ ಪತ್ರಿಕಾಗೋಷ್ಠಿ ನಡೆಸುವ ಅಗತ್ಯವಿಲ್ಲ ಎಂದು ವಾದಿಸಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನೂ ಪರಿಗಣಿಸಬೇಕು ಎಂದು ಅವರು ಕಮೆಂಟ್ ಮಾಡಿದ್ದಾರೆ. ಮನೀಶ್ ಕುಮಾರ್ ಶರಣ್ ಎಂಬವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುವ ಪತ್ರಿಕಾಗೋಷ್ಠಿಗಳ ಪ್ರಯೋಜನವೇನು ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿಯವರ ವಿದೇಶ ಪ್ರವಾಸಗಳ ಕುರಿತಾಗಿಯೂ ಹಲವು ಕಮೆಂಟ್ ಗಳು ಬಂದಿವೆ. ‘Foreign trip bhi nahi’ (ವಿದೇಶ ಪ್ರವಾಸಕ್ಕೂ ಹೋಗುವುದಿಲ್ಲವೇ?) ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಗಮಿಕ್ ಹಂಗ್ಕರ್ ಎಂಬವರು ‘Achcha hai, Videsh nahi jaane se kaafi Paisa bachch jayega, Desh ka’ ಎಂದು ಬರೆದಿದ್ದಾರೆ. ಮೋದಿ ವಿದೇಶ ಪ್ರವಾಸಕ್ಕೆ ಹೋಗದಿದ್ದರೆ ದೇಶದ ಸಾಕಷ್ಟು ಹಣ ಉಳಿಯಬಹುದು ಎಂಬುದು ಅವರ ಅಭಿಪ್ರಾಯವಾಗಿದೆ.
ಚೇತನ್ ಚಿರಾಗ್ ಎಂಬವರು ‘4 din baad hi foreign trip pe bhag jaega bhai, utaar do’ ಎಂದು ಕಮೆಂಟ್ ಮಾಡಿದ್ದಾರೆ. ನಾಲ್ಕು ದಿನಗಳ ನಂತರ ವಿದೇಶ ಪ್ರವಾಸಕ್ಕೆ ಹೋಗುತ್ತಾರೆ, ಹೂಡಿಯನ್ನು ತೆಗೆದುಬಿಡಿ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಹೆಸರನ್ನೂ ಕೆಲವು ಬಳಕೆದಾರರು ಪ್ರಸ್ತಾಪಿಸಿದ್ದಾರೆ. ‘Meloni ke pass bhi?’ (ಮೆಲೋನಿ ಅವರ ಬಳಿಗೂ ಹೋಗುವುದಿಲ್ಲವೇ?) ಎಂದು ಎರ್ ದೇಬಾಶಿಸ್ ಮೊಹಂತಿ ಪ್ರಶ್ನಿಸಿದ್ದಾರೆ. ಉತ್ತಮ್ ಮಂಡಲ್ ಎಂಬವರು ‘Modi melody leke Meloni ka pass jayega’ ಎಂದು ಹಾಸ್ಯಭರಿತ ಪ್ರತಿಕ್ರಿಯೆ ನೀಡಿದ್ದಾರೆ.
ಈ ನಡುವೆ ಅಡುಗೆ ಅನಿಲದ ಬೆಲೆ ಏರಿಕೆಯ ವಿಚಾರವನ್ನೂ ಬಳಕೆದಾರರೊಬ್ಬರು ಪ್ರಸ್ತಾಪಿಸಿದ್ದಾರೆ. ಮನೋಜ್ ಬರ್ಮನ್ ಎಂಬವರು ‘2014 सिलेंडर की कीमत 450 के करीब, 2026 सिलेंडर की कीमत लगभग 1000’ ಎಂದು ಬರೆದಿದ್ದಾರೆ. ಅಂದರೆ, 2014ರಲ್ಲಿ ಸಿಲಿಂಡರ್ ಬೆಲೆ ಸುಮಾರು 450 ರೂ. ಇತ್ತು. 2026ರಲ್ಲಿ ಅದು ಸುಮಾರು 1,000 ರೂ.ಗೆ ತಲುಪಿದೆ ಎಂದು ಅವರು ತಮ್ಮ ಕಮೆಂಟ್ ನಲ್ಲಿ ಉಲ್ಲೇಖಿಸಿದ್ದಾರೆ. ಈ ದರಗಳು ಜನರೇ ನೀಡಿರುವ ಅಂಕಿಅಂಶಗಳಾಗಿವೆ.
ಕೇಂದ್ರ ಸರಕಾರದ ಅಗ್ನಿವೀರ್ ಯೋಜನೆಯನ್ನೂ ನೆಟ್ಟಿಗರೊಬ್ಬರು ಈ ಘೋಷಣೆಯೊಂದಿಗೆ ಹೋಲಿಸಿದ್ದಾರೆ. ದೇವಿಂದರ್ ಸಿಂಗ್ ಎಂಬವರು ‘सेना में युवक अग्निवीर बन कर 4 साल में घर आ जाएगा पर मोदी जी कहीं नहीं जाएगा कॉमेडी शो चला रखा है’ ಎಂದು ಪ್ರತಿಕ್ರಿಯಿಸಿದ್ದಾರೆ.
ಅಂದರೆ, ಸೇನೆಯಲ್ಲಿ ಅಗ್ನಿವೀರನಾಗಿ ಸೇರುವ ಯುವಕ ನಾಲ್ಕು ವರ್ಷಗಳಲ್ಲಿ ಮನೆಗೆ ಮರಳುತ್ತಾನೆ. ಆದರೆ ಮೋದಿ ಎಲ್ಲಿಯೂ ಹೋಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದು ಹಾಸ್ಯ ಕಾರ್ಯಕ್ರಮದಂತಾಗಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಚುನಾವಣಾ ವ್ಯವಸ್ಥೆಯ ಕುರಿತಾಗಿಯೂ ಕಮೆಂಟ್ ಗಳು ಬಂದಿವೆ. ಅಮನ್ ದೀಪ್ ನಂದಾ ಎಂಬವರು ‘Ballot paper se karwa lo ji’ ಎಂದು ಬರೆದಿದ್ದಾರೆ. ಚುನಾವಣೆಯನ್ನು ಬ್ಯಾಲೆಟ್ ಪೇಪರ್ ಮೂಲಕ ನಡೆಸಿ ಎಂಬುದು ಅವರು ಒತ್ತಾಯಿಸಿದ್ದಾರೆ.
ಕೃಷ್ ಭಟ್ಟಾಚಾರ್ಯ ಎಂಬವರು ‘Public Vote Pe To Nahi Aayega Brooo’ ಎಂದು ಪ್ರತಿಕ್ರಿಯಿಸಿದ್ದಾರೆ. ಸಾರ್ವಜನಿಕರ ಮತದ ವಿಚಾರವನ್ನು ಪ್ರಸ್ತಾಪಿಸಿ ಅವರು ಈ ಕಮೆಂಟ್ ಮಾಡಿದ್ದಾರೆ.
ಮತ್ತೊಂದೆಡೆ, ಕೆಲವರು ಮೋದಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕುರಿತು ಪ್ರತಿಕ್ರಿಯಿಸಿದ್ದಾರೆ. ‘Kahi nahi jayega bina hisaab diye’ (ಲೆಕ್ಕ ಕೊಡದೆ ಎಲ್ಲಿಯೂ ಹೋಗುವುದಿಲ್ಲ) ಎಂದು ವಿಪಿನ್ ನರಂಗ್ ಎಂಬವರು ಬರೆದಿದ್ದಾರೆ. ಸೈಯದ್ ಜಮಾಲ್ ಹೈದರ್ ನಖ್ವಿ ಎಂಬವರು ‘जाएगा कहां जाने से पहले हिसाब देना होगा ऐसे नहीं जाने देंगे’ ಎಂದು ಕಮೆಂಟ್ ಮಾಡಿದ್ದಾರೆ. ಎಲ್ಲಿಗೆ ಹೋಗುತ್ತಾರೆ? ಹೋಗುವ ಮೊದಲು ಲೆಕ್ಕ ಕೊಡಬೇಕು. ಹಾಗೆಯೇ ಹೋಗಲು ಬಿಡುವುದಿಲ್ಲ ಎಂಬುದು ಅವರ ಪ್ರತಿಕ್ರಿಯೆಯಾಗಿದೆ.
ಸಂಭಿತ್ ಆಚಾರ್ಯ ಎಂಬವರು ‘Jaega to sirf Jail me’ (ಹೋಗುವುದಾದರೆ ಜೈಲಿಗೆ ಮಾತ್ರ) ಎಂದು ಬರೆದಿದ್ದಾರೆ. ರಶೀದ್ ಪಾಷಾ ಎಂಬವರು ‘Srif Jail jayinge’ ಎಂದು ಪ್ರತಿಕ್ರಿಯಿಸಿದ್ದಾರೆ. ಮನೀಶ್ ಅಂಡ್ಲೇ ಎಂಬವರು ‘तिहाड तो जायेगा’ (ತಿಹಾರ್ ಗೆ ಹೋಗುತ್ತಾರೆ) ಎಂದು ಕಮೆಂಟ್ ಮಾಡಿದ್ದಾರೆ.
‘जवाब लिए बिना तो हम जाने भी नहीं देंगे’ (ಉತ್ತರ ಪಡೆಯದೆ ನಾವು ಹೋಗಲು ಬಿಡುವುದಿಲ್ಲ) ಎಂದು ಚಂದನ್ ಮಹೇಶ್ವರಿ ಎಂಬವರು ಪ್ರತಿಕ್ರಿಯಿಸಿದ್ದಾರೆ. ಸುಜೋಯ್ ಭಾದುರಿ ಎಂಬವರು ‘Jane bhi nahin denge chori ka hisaab jo Dena hain’ ಎಂದು ಬರೆದಿದ್ದಾರೆ. ಕಳ್ಳತನದ ಲೆಕ್ಕ ಕೊಡಬೇಕಾಗಿರುವುದರಿಂದ ಹೋಗಲು ಬಿಡುವುದಿಲ್ಲ ಎಂಬುದು ಅವರ ಆರೋಪವಾಗಿದೆ.
ಈ ನಡುವೆ ಅಂಕಿತಾ ಭಂಡಾರಿ ಪ್ರಕರಣದ ವಿಚಾರವನ್ನೂ ಬಳಕೆದಾರರೊಬ್ಬರು ಪ್ರಸ್ತಾಪಿಸಿದ್ದಾರೆ. ವಿಜಯ್ ಬನ್ಸಾಲ್ ಎಂಬವರು ‘अंकिता भंडारी को न्याय दिलाने के लिए भी कुछ करेंगे या नहीं?’ ಎಂದು ಪ್ರಶ್ನಿಸಿದ್ದಾರೆ. ಅಂಕಿತಾ ಭಂಡಾರಿಗೆ ನ್ಯಾಯ ದೊರಕಿಸಲು ಏನಾದರೂ ಕ್ರಮ ಕೈಗೊಳ್ಳುತ್ತಾರೆಯೇ ಎಂಬುದು ಅವರ ಪ್ರಶ್ನೆಯಾಗಿದೆ.
ಕೆಲವು ಜನರು ಹೂಡಿಯ ಮೇಲಿರುವ ಘೋಷಣೆಯನ್ನು ಅದರ ನೇರ ಅರ್ಥದಲ್ಲಿಯೇ ತೆಗೆದುಕೊಂಡು ಹಾಸ್ಯಭರಿತ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ‘Washroom bhi nahi??’ (ಶೌಚಾಲಯಕ್ಕೂ ಹೋಗುವುದಿಲ್ಲವೇ?) ಎಂದು ಅಥರ್ ಜವೈದ್ ಎಂಬವರು ಪ್ರಶ್ನಿಸಿದ್ದಾರೆ. ‘Toilet main toh jayenge jarur modiji’ ಎಂದು ಸನಮ್ ಸಂಗ್ಮಾ ಎಂಬವರು ಬರೆದಿದ್ದಾರೆ. ಮೋದಿ ಶೌಚಾಲಯಕ್ಕಾದರೂ ಹೋಗುತ್ತಾರೆ ಎಂಬುದು ಅವರ ಪ್ರತಿಕ್ರಿಯೆಯಾಗಿದೆ.
‘Souchalaya ka kya hoga’ (ಶೌಚಾಲಯದ ಗತಿಯೇನು?) ಎಂದು ಸಂದೀಪ್ ಮಹಾಲಿ ಪ್ರಶ್ನಿಸಿದ್ದಾರೆ. ಇದೇ ರೀತಿಯ ಹಲವು ಕಮೆಂಟ್ ಗಳು ಪೋಸ್ಟ್ ನ ಕೆಳಗೆ ಕಂಡುಬಂದಿವೆ.
ಕೆಲವರು ಪ್ರದೀಪ್ ಭಂಡಾರಿ ಅವರ ಪೋಸ್ಟ್ ಪ್ರಕಟಿಸುವ ಉದ್ದೇಶವನ್ನೇ ಪ್ರಶ್ನಿಸಿದ್ದಾರೆ. ‘Visibility ke liye kuch bhi’ (ಗಮನ ಸೆಳೆಯಲು ಏನು ಬೇಕಾದರೂ ಮಾಡುತ್ತಾರೆ) ಎಂದು ಸಂತೋಷ್ ಚೋಲಕ್ಕಲ್ ಎಂಬವರು ಪ್ರತಿಕ್ರಿಯಿಸಿದ್ದಾರೆ. ‘Batane ki kya zaroorat hai bhai’ (ಇದನ್ನು ಹೇಳುವ ಅಗತ್ಯವೇನಿದೆ ಭಾಯ್?) ಎಂದು ಪ್ರವೀಣ್ ಕುಲಕರ್ಣಿ ಎಂಬವರು ಪ್ರಶ್ನಿಸಿದ್ದಾರೆ.
ಇನ್ನೊಂದೆಡೆ, ಮೋದಿ ಅವರ ಪರವಾಗಿಯೂ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ರಾಜೀವ್ ರಂಜನ್ ಎಂಬವರು ‘आपके जैसा न कोई था, न कोई है और न ही कोई होगा आप पर देश को गर्व है मोदीजी’ ಎಂದು ಬರೆದಿದ್ದಾರೆ. ನಿಮ್ಮಂತಹವರು ಹಿಂದೆ ಯಾರೂ ಇರಲಿಲ್ಲ, ಈಗಲೂ ಇಲ್ಲ, ಮುಂದೆಯೂ ಇರುವುದಿಲ್ಲ. ದೇಶಕ್ಕೆ ನಿಮ್ಮ ಬಗ್ಗೆ ಹೆಮ್ಮೆಯಿದೆ ಮೋದಿ ಜೀ ಎಂಬುದು ಅವರ ಅಭಿಪ್ರಾಯವಾಗಿದೆ.
ಹಿಮಾಂಶು ಪಟೇಲ್ ಎಂಬವರು ‘2029 Fir se Modiji’ (2029ರಲ್ಲಿ ಮತ್ತೆ ಮೋದಿ ಜೀ) ಎಂದು ಕಮೆಂಟ್ ಮಾಡಿದ್ದಾರೆ. ಇಂದಿರಾ ರೈ ಪಾಲ್ ಎಂಬವರು ‘बिल्कुल, अभी देश को मोदी की जरूरत है’ (ಖಂಡಿತವಾಗಿಯೂ, ಈಗ ದೇಶಕ್ಕೆ ಮೋದಿ ಅವರ ಅಗತ್ಯವಿದೆ) ಎಂದು ಪ್ರತಿಕ್ರಿಯಿಸಿದ್ದಾರೆ.
ದೀಪಕ್ ಅವಸ್ಥಿ ಸೂರ್ಯ ಎಂಬವರು ‘मोदी कहीं नहीं जाएगा Broo’ ಎಂದು ಮೂಲ ಘೋಷಣೆಯನ್ನೇ ಪುನರುಚ್ಚರಿಸಿದ್ದಾರೆ. ಇನ್ನೂ ಕೆಲವು ಬಳಕೆದಾರರು ಮೋದಿ ಅವರ ನಾಯಕತ್ವ ಮುಂದುವರಿಯಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಪ್ರಧಾನಿಯವರ ಪರ ಮತ್ತು ವಿರೋಧದ ಪ್ರತಿಕ್ರಿಯೆಗಳ ನಡುವೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರೂ ಕೆಲವು ಕಮೆಂಟ್ ಗಳಲ್ಲಿ ಪ್ರಸ್ತಾಪವಾಗಿದೆ. ಫಿರೋಜ್ ಖಾನ್ ಎಂಬವರು ‘Huge respect for shri shri kharge ji’ ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು ರಾಹುಲ್ ಗಾಂಧಿ ಅವರು ಮೋದಿ ಅವರನ್ನು ಎಲ್ಲಿಯೂ ಹೋಗಲು ಬಿಡುವುದಿಲ್ಲ ಎಂದು ಹೇಳಿರುವುದಾಗಿ ತಮ್ಮ ಕಮೆಂಟ್ ನಲ್ಲಿ ಉಲ್ಲೇಖಿಸಿದ್ದಾರೆ.