ಸೈದಾಪೂರ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸದೆ ಸರಕಾರದಿಂದ ನಿರ್ಲಕ್ಷ್ಯ : ಕರವೇ ಆಕ್ರೋಶ
ಯಾದಗಿರಿ: ಸರಕಾರ ಸೈದಾಪೂರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಘೋಷಣೆ ಮಾಡದೆ ಮಲತಾಯಿ ಧೋರಣೆ ಅನುಸರಿಸಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿಎನ್. ಭೀಮುನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಟಿಎನ್. ಭೀಮುನಾಯಕ್, ಜಿಲ್ಲೆಯಲ್ಲಿ ದೋರನಳ್ಳಿ, ಸಗರ ಹಾಗೂ ವಡಗೇರಿ ಗ್ರಾಪಂ ಗಳನ್ನು ಪಟ್ಟಣ ಪಂಚಾಯಿತಿಯಾಗಿಸಿದ್ದಾರೆ. ಆದರೆ ಸೈದಾಪೂರ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಈಗಾಗಲೇ ಎಲ್ಲ ರೀತಿಯಿಂದಲೂ ಬೆಳವಣಿಗೆ ಕಾಣುತ್ತಿರುವ ಪಟ್ಟಣಕ್ಕೆ ಪುರಸಭೆ ಆಗುವ ಎಲ್ಲಾ ಅರ್ಹತೆಗಳು ಇದ್ದರೂ, ನಿರ್ಲಕ್ಷ್ಯವಹಿಸಿ ತಾರತಮ್ಯ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೈದಾಪೂರದಲ್ಲಿ 20 ರಿಂದ 25 ಸಾವಿರ ಜನ ಸಂಖ್ಯೆ ಇದ್ದು, ಪಕ್ಕದಲ್ಲಿಯೇ ಅತಿದೊಡ್ಡ ಕೈಗಾರಿಕೆ ಕೇಂದ್ರವಾದ ಕಡೆಚೂರು ಬಾಡಿಯಾಲ್ ಕೈಗಾರಿಕಾ ವಲಯವಾಗಿದೆ. ಭವಿಷ್ಯದಲ್ಲಿ ಅತ್ಯುತ್ತಮ ನಗರವಾಗುವ ಲಕ್ಷಣ ಹೊಂದಿದೆ. ಈ ಹಿನ್ನೆಲೆಯಲ್ಲಿ ಸರಕಾರ ಮುತುವರ್ಜಿ ವಹಿಸಿ ಸೈದಾಪೂರವನ್ನು ಮೇಲ್ದರ್ಜೆಗೇರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ಪ್ರಕಾಶ್ ಪಾಟೀಲ್ ಜೈಗ್ರಾಮ್, ಅಂಬ್ರೇಷ್ ಹತ್ತಿಮನಿ, ಸುರೇಶ ಬೆಳಗುಂದಿ, ಸಾಗರ ಹುಲೇರಿ, ಬಸ್ಸು ನಾಯಕ ಸೈದಾಪೂರ, ಸೈದಪ್ಪ ಬಾಂಬೆ, ಮೌನೇಶ ಮಾಧ್ವಾರ, ಮಹೇಶ ಸೈದಾಪೂರಮ ಮಲ್ಲು ಬಾಡಿಯಾಲ, ಸೇರಿದಂತೆ ಹಲವರು ಉಪಸ್ಥಿತರಿದ್ದರು.