ಯುರೋಪಿಯನ್ ಫುಟ್ಬಾಲ್ ಅಂಗಣ ತಲುಪಿದ ರವಿ ಕಿಶನ್ ಮೀಮ್!

ರವಿ ಕಿಶನ್ ಮೀಮ್ ಗಳಿಂದ ತುಂಬಿದ Instagram ಫೀಡ್‌ ಗಳು

Update: 2026-08-05 18:22 IST

Screengrab : thefamoussingh \ instagram.com

ಭೋಜ್ಪುರಿ ಸಿನಿಮಾಗಳ ಪಾತ್ರಗಳಿಗೆ ವ್ಯಾಪಕವಾಗಿ ಜನಪ್ರಿಯರಾಗಿರುವ ರವಿ ಕಿಶನ್ ಇತ್ತೀಚೆಗೆ ತಮ್ಮ ವಿಲಕ್ಷಣ ಹೇಳಿಕೆ, ಚೇಷ್ಟೆಗಳಿಂದಾಗಿ ವೈರಲ್ ಮೀಮ್ ಗೆ ಗುರಿಯಾಗಿದ್ದಾರೆ.

ನಟ, ರಾಜಕಾರಣಿ ರವಿ ಕಿಶನ್ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಚರ್ಚೆಯ ವಿಷಯವಾಗಿದ್ದಾರೆ. ಭೋಜ್ಪುರಿ ಸಿನಿಮಾಗಳ ಪಾತ್ರಗಳಿಗೆ ವ್ಯಾಪಕವಾಗಿ ಜನಪ್ರಿಯರಾಗಿರುವ ರವಿ ಕಿಶನ್, ಬಾಲಿವುಡ್ ನಲ್ಲೂ ಅಭಿನಯಿಸಿ ಅಭಿಮಾನಿಗಳನ್ನು ಮೆಚ್ಚಿಸಿದ್ದಾರೆ.

‘ಮುಕ್ಕಾಬಾಜ್’ನಿಂದ ‘ಲಾಪತಾ ಲೇಡೀಸ್’ವರೆಗೆ 57 ವರ್ಷದ ರವಿ ತಾವು ನಿರ್ವಹಿಸಿದ ಪಾತ್ರಗಳಿಗೆ ಹೆಸರಾಗಿದ್ದಾರೆ. ಆದರೆ ಇತ್ತೀಚೆಗೆ ಅವರ ವಿಲಕ್ಷಣ ಹೇಳಿಕೆ, ಚೇಷ್ಟೆಗಳಿಂದಾಗಿ ವೈರಲ್ ಮೀಮ್ಗೆ ಗುರಿಯಾಗಿದ್ದಾರೆ. ಇನ್ಸ್ಟಾಗ್ರಾಂ ಫೀಡ್ಗಳು ರವಿ ಕಿಶನ್ ಮೀಮ್ಗಳಿಂದ ತುಂಬಿವೆ. ಈ ಮೀಮ್ಗಳು ಯುರೋಪಿನ ಫುಟ್ಬಾಲ್ ಜಗತ್ತನ್ನೂ ತಲುಪಿವೆ!

Full View

ಬಹಳ ಪ್ರಸಿದ್ಧ ಫುಟ್ಬಾಲ್ ಕ್ಲಬ್ ಗಳಾದ ಜುವೆಂಟಸ್ ಮತ್ತು ಬೊರುಸ್ಸಿಯ ಡಾರ್ಟ್ಮಂಡ್ ಇತ್ತೀಚೆಗೆ ರವಿ ಕಿಶನ್ ಮೀಮ್ ಟ್ರೆಂಡ್ ಗಳಲ್ಲಿ ಭಾಗಿಯಾಗಿವೆ. ಎರಡೂ ಕ್ಲಬ್ ಗಳು ತಮ್ಮ ಆಟಗಾರರನ್ನು ಒಳಗೊಂಡ ವೀಡಿಯೋ ಹಂಚಿಕೊಂಡಿದ್ದು, ಹಾಸ್ಯಮಯ ರವಿ ಕಿಶನ್ ಮೀಮ್ ಟ್ವಿಸ್ಟ್ ಕೊಟ್ಟಿದ್ದಾರೆ. ಮುಖ್ಯವಾಗಿ “ಹೆಡ್ಕ್ವಾರ್ಟರ್ಸ್ ನಿಂದ ಕರೆ ಬಂದಿದೆ” ಎನ್ನುವ ಅವರ ಹೇಳಿಕೆ ಮೀಮ್ ಲೋಕದಲ್ಲಿ ವೈರಲ್ ಆಗುತ್ತಿದೆ. ಜುವೆಂಟಸ್ ಈ ಹೇಳಿಕೆಯನ್ನೇ ಬಳಸಿಕೊಂಡು ಇನ್ಸ್ಟಾಗ್ರಾಮ್ ಫೀಡ್ ತಯಾರಿಸಿದೆ.

Full View

ಬಿಜೆಪಿ ಸಂಸದರೂ ಆಗಿರುವ ರವಿ ಕಿಶನ್ ಇತ್ತೀಚೆಗೆ ಅಮೆಝಾನ್ ಪ್ರೈಮ್ ನ ವೀಡಿಯೋದಲ್ಲಿ ‘ದಿ ಅಲೈಯನ್ಸ್’ ರಿಯಾಲಿಟಿ ಶೋನಲ್ಲಿ ಮಗಳು ರಿವಾ ಕಿಶನ್ ಜೊತೆಗೆ ಭಾಗವಹಿಸಿದ್ದರು. ಆದರೆ ತಮ್ಮ ಕ್ಷೇತ್ರ ಗೋರಖ್ಪುರಕ್ಕೆ ಭೇಟಿ ನೀಡಲು ರವಿ ಅವರನ್ನು ಕರೆಸಿದ ಕಾರಣ ಕಾರ್ಯಕ್ರಮದಲ್ಲಿ ಅವರ ಪ್ರಯಾಣ ಮೊಟಕುಗೊಳಿಸಲಾಯಿತು. ಭಾಗವಹಿಸಿದ ಇತರರಿಗೆ ಅವರು ತಮ್ಮ ನಿರ್ಗಮನದ ಬಗ್ಗೆ ತಿಳಿಸುತ್ತಾ, “ಈ ಸಮಯದಲ್ಲಿ ದೇಶದ ಕರ್ತವ್ಯಕ್ಕೆ ಕರೆಯಲಾಗುತ್ತಿದೆ. ಹೀಗಾಗಿ ಈಗಲೇ ಹೆಡ್ಕ್ವಾರ್ಟರ್ಸ್ ಗೆ ಹೋಗಬೇಕಾಗುತ್ತದೆ” (Aap ko isi waqt aap ke desh ki duty ke liye bulaya jaa raha hai aur aap ko isi waqt headquarters ko chhodna hoga.) ಎಂದು ಹೇಳಿದ್ದರು. ಈ ಹೇಳಿಕೆ ವೈರಲ್ ಮೀಮ್ ಗಳಿಗೆ ಕಾರಣವಾಗಿದೆ.

Full View

ಅವರ ಮತ್ತೊಂದು ವೈರಲ್ ಹೇಳಿಕೆಯೂ ಮೀಮ್ ಆಗಿ ಬದಲಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಮನೆಯಿಂದ ಕೆಲಸ ಮಾಡುವುದು ಬಹಳ ಮುಖ್ಯವಾಗಿದೆ ಎಂದು ಹೇಳುವ ಪ್ರಯತ್ನದಲ್ಲಿ ತಪ್ಪಿ ಅವರು, “ಇತ್ತೀಚಿನ ದಿನಗಳಲ್ಲಿ ಕೆಲಸಕ್ಕಿಂತ ಮನೆ ಬಹಳ ಮುಖ್ಯ” (Home from Work is very important these days) ಎನ್ನುವ ಹೇಳಿಕೆ ನೀಡಿದ್ದರು. ಈ ಹೇಳಿಕೆಯೂ ಮೀಮ್ ಆಗಿ ಬದಲಾಗಿದೆ.

ತಮ್ಮ ಬಗ್ಗೆ ಹೀಗೆ ವೈರಲ್ ಮೀಮ್ಗಳು ತಯಾರಾಗುತ್ತಿರುವ ಬಗ್ಗೆ ಇತ್ತೀಚೆಗೆ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, “ಏನಾಗುತ್ತಿದೆ” ಎಂದು ಯೋಚಿಸುತ್ತಾ ಹುಚ್ಚನಾಗುತ್ತಿದ್ದೇನೆ ಎಂದು ಹೇಳಿರುವುದೂ ವೈರಲ್ ಆಗಿದೆ. “ನಾನು ಭಾರತದಲ್ಲಿ ಅತ್ಯಂತ ವೈರಲ್ ಆಗಿರುವ ವ್ಯಕ್ತಿ ಎಂದು ಇತ್ತೀಚೆಗೆ ಯಾರೋ ನನಗೆ ಹೇಳಿದರು. ನನ್ನ ಬಗ್ಗೆ ಜನರು ಹೇಳಿದ್ದನ್ನೆಲ್ಲ ಬರೆಯಲಾಗುತ್ತಿದೆ. ನನ್ನ ಕ್ಲಿಪ್ಗಳನ್ನು ನನಗೆ ಕಳುಹಿಸುತ್ತಲೇ ಇರುತ್ತಾರೆ. ನಾನು ಕೂಡ ಕೆಲವೊಮ್ಮೆ “ಏನಾಗುತ್ತಿದೆ?” ಎಂದು ಯೋಚಿಸುತ್ತಾ ಹುಚ್ಚನಾಗುತ್ತಿದ್ದೇನೆ” ಎಂದು ಪ್ರತಿಕ್ರಿಯಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News